ಪುಣೆ: ನಮ್ಮ ತುಳುನಾಡಿನ ಎಲ್ಲಾ ಜಾತಿ-ಬಾಂಧವರು ಧರ್ಮ ಹಾಗೂ ನಮ್ಮ ಸಂಸ್ಕೃತಿಯ ಕಟ್ಟುಕಟ್ಟಲೆ, ಅಚಾರ ವಿಚಾರಗಳಿಗೆ ಚ್ಯುತಿ ಬಾರದಂತೆ ನಡೆದುಕೊಂಡು ಬಂದವರು. ಹಿರಿಯರು ಹಾಕಿಕೊಟ್ಟ ಧರ್ಮದ ಬದುಕಿನ ಕಲೆಯನ್ನು ನಾವೆಲ್ಲರು ಅರಿತವರು. ಮಾನವೀಯ ಮೌಲ್ಯಗಳನ್ನು ಅರ್ಥಮಾಡಿಕೊಂಡು ನಾವುಗಳು ಬಲಿಷ್ಠರಾಗಿದ್ದೇವೆ. ಇದಕ್ಕೆ ಕಾರಣ ನಮ್ಮಲ್ಲಿರುವ ಇಚ್ಛಾಶಕ್ತಿ. ಇಂತಹ ಶಕ್ತಿ ಇದ್ದರೆ ವಿಚಾರಗಳನ್ನು ಮನನ ಮಾಡಿಕೊಂಡು, ತಿಳಿದವರಿಂದ ಜ್ಞಾನವನ್ನು ಪಡೆದುಕೊಂಡು, ಜೀವನ ರೂಪಿಸಿಕೊಳ್ಳುವ ಜತೆಗೆ ಬಲಿಷ್ಠರಾಗಿ, ಸಮಾಜವನ್ನು ಕಟ್ಟುವ ಕಾರ್ಯ ಮಾಡಬಹುದು. ಈ ಸಮಾರಂಭದಲ್ಲಿ ಸೇರಿರುವ ದೇವಾಡಿಗ ಸಮಾಜಕ್ಕೆ ಕೂಡಾ ಅದರದ್ದೇ ಅದಂತಹ ಒಂದು ಮೂಲವಾದ ಚರಿತ್ರೆ ಇದೆ ಮತ್ತು ಅದರ¨ªೆ ಅದಂತಹ ಕುಲ ಕಸುಬು ಎಂಬುವುದಿದೆ. ಆಯಾಯ ಸಮಾಜದ ಪ್ರತಿಯೊಬ್ಬರು ಹೃದಯ ವೈಶಾಲ್ಯತೆ ಮೆರೆದರೆ ಬಲಿಷ್ಠ ಸಮಾಜ ನಿರ್ಮಾಣ ಮಾಡಬಹುದು ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್‌ಬೆಟ್ಟು ಸಂತೋಷ್ ಶೆಟ್ಟಿ ಅವರು ಅಭಿಪ್ರಾಯಿಸಿದರು.
ಫೆ. 24ರಂದು ಪುಣೆಯ ಶ್ಯಾಮ್ ರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್ ಸಭಾ ಭವನದಲ್ಲಿ ನಡೆದ ಪುಣೆ ದೇವಾಡಿಗ ಸಂಘದ 7ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಎಲ್ಲರೂ ವಿದ್ಯಾವಂತರೆ. ಧರ್ಮದ ನೆಲೆಯಲ್ಲಿ ನಡೆದು ಸಮಾಜಕ್ಕೆ ಒಳಿತಾಗುವ ಕಾರ್ಯವನ್ನು ಮಾಡಬೇಕು. ಒಳ್ಳೆಯ ಕಾರ್ಯ ಮಾಡಿದಾಗ ಸಮಾಜ ಗುರುತಿಸುತ್ತದೆ. ಸಮ್ಮಾನ, ಸತ್ಕಾರಗಳು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ನನಗೆ ನೀಡಿದ ಈ ಸಮ್ಮಾನವನ್ನು ನನ್ನ ಸಮಾಜಕ್ಕೆ ಅರ್ಪಣೆ ಮಾಡುತ್ತೇನೆ. ಪುಣೆ ಬಂಟರ ಭವನ ತುಳುನಾಡ ಕನ್ನಡಿಗರ ಭವನವಾಗಿರುತ್ತದೆ. ದೇವಾಡಿಗ ಸಮಾಜದ ಹಿರಿಯರು ಯುವಜನತೆ ಸೇರಿ ಸಂಘಟನೆ ನಿತ್ಯ ಸುಂದರವಾಗಿರಲಿ. ದೇವಾಡಿಗ ಸಂಘ ಪುಣೆಯಲ್ಲಿ ಹೆಮ್ಮರವಾಗಿ ಬೆಳೆದು ಪ್ರತಿಷ್ಠೆಯನ್ನು ಪಡೆಯಲಿ ಎಂದರು.
