Advertisement
ಸೆ. 13ರಂದು ಪುಣೆಯ ಡಾ| ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಂಗಣದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ದಶಮಾನೋತ್ಸವದ ಅಂಗವಾಗಿ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ನಿರ್ದೇಶನದಲ್ಲಿ ಕನ್ನಡಿಗ ಪತ್ರಕರ್ತರ ಸಂಘದ ಸಕ್ರಿಯ ಸದಸ್ಯರಾದ ಕಿರಣ್ ಬಿ. ರೈ ಕರ್ನೂರು ಸಂಯೋಜನೆಯಲ್ಲಿ ಮತ್ತು ಹರೀಶ್ ಮೂಡಬಿದ್ರೆ ಅವರ ಸಂಪೂರ್ಣ ಸಹಕಾರದೊಂದಿಗೆ ಪ್ರದರ್ಶನಗೊಂಡ ಮಹಿಷಾಸುರ ಮರ್ದಿನಿ ಯಕ್ಷಗಾನ ಪ್ರದರ್ಶನಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡಿದ ಅವರು, ಪತ್ರಕರ್ತರದ್ದು ಬಹಳ ಒತ್ತಡದ ಕೆಲಸ. ಸ್ವಲ್ಪ ಎಡವಿದರೂ ಜನರಿಂದ ದೂಷಣೆಗೆ ಒಳಗಾಗುತ್ತಾರೆ. ಯಾರನ್ನೂ ಕಡೆಗಣಿಸಬೇಕು ಅಥವಾ ಅವಮಾನಿಸಬೇಕು ಎಂಬ ಉದ್ದೇಶ ಸರ್ವಥಾ ಪತ್ರಕರ್ತರಲ್ಲಿ ಇಲ್ಲ. ಸಾಮಾಜಿಕ ಜವಾಬ್ದಾರಿ ಎಂಬಂತೆ ಕರ್ತವ್ಯ ನಿಷ್ಠೆಯಿಂದ ಪತ್ರಕರ್ತರು ಕಾರ್ಯ ನಿರ್ವಹಿಸುತ್ತಾರೆ. ಒತ್ತಡದ ಸನ್ನಿವೇಶದಲ್ಲಿ ತಪ್ಪುಗಳಾಗುವುದು ಸಹಜ. ಇದನ್ನು ಸಮಚಿತ್ತದಲ್ಲಿ ಸ್ವೀಕರಿಸಿ ಮುನ್ನಡೆಯಬೇಕಾಗಿದೆ. ಸಂಘದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿರುವ ನನಗೂ ಇದರ ಅನುಭವವಿದೆ. ಸಂಘ-ಸಂಸ್ಥೆಗಳ ಯಶಸ್ಸಿನಲ್ಲಿ ಪತ್ರಿಕೆ ಹಾಗೂ ಪತ್ರಕರ್ತರ ಪಾತ್ರ ಮಹತ್ತರವಾಗಿದೆ. ಆದುದರಿಂದ ಪತ್ರಕರ್ತರನ್ನು ಗೌರವದಿಂದ ಕಾಣುವುದು ನಮ್ಮ ಕರ್ತವ್ಯವಾಗಿದೆ. 365 ದಿನಗಳೂ ಚಟುವಟಿಕೆಯಿಂದಿರುವ ಪತ್ರ ಕರ್ತರು ಯಕ್ಷಗಾನ ಕಲೆಯನ್ನು ಕಲಿತು ಕಾಲಿಗೆ ಗೆಜ್ಜೆ ಕಟ್ಟಿ ಕಲಾಸೇವೆ ಯನ್ನು ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಪತ್ರಕರ್ತರ ಸಂಘಕ್ಕೆ ಸಮಸ್ತ ಪುಣೆ ಕನ್ನಡಿಗರ ವತಿಯಿಂದ ಶುಭವನ್ನು ಹಾರೈಸುತ್ತಾ ಪತ್ರಕರ್ತರ ಬೆಂಬಲಕ್ಕೆ ಸದಾ ನಾವಿದ್ದೇವೆ ಎಂದರು.
