Advertisement

ಐಪಿಎಲ್‌ ಪ್ಲೇಆಫ್ ಪಂದ್ಯಗಳಿಗೆ ಪುಣೆ, ಇಂದೋರ್‌ ಬೇಡಿಕೆ

06:40 AM Feb 16, 2018 | Team Udayavani |

ನವದೆಹಲಿ: ಪ್ರಸಕ್ತ ಋತುವಿನ ಐಪಿಎಲ್‌ ವೇಳಾಪಟ್ಟಿ ಬಿಡುಗಡೆಯಾದರೂ 2 ಪ್ಲೇ-ಆಫ್ ಪಂದ್ಯಗಳ ತಾಣಗಳನ್ನು ಬಾಕಿ ಇರಿಸಿಕೊಳ್ಳಲಾಗಿದೆ. ಎಲಿಮಿನೇಟರ್‌ (ಮೇ 23) ಹಾಗೂ 2ನೇ ಕ್ವಾಲಿಫೈಯರ್‌ (ಮೇ 25) ಸ್ಪರ್ಧೆಗಳು ಎಲ್ಲಿ ನಡೆಯಲಿವೆ ಎಂಬುದು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. 

Advertisement

ಅಷ್ಟರಲ್ಲಿ ಈ 2 ಪಂದ್ಯಗಳ ಆತಿಥ್ಯಕ್ಕೆ ಬಹಳ ಬೇಡಿಕೆ ಬಂದಿದೆ. ಪುಣೆ ಮತ್ತು ಇಂದೋರ್‌ ಪೈಪೋಟಿಗೆ ಇಳಿದಿವೆ. ಈ ಪಂದ್ಯಗಳ ಆತಿಥ್ಯವನ್ನು ತಮಗೆ ನೀಡಬೇಕೆಂದು ಎರಡೂ ಕ್ರಿಕೆಟ್‌ ಮಂಡಳಿಗಳು ಐಪಿಎಲ್‌ ಆಡಳಿತ ಮಂಡಳಿಗೆ ಮನವಿ ಮಾಡಿವೆ. ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ತಂಡ ಈ ಸಲ ಕೂಟದಲ್ಲಿ ಇಲ್ಲವಾದ್ದರಿಂದ ಹಾಗೂ ಈ ತಂಡ ಕಳೆದ ವರ್ಷ ಪ್ರಶಸ್ತಿ ಸುತ್ತಿನ ತನಕ ಸಾಗಿದ್ದರಿಂದ ಪ್ಲೇ-ಆಫ್ ಪಂದ್ಯಗಳ ಆತಿಥ್ಯವನ್ನು ಪುಣೆಗೆ ನೀಡುವುದು ಸೂಕ್ತ ಎಂಬುದು ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ (ಎಂಸಿಎ) ಬೇಡಿಕೆ. ಇದೇ ವೇಳೆ ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆ (ಎಂಪಿಸಿಎ) ಬಿಸಿಸಿಐಗೆ ಪತ್ರ ಬರೆದಿದ್ದು, ಇಂದೋರ್‌ಗೆ ಈ ಪಂದ್ಯಗಳ ಆತಿಥ್ಯ ನೀಡಬೇಕೆಂದು ಕೇಳಿಕೊಂಡಿದೆ. ಎಂಪಿಸಿಎ ಕಾರ್ಯದರ್ಶಿ ಮಿಲಿಂದ್‌ ಕನ್ಮಾಡಿಕಾರ್‌ ಇದನ್ನು ತಿಳಿಸಿದ್ದಾರೆ. ಇಂದೋರ್‌ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ 2 ತವರು ಮೈದಾನಗಳಲ್ಲಿ ಒಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next