ಪುಣೆ ದೇವಾಡಿಗ ಸಂಘದ ಗೌರವಾಧ್ಯಕ್ಷ ಅಣ್ಣಯ್ಯ ಶೇರಿಗಾರ್ ಅವರ ಉಪಸ್ಥಿತಿಯಲ್ಲಿ ಅಧ್ಯಕ್ಷ ನಾರಾಯಣ ದೇವಾಡಿಗರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂ ಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಸಂತ್ ದೇವಾಡಿಗ ಕರಾಡ್ ಮಾತನಾಡಿ, ನಮ್ಮ ಸಮಾಜದ ಒಳಿತಿಗಾಗಿ ಕಾರ್ಯವನ್ನು ಮಾಡುವ ಛಲ ನಮ್ಮಲ್ಲಿರಬೇಕು. ನಮ್ಮ ಸಮಾಜ ನಮ್ಮ ಪ್ರತಿಷ್ಠೆ ಎಂಬ ಸ್ವಹೆಗ್ಗಳಿಕೆ ಮತ್ತು ಸಮಾಜದ ಬಗ್ಗೆ ಆಸಕ್ತಿ ಎಲ್ಲರಲ್ಲೂ ಇರಬೇಕು. ಸಮಾಜವನ್ನು ಉದ್ಧಾರ ಮಾಡುವ ಕಾರ್ಯ ದೇವಾಡಿಗ ಸಮಾಜದಲ್ಲಿ ಆಗಬೇಕಾಗಿದೆ. ಸಮಾಜ ಬಾಂಧವರಿಗೆ ಓಬಿಸಿ ಅಡಿಯಲ್ಲಿ ಸಿಗುವ ಸೌಲಭ್ಯಕ್ಕಾಗಿ ನನ್ನಿಂದಾಗುವ ಸಹಾಯ ಹಸ್ತವನ್ನು ನೀಡಲು ಸಿದ್ಧನಿದ್ದೇನೆ. ಸಮಾಜದಲ್ಲಿ ಪ್ರತಿಭೆಯುಳ್ಳ ಬಹಳಷ್ಟು ಮಂದಿ ಇ¨ªಾರೆ. ಅವರಿಗೆ ಸೂಕ್ತವಾದ ಮಾರ್ಗದರ್ಶನ ನಮ್ಮಿಂದ ಸಿಗಬೇಕು. ಈ ನಿಟ್ಟಿನಲ್ಲಿ ಪುಣೆ ದೇವಾಡಿಗ ಸಂಘವು ಉತ್ತಮ ಕಾರ್ಯವನ್ನು ಮಾಡಬೇಕಾಗಿದೆ ಎಂದರು.
ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಪುರಂದರ ಪೂಜಾರಿ ಇವರು ಮಾತನಾಡಿ, ಇಂದಿಗೂ ಕೂಡಾ ಎÇÉಾ ಸಮಾಜದಲ್ಲೂ ಬಡ ಕುಟುಂಬಗಳಿವೆ, ಶಿಕ್ಷಣ ವಂಚಿತರು, ಅರೋಗ್ಯ ವಂಚಿತರು ಇದ್ದಾರೆ. ಸಂಘ-ಸಂಸ್ಥೆಗಳು ಬಡ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಸಮಾಜ ಸೇವಾ ಕಾರ್ಯವನ್ನು ಮಾಡಬೇಕು. ಈ ಕಾರ್ಯ ಸಂಘ ಸಂಸ್ಥೆಗಳ ಸಮಿತಿ ಸದಸ್ಯರ ಕಾರ್ಯ ಎನ್ನದೆ ಎÇÉಾ ಸಮಾಜ ಬಾಂಧವರು ಇದರಲ್ಲಿ ತೊಡಗಿಸಿಕೊಂಡಾಗ ಸಮಾಜ ಇನ್ನಷ್ಟು ಮುಂದೆ ಬರಬಹುದು. ನನ್ನ ಪಂಚಮಿ ಚಾರಿಟೇಬಲ್ ಟ್ರಸ್ಟ್ ಮುಖಾಂತರ ನೀಡುವ ಎÇÉಾ ಸೌಲಭ್ಯಗಳು ಎಲ್ಲ ಜಾತಿ ಬಾಂಧವರಿಗೆ ಸಿಗುತ್ತಿದೆ. ಪುಣೆಯಲ್ಲಿರು ದೇವಾಡಿಗ ಸಮಾಜದ ಬಡ ಕುಟುಂಬಗಳಿಗೆ ಸಹಾಯ ಹಸ್ತ ನೀಡಲು ಟ್ರಸ್ಟ್ ಸಿದ್ದವಿದೆ ಎಂದು ನುಡಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಉಡುಪಿ ಜಿÇÉಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಸಂಘದ ಮುಖ್ಯ ಸಲಹೆಗಾರ ನರಸಿಂಹ ದೇವಾಡಿಗ, ಸ್ಥಾಪಕ ಅಧ್ಯಕ್ಷ ಪ್ರಭಾಕರ ದೇವಾಡಿಗ ಉಪಾಧ್ಯಕ್ಷ ಮಹಾಬಲೇಶ್ವರ ದೇವಾಡಿಗ ಉಪಸ್ಥಿತರಿದ್ದರು. ಅತಿಥಿ-ಗಣ್ಯರು ಸಂಘದ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಸಚಿನ್ ದೇವಾಡಿಗ, ಉಪಾಧ್ಯಕ್ಷ ಸುಧಾಕರ ದೇವಾಡಿಗ, ಕಾರ್ಯದರ್ಶಿ ನವೀನ ದೇವಾಡಿಗ, ಕೋಶಾಧಿಕಾರಿ ಸುರೇಶ ಶ್ರೀಯಾನ್ ಮತ್ತು ಪದಾದಿಕಾರಿಗಳು ಉಪಸ್ಥಿತರಿದ್ದರು.
ಸಂಘದ ಸ್ಥಾಪಕ ಅಧ್ಯಕ್ಷ ಪ್ರಭಾಕರ ದೇವಾಡಿಗ ಮತ್ತು ಮುಖ್ಯ ಸಲಹೆಗಾರರಾದ ನರಸಿಂಹ ದೇವಾಡಿಗ ಮಾತನಾಡಿದರು. ಪುಣೆಯ ವಿವಿದ ಸಂಘ-ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳನ್ನು ಗೌರವಿಸಲಾಯಿತು. ಶ್ಯಾಮಲಾ ಎಸ್. ದೇವಾಡಿಗ, ವಿಜಯಲಕ್ಷ್ಮೀ ಅರ್. ದೇವಾಡಿಗ, ಸುನಿತಾ ವಿ. ದೇವಾಡಿಗ ಪ್ರಾರ್ಥನೆಗೈದರು. ಮಹಾಬಲ ದೇವಾಡಿಗ ಸ್ವಾಗತಿಸಿದರು. ಸಂಘದ ವಾರ್ಷಿಕ ವರದಿಯನ್ನು ವಿಠuಲ್ ದೇವಾಡಿಗ ಮಂಡಿಸಿದರು. ಈ ಸಂದರ್ಭದಲ್ಲಿ ಬಾಕೂìರು ಏಕನಾಥೇಶ್ವರಿ ದೇವಾಸ್ಥಾನದ ಮ್ಯಾನೇಜಿಂಗ್ ಟ್ರಷ್ಟಿ ಅಣ್ಣಯ್ಯ ಶೇರಿಗಾರ ಅವರನ್ನು ಪುಣೆ ದೇವಾಡಿಗ ಸಂಘದ ವತಿಯಿಂದ ದೇವಾಡಿಗ ಶ್ರೇಷ್ಠ ಬಂಧು ಬಿರುದು ನೀಡಿ ಸಮ್ಮಾನಿಲಾಯಿತು.
