Advertisement

ಪುಣೆ ಗುರುದೇವ ಬಳಗ: ಒಡಿಯೂರು ಶ್ರೀ ಜನ್ಮದಿನೋತ್ಸವ

03:43 PM Aug 10, 2018 | Team Udayavani |

ಪುಣೆ: ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ  ಇದರ ವತಿಯಿಂದ  ದಕ್ಷಿಣದ ಗಾಣಗಾಪುರ ಎಂದೇ ಪ್ರಸಿದ್ಧಿ ಪಡೆದ ಶ್ರೀ ದತ್ತಾಂಜನೆಯಸ್ವಾಮಿ ಕ್ಷೇತ್ರ, ಶ್ರೀ ಗುರುದೇವದತ್ತ ಸಂಸ್ಥಾನಂ,  ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಯವರ ಜನ್ಮ ದಿನೋತ್ಸವ ಆಚರಣೆಯು ಆ. 8 ರಂದು ಪುಣೆ ಶ್ರೀ  ವಜ್ರಮಾತ ಮಹಿಳಾ ವಿಕಾಸ ಕೇಂದ್ರದ  ಮಾಜಿ ಅಧ್ಯಕ್ಷೆ ಪುಷ್ಪಾ ಎಲ್‌. ಪೂಜಾರಿ ಅವರ ನೇತೃತ್ವದಲ್ಲಿ ದನ್ವರ್ಶ್‌ ಬಿಲ್ಡಿಂಗ್‌ನಲ್ಲಿ   ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