Related Articles
Advertisement
ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಗಣೇಶ್ ಪೂಂಜ ಮಾತನಾಡಿ, ಸಮಾಜದ ಹಿತಚಿಂತನೆಯಿಂದ ಕಾರ್ಯನಿರ್ವಹಿಸುವ ಪತ್ರಕರ್ತರು ಹಾಗೂ ಕಲಾವಿದರನ್ನು ಗೌರವದಿಂದ ಕಾಣುವುದು ನಮ್ಮ ಕರ್ತವ್ಯವಾಗಿದೆ. ಆ ಉದ್ದೇಶದಿಂದ ನಾವಿಲ್ಲಿ ಸೇರಿದ್ದೇವೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಕನ್ನಡಿಗ ಪತ್ರಕರ್ತರ ಸಂಘಕ್ಕೆ ಶುಭಾಶಯಗಳು ಎಂದರು.
ವೇದಿಕೆಯಲ್ಲಿ ಸ್ವರಾಜ್ ಕ್ರೆಡಿಟ್ ಸೊಸೈಟಿ ಪುಣೆ -ಮುಂಬಯಿ -ಉಡುಪಿ ಇದರ ಅಧ್ಯಕ್ಷ ಪುರಂದರ ಶೆಟ್ಟಿ ಉಪಸ್ಥಿತರಿದ್ದರು. ಅತಿಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಗಣ್ಯರನ್ನು ಸತ್ಕರಿಸಲಾಯಿತು.
ಅತಿಥಿಗಳನ್ನು ಕಲಾವಿದರಾದ ಮದಂಗಲ್ಲು ಆನಂದ ಭಟ್, ವಿಕೇಶ್ ರೈ ಶೇಣಿ, ಸುದರ್ಶನ್ ಪೂಜಾರಿ, ವಿಶ್ವನಾಥ್ ಶೆಟ್ಟಿ ಹಾಗೂ ಸಂಯೋಜಕರು ಗೌರವಿಸಿದರು. ಪುಣೆಯ ಪತ್ರಕರ್ತರಾದ ಹರೀಶ್ ಮೂಡಬಿದ್ರೆ ಸ್ವಾಗತಿಸಿದರು. ಕಿರಣ್ ಬಿ. ರೈ ಕರ್ನೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಆ ಬಳಿಕ ಪತ್ರಕರ್ತರ ಸಂಘದ ಸದಸ್ಯರಿಂದ ಮಹಿಷಾಸುರ ಮರ್ದಿನಿ ಯಕ್ಷಗಾನ ಪ್ರದರ್ಶನಗೊಂಡಿತು. ಕಲಾವಿದರನ್ನು ಗೌರವಿಸಲಾಯಿತು. ಪ್ರದರ್ಶನದ ಯಶಸ್ಸಿಗೆ ಘಾಟ್‌ಕೋಪರ್ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯ ಕಲಾವಿದರು, ಹವ್ಯಾಸಿ ಕಲಾವೃಂದ ಪಿಂಪ್ರಿ ಚಿಂಚಾÌಡ್, ಕನ್ನಡ ಸಂಘ ಪುಣೆ, ಶ್ರೀಧರ ಶೆಟ್ಟಿ ಕÇÉಾಡಿ, ಮನೋಹರ ಶೆಟ್ಟಿ, ನಿತಿನ್ ಶೆಟ್ಟಿ ನಿಟ್ಟೆ, ಜಯ ಶೆಟ್ಟಿ ರೆಂಜಾಳ ಮೊದಲಾದವರು ಸಹಕರಿಸಿದರು.
ಕನ್ನಡವನ್ನು ಕೇವಲ ನುಡಿಯಾಗಿಸದೆ ನಡೆಯಾಗಿ ನೋಡುವ ನೆಲೆಯಲ್ಲಿ ಸಾಹಿತ್ಯ, ಸಂಸ್ಕೃತಿಯಂತೆಯೇ ಪತ್ರಿಕೋದ್ಯಮವೂ ಹೊರನಾಡಿನಲ್ಲಿ ಕನ್ನಡದ ಅಸ್ಮಿತೆಗೆ ಕಾರಣವಾಗಿದೆ. ಭಾಷೆ, ಸಂಸ್ಕೃತಿಯನ್ನು ಬೆಳೆಸುವ ಕಾಯಕವನ್ನು ಪುಣೆ ಕನ್ನಡಿಗರು ಮಾಡುತ್ತಿರುವಿರಿ. ಪತ್ರಕರ್ತರ ಸಂಘದ ಯಕ್ಷ ಸಂಭ್ರಮದ ಮೂಲಕ ರಂಗ-ಸಂಘವನ್ನು ನಿರ್ಮಿಸಿ ಈ ನಗರಕ್ಕೆ ಭಾಷೆ ಹಾಗೂ ಕಲೆಯ ರಂಗು ಹೊದಿಸಿದ್ದೀರಿ. ಅಲ್ಲದೆ ಬರವಣಿಗೆಯ ಕಾಯಕದಲ್ಲಿರುವ ಪತ್ರಕರ್ತರ ಕಲಾಸೇವೆಗೆ ಅವಕಾಶ ನೀಡಿ ಪುಣೆಯ ಕಲಾಭಿಮಾನಿಗಳಿಗೆ ಯಕ್ಷಗಾನವನ್ನು ಸವಿಯುವ ಭಾಗ್ಯವನ್ನು ಒದಗಿಸಿದ್ದೀರಿ. ನಿಮಗೆ ಕನ್ನಡಿಗ ಪತ್ರಕರ್ತರ ಸಂಘ ಋಣಿಯಾಗಿದೆ .-ದಯಾಸಾಗರ್ ಚೌಟ,
ಉಪಾಧ್ಯಕ್ಷರು : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಪತ್ರಕರ್ತರಲ್ಲಿ ಶಿಸ್ತು ಹಾಗೂ ಸಮಯಪ್ರಜ್ಞೆ ಅತ್ಯಗತ್ಯವಾಗಿದ್ದು ಬದ್ಧತೆಯೊಂದಿಗೆ ಮುನ್ನಡೆದಾಗ ಪ್ರತಿಷ್ಠೆ ಹಾಗೂ ಗೌರವಕ್ಕೆ ಪಾತ್ರರಾಗುತ್ತಾರೆ. ನಮ್ಮಲ್ಲಿನ ಅನೇಕ ಸಂಘ ಸಂಸ್ಥೆಗಳಲ್ಲಿ ಮುಖ್ಯಸ್ಥರಾಗಲಿ, ದಾನಿಗಳು, ಹಿತೈಷಿಗಳಲ್ಲಿ ಪತ್ರಿಕೋದ್ಯಮದ ಬಗ್ಗೆ ಅರಿವು ಇಲ್ಲದಾಗಿದೆ. ಇದರಿಂದ ಕಾರ್ಯನಿರತ ಪತ್ರಕರ್ತರು ಒತ್ತಡಕ್ಕೆ ಸಿಲುಕಿ ಸೇವಾನಿರತರಾಗಬೇಕಾಗಿರುವುದು ಪತ್ರಕರ್ತನ ದುರಂತವಾಗಿದೆ. ಪುಣೆಯ ಕಿರಣ್ ಬಿ. ರೈ ಹಾಗೂ ಹರೀಶ್ ಮೂಡಬಿದ್ರೆ ನಮ್ಮ ಸಂಘದ ಸಕ್ರಿಯ ಸದಸ್ಯರಾಗಿರುವುದು ಸಂಘಕ್ಕೆ ವರದಾನವಾಗಿದೆ. ಆದುದರಿಂದ ಪುಣೆಯ ಓದುಗರು, ಪತ್ರಿಕೆ, ಸಂಘದೊಂದಿಗೆ ಅವರನ್ನೂ ಸಹೋದರರಂತೆ ಕಂಡು ಬೆಳೆಸಿ ಪತ್ರಿಕೋದ್ಯಮಕ್ಕೆ ಪ್ರೋತ್ಸಾಹಿಸಬೇಕು .
ರೋನ್ಸ್ ಬಂಟ್ವಾಳ್,
ಗೌರವ ಪ್ರಧಾನ ಕಾರ್ಯದರ್ಶಿ : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