ಉಡುಪಿ ಜಿÇÉಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ ಅವರನ್ನು ದೇವಾಡಿಗ ಯಶಸ್ವಿ ಮಹಿಳೆ’ ಬಿರುದು ಪ್ರದಾನಿಸಿ ಸಮ್ಮಾನಿಸಲಾಯಿತು. ಅತಿಥಿ ಗಣ್ಯರನ್ನು ಅಧ್ಯಕ್ಷರಾದ ನಾರಾಯಣ ದೇವಾಡಿಗ ಮತ್ತು ಪದಾಧಿಕಾರಿಗಳು ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ಸಮಾ ಜದ ಹಿರಿಯ ಮಹಿಳೆ ಲೀಲಾ ಭೋಜ ದೇವಾಡಿಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನುಗೈದ ಡಾ| ದೀûಾ ಡಿ. ದೇವಾಡಿಗರನ್ನು ಅಭಿನಂದಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಮಾಜ ಭಾಂದ ವರಿಂದ, ಮಕ್ಕಳಿಂದ ವಿವಿಧ ನೃತ್ಯ ವೈವಿದ್ಯಮಗಳು ನಡೆದವು. ಭಾವನ ಡಾನ್ಸ್ ಸ್ಟುಡಿಯೋ ವಿಶ್ರಾಂತ್ ವಾಡಿ ಇವರಿಂದ ನೃತ್ಯ ವೈವಿದ್ಯ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಯಶವಂತ್ ದೇವಾಡಿಗ, ವಿನೋದಾ ಎಸ್. ದೇವಾಡಿಗ, ಸತೀಶ್ ದೇವಾಡಿಗ, ಸಂತೋಷ್ ದೇವಾಡಿಗ, ಜನಾರ್ಧನ್ ದೇವಾಡಿಗ, ಪ್ರಕಾಶ್ ದೇವಾಡಿಗ, ಜಗದೀಶ್ ದೇವಾಡಿಗ, ಉದಯ ದೇವಾಡಿಗ, ಪ್ರಿಯಾ ಎಚ್. ದೇವಾಡಿಗ, ರಾಜು ದೇವಾಡಿಗ, ಗೀತಾ ಎಂ. ದೇವಾಡಿಗ, ಪುರಂದರ ದೇವಾಡಿಗ, ಶಶಿಕಾಂತಿ ಎನ್. ದೇವಾಡಿಗ, ವಾಮನ್ ದೇವಾಡಿಗ, ರಾಹುಲ್ ಶೇರಿಗಾರ್, ಸುನಿತಾ ವಿ. ದೇವಾಡಿಗ, ಅಕ್ಷತಾ ಪಿ. ದೇವಾಡಿಗ ಮತ್ತಿತರರು ಸಹಕರಿಸಿದರು. ಸಂಘದ ಪ್ರಮುಖರಾದ ಪ್ರಿಯಾ ದೇವಾಡಿಗ ನಿರೂಪಿಸಿದರು. ಸಂತೋಷ್ ದೇವಾ ಡಿಗ ