Advertisement

ಪುಣೆ: ಕನ್ನಡಿಗರ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

04:13 PM Apr 11, 2018 | |

ಪುಣೆ: ಕರ್ನಾಟಕದ ಗಡಿನಾಡು ಜಿಲ್ಲೆಯಾದ ಬೆಳಗಾವಿಯ ಮೂವರು ಕನ್ನಡಿಗ ಯುವ ಕಲಾವಿದರು ನಗರದ ಘೋಲೆ ರಸ್ತೆಯಲ್ಲಿರುವ ರಾಜಾ ರವಿವರ್ಮ ಆರ್ಟ್‌ ಗ್ಯಾಲರಿಯಲ್ಲಿ ತ್ರಿವರ್ಣಂ ಎಂಬ ಹೆಸರಿನಲ್ಲಿ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Advertisement

ಮೂವರು ಕಲಾವಿದರು ಬಿಡಿಸಿರುವ ಚಿತ್ರಗಳು ಬಹಳ ಸುಂದರವಾಗಿ ಮೂಡಿಬಂದಿದ್ದು, ಮೂವರು  ಕಲಾವಿದರು  ತಮ್ಮದೆ ಆದ ಶೈಲಿಯಲ್ಲಿ ಕಲಾಕೃತಿಗಳನ್ನು ರಚಿಸಿದ್ದಾರೆ. ಎಂ. ಜಿ. ಮಕಾನದಾರ್‌ ಇವರು ಹಳ್ಳಿಯ ದೃಶ್ಯಗಳನ್ನು ಬಿಡಿಸಿದರೆ, ಕೆ. ಎ. ಬಡಿಗೇರ ಇವರು ಕೃಷ್ಣ ಮತ್ತು ರಾಧೆಯ ಸರಸ ಚೆಲ್ಲಾಟವನ್ನು ಮನೋಹರವಾಗಿ ಚಿತ್ರಿಸಿದ್ದಾರೆ. ಇನ್ನೋರ್ವ ಕಲಾವಿದ ಎ. ಎಂ. ನಾಗನೂರಿ ಇವರು ಗ್ರಾಮೀಣ ಪ್ರದೇಶದ ಜನತೆಯ ಕುಲಕಸುಬು ಹಾಗೂ ರೈತರ ಚಿತ್ರವನ್ನು ನೈಜವಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರದರ್ಶನವನ್ನು ಈಗಾಗಲೆ ಪಿಂಪ್ರಿ-ಚಿಂಚಾÌಡ್‌ನ‌ ಶಿವಸೇನ ಪ್ರಮುಖ ಬಾಳಾ ಸಾಹೇಬ್‌ ವಾಲೆØಕರ್‌, ಲಯನ್ಸ್‌ ಕ್ಲಬ್‌ನ ಕಾರ್ಯದರ್ಶಿ ಪ್ರೀತಿ. ಶ. ಪರಾಂಜಪೆ ಹಾಗೂ ರವೀಂದ್ರ ಕದಡಿ ಇವರು ಉದ್ಘಾಟಿಸಿದ್ದು, ಇನ್ನೂ ಎರಡು ದಿನಗಳ ಕಾಲ ಈ ಪ್ರದರ್ಶನ ನಡೆಯಲಿದೆ. ಕಲಾಸಕ್ತರು, ತುಳು-ಕನ್ನಡಿಗರು ಪ್ರದರ್ಶನದಲ್ಲಿ ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next