Advertisement

ಪುಣೆ: ಲಾಕ್ಡೌನ್ ಉಲ್ಲಂಘನೆ 30 ಸಾವಿರ ಪ್ರಕರಣ

03:07 PM Jul 20, 2020 | Suhan S |

ಪುಣೆ, ಜು. 19: ಪಿಂಪ್ರಿ-ಚಿಂಚ್ವಾಡ್‌ ಪೊಲೀಸರು ಲಾಕ್‌ಡೌನ್‌ ಉಲ್ಲಂಘನೆಗೆ ಸಂಬಂಸಿದಂತೆ 30,504 ಪ್ರಕರಣಗಳನ್ನು ದಾಖಲಿಸಿಕೊಂಡು, 125 ಮಂದಿಯನ್ನು ಬಂಧಿಸಿದ್ದಾರೆ.

Advertisement

ಜಿಲ್ಲಾಡಳಿತ 10 ದಿನಗಳ ಲಾಕ್‌ ಡೌನ್‌ ಜಾರಿಗೊಳಿಸಿದ ಬಳಿಕ ಪುಣೆ ಪೊಲೀಸರು ಸೋಮವಾರ ಮಧ್ಯರಾತ್ರಿಯಿಂದ ಲಾಕ್‌ ಡೌನ್‌ ಉಲ್ಲಂಘಿಸಿದವರ ವಿರುದ್ಧ 1,613 ಪ್ರಕರಣಗಳನ್ನು ದಾಖಲಿಸಿದ್ದಾರೆ. ಒಟ್ಟಾರೆಯಾಗಿ ಪುಣೆ ಮಹಾನಗರ ಪಾಲಿಕೆ ಮತ್ತು ಪಿಂಪ್ರಿ-ಚಿಂಚ್ವಾಡ್‌ ಮಹಾನಗರ ಪಾಲಿಕೆಯ ಒಳಪಟ್ಟಂತೆ ಲಾಕ್‌ ಡೌನ್‌ ಉಲ್ಲಂಘಿಸುವವರ ವಿರುದ್ಧ 32,117 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಗಣನೆಗೆ ತೆಗೆದುಕೊಂಡು ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಪಿಸಿಎಂಸಿ ಪೊಲೀಸ್‌ ಆಯುಕ್ತ ಸಂದೀಪ್‌ ಬಿಷ್ಣೋಯ್‌ ಆದೇಶ ಹೊರಡಿಸಿದ್ದಾರೆ. ಲಾಕ್‌ ಡೌನ್‌ ಅವ ಯಲ್ಲಿ ಮನೆಯೊಳಗೆ ಇರಲು ನಾವು ನಿವಾಸಿಗಳಿಗೆ ಸಲಹೆ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಪಿಸಿಎಂಸಿ ಪೊಲೀಸರು 1.38 ಲಕ್ಷ ರೂ.ಗಳ ದಂಡವನ್ನು ವಸೂಲಿ ಮಾಡಿರುವುದಲ್ಲದೆ, ಇಲ್ಲಿಯವರೆಗೆ 2,611 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದ್ದು, ನಾಗರಿಕರಿಗೆ ಜೀವನವನ್ನು ಸುರಕ್ಷಿತವಾಗಿಸುವ ಉದ್ದೇಶದಿಂದ ಕಠಿನ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ (ಅಪರಾಧ) ಬಚ್ಚನ್‌ ಸಿಂಗ್‌ ಹೇಳಿದ್ದಾರೆ. ನಾವು ನಾಗರಿಕರಿಂದ ಉತ್ತಮ ಸಹಕಾರವನ್ನು ಪಡೆದಿದ್ದೇವೆ. ವೈದ್ಯಕೀಯ ಮತ್ತು ಇತರ ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ ಅವರು ತಮ್ಮ ನಿವಾಸದಿಂದ ಹೊರಬರಬಾರದು ಎಂದು ಎಲ್ಲರಿಗೂ ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next