Advertisement

ಪುಣೆ ಕನ್ನಡ ಸಂಘ ಆಂಗ್ಲ ಮಾಧ್ಯಮ ಶಾಲೆಗೆ  ಶೇ.100 ಫಲಿತಾಂಶ

01:15 PM Jun 18, 2017 | Team Udayavani |

ಪುಣೆ: ಕನ್ನಡ ಸಂಘ ಪುಣೆ ನಡೆಸುತ್ತಿರುವ ಡಾ| ಕಲ್ಮಾಡಿ ಶಾಮರಾವ್‌ ಹೈಸ್ಕೂಲ್‌ ಗಣೇಶ ನಗರ ಹಾಗೂ ಅವುಂದ್‌ನ ಎರಡೂ ಅಂಗ್ಲ ಮಾಧ್ಯಮ ಶಾಲೆಗಳಿಗೆ ಈ ಭಾರಿಯ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಲಭಿಸಿದೆ.  ಗಣೇಶ್‌ ನಗರದ ಶಾಲೆಯಲ್ಲಿ ಪರೀಕ್ಷೆಗೆ 

Advertisement

ಒಟ್ಟು 230 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 177 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌, 47 ವಿದ್ಯಾರ್ಥಿಗಳು ಪ್ರಥಮ ದರ್ಜೆ, 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಅದಿತಿ ಸತೀಶ್‌ ಜೋಶಿ ಅವರು ಶೇ.  99.04 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಅವುಂದ್‌ ಶಾಲೆಯಲ್ಲಿ ಎಸ್‌ಎಸ್‌ಸಿ ಪರೀಕ್ಷೆಗೆ ಒಟ್ಟು 36 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 24 ವಿದ್ಯಾರ್ಥಿಗಳು  ಡಿಸ್ಟಿಂಕ್ಷನ್‌ನಲ್ಲಿ, 12 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಹೊಂದಿದ್ದಾರೆ. 

ಸಲೋನಿ ಶೆಟ್ಟಿ ಅವರು ಶೇ. 97.04 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮಿಗರೆನಿಸಿದ್ದಾರೆ. ಉತ್ತಮ ಅಂಕಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕ ವೃಂದದವರನ್ನು ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next