Advertisement

ಶ್ರೀ  ಗುರುದೇವರಿಗೆ ಪೂಜೆ,  ಗುರುವಂದನೆಯೊಂದಿಗೆ ಕಾರ್ಯಕ್ರಮವು  ಪ್ರಾರಂಭಗೊಂಡಿತು. ಆನಂತರ ಶ್ರೀ  ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು ಹಾಗು ಬಳಗದ ಸದಸ್ಯರಿಂದ ಬಳಗದ ಭಜನಾ ಗುರು ದಾಮೋದರ ಬಂಗೇರ ಅವರ ಮುಂದಾಳತ್ವದಲ್ಲಿ ಭಜನೆ ನಡೆಯಿತು. ಕೊನೆಯಲ್ಲಿ  ಮಹಾಮಂಗಳಾರತಿ ಪ್ರಸಾದ ವಿತರಣೆ ನೆರವೇರಿತು. ಪುಣೆ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ, ಕಾರ್ಯಕ್ರಮದ ಆಯೋಜಕರಾದ ಪುಷ್ಪಾ ಪೂಜಾರಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಪ್ರೇಮಾ ಎಸ್‌. ಶೆಟ್ಟಿ ಹಾಗು ಬಳಗದ ಸದಸ್ಯ, ಸದಸ್ಯೆಯರು ಗುರುಗಳ ಫೋಟೋಗೆ ಆರತಿ ಎತ್ತುವುದರ ಮೂಲಕ ಗುರುವಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುಣೆ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಅವರು ಮಾತನಾಡಿ, ಮಾತೃ ದೇವೋ ಭವ, ಪಿತೃ ದೇವೋ ಭವ, ಗುರುದೇವೋ ಭವ ಎಂಬ ವೇದ ವಾಕ್ಯದಂತೆ ನಮ್ಮ ತಂದೆ ತಾಯಿ ನಮಗೆ ಹೇಗೆ ದೇವರೋ ಹಾಗೆಯೇ ಗುರುಗಳು ಕೂಡಾ ದೇವರಾಗಿದ್ದಾರೆ. ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುವ, ನಮಗೆ ಜೀವನ ಶೈಲಿಯ ಪಾಠವನ್ನು ನೀಡಿ ಅಶಿರ್ವದಿಸಿ ಭಗವಂತನ ದರುಶನ ಮಾಡಿಸುವವನೇ ಗುರು ದೇವರು. ನಿತ್ಯಾನಂದ ಸ್ವಾಮೀಜಿಯವರ ಸಮಾಧಿ ದಿನದ ಪುಣ್ಯ ದಿನದಂದೆ ನಮ್ಮ  ಗುರುವರ್ಯ   ಒಡಿಯೂರಿನ ಒಡೆಯರಾದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವನರ ಜನ್ಮದಿನ. ಸ್ವಾಮೀಜಿಯವರ ಜನ್ಮ ದಿನೋತ್ಸವ ದಂದು ನಾವಿಂದು ಗುರುಭಕ್ತಿಯಿಂದ ಗುರು ವಂದನೆಯನ್ನು  ಸಲ್ಲಿಸಿದ್ದೇವೆ. ಸ್ವಾಮೀಜಿಗಳು  ಸನ್ಯಾಸಿಗಳು  ಜನ್ಮದಿನವನ್ನು  ಆಚರಿಸಿಕೊಳ್ಳುವುದಿಲ್ಲ. ಆದರೆ ಗುರುಭಕ್ತರ ಅಭಿಲಾಷೆಯಂತೆ ಆ ದಿನವನ್ನು ಸಮಾಜ ಉದ್ಧಾರಕ್ಕಾಗಿ ಉಪಯೋಗವಾಗುವಂತೆ ಆಚರಿಸು ತ್ತಾರೆ.  ಈ ನಿಟ್ಟಿನಲ್ಲಿ ಒಡಿಯೂರು ಶ್ರೀಗಳು   ತಮ್ಮ ಜನ್ಮದಿನೋತ್ಸವವನ್ನು ತಮ್ಮ  ಭಕ್ತ ಜನರಿಗೆ, ಬಡ ಜನರಿಗೆ, ಜನ ಸಾಮನ್ಯರಿಗೆ   ಸಹಾಯಕವಾಗುವಂತೆ ಗ್ರಾಮೋತ್ಸವವಾಗಿ ಆಚರಿಸಿ ಅ ಮೂಲಕ ಗ್ರಾಮ ಗ್ರಾಮಗಳಲ್ಲಿ  ಹಲವಾರು ಜನೋಪಯೋಗಿ  ಯೋಜನೆಗಳ ಮೂಲಕ ಸಮಾಜ ಸೇವಾ ಕಾರ್ಯಗಳನ್ನು ಮಾಡಿ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿ¨ªಾರೆ. ಗ್ರಾಮ ಸ್ವತ್ಛತಾ ಅಭಿಯಾನ, ತುಳುನಾಡಿನ ಸಂಸ್ಕೃತಿಗೆ ಪೂರಕವಾಗಿ ಗ್ರಾಮೀಣ ಕ್ರೀಡಾಕೂಟ, ಗ್ರಾಮವಿಕಾಸ ಯೋಜನೆಯ ಕಾರ್ಯಗಳು, ಬಡ ಕುಟುಂಬಗಳಿಗೆ ಧನ ಸಹಾಯ, ಶೈಕ್ಷಣಿಕ ನೆರವು ಅರೋಗ್ಯ ನೆರವು ಮೊದಲಾದ  ಯೋಜನೆಗಳಿಂದ  ಹಲವಾರು ಸಮಾಜ ಕಾರ್ಯಗಳು ಸಾಕಾರಗೊಳ್ಳುತ್ತಿವೆ. ಸ್ವಾಮೀಜಿ ಯವರ ಸನಾತನ ಸಂಸ್ಕಾರ, ಗ್ರಾಮವಿಕಾಸ, ಶಿಕ್ಷಣ, ವೈದ್ಯಕೀಯ, ಪರಿಸರ ಸಂರಕ್ಷಣೆ ಮೊದಲಾದ  ಸಮಾಜಮುಖೀ ಸೇವಾ ಕಾರ್ಯಗಳ ಮುಖಾಂತರ ಇಂದು  ಹಲವಾರು ಹಳ್ಳಿ, ಗ್ರಾಮಗಳು ಅಭಿವೃದ್ಧಿಯನ್ನು ಹೊಂದಿವೆ. ತಾಲೂಕು, ಜಿÇÉಾ  ಮಟ್ಟದಲ್ಲೂ ಈ ಯೋಜನೆಗಳನ್ನು  ಹಮ್ಮಿಕೊಂಡು ಕಾರ್ಯಗತಗೊಳಿಸಲಾಗುತ್ತಿದೆ. ಗುರುಗಳ ಈ ಎÇÉಾ  ಕಾರ್ಯಗಳಿಗೆ ನಾವು ಕೂಡ ಕೈಜೋಡಿಸುವ ಮೂಲಕ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಬಳಗದ ಪ್ರಮುಖರಾದ ಉಮೇಶ್‌ ಶೆಟ್ಟಿ, ಸುರೇಶ್‌ ಶೆಟ್ಟಿ, ದಿನೇಶ್‌ ಶೆಟ್ಟಿ, ಧನಂ ಜಯ್‌ ಪೂಜಾರಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ  ವೀಣಾ ಪಿ. ಶೆಟ್ಟಿ, ಶೋಭಾ ಯು. ಶೆಟ್ಟಿ, ಸರೋಜಿನಿ ಡಿ. ಬಂಗೇರ, ಸುಮನಾ ಎಸ್‌. ಹೆಗ್ಡೆ, ಸುಜಾತಾ  ಶೆಟ್ಟಿ,  ಆಶಾ ವಿ. ಶೆಟ್ಟಿ, ಶ್ವೇತಾ ಎಚ್‌. ಮೂಡಬಿದ್ರಿ, ಮಮತಾ ಶೆಟ್ಟಿ, ಸುಶೀಲಾ ಮೂಲ್ಯ   ಹಾಗು ಹೆಚ್ಚಿನ ಸಂಖ್ಯೆಯ ಗುರು ಭಕ್ತರು ಉಪಸ್ಥಿತರಿದ್ದು ಗುರು ಕೃಪೆಗೆ ಪಾತ್ರರಾದರು. ಕೊನೆಯಲ್ಲಿ ಪ್ರಸಾದ ವಿತರಣೆ, ಲಘು ಉಪಾಹಾರ ನಡೆಯಿತು.   

ಚಿತ್ರ-ವರದಿ –  ಹರೀಶ್‌  ಮೂಡಬಿದ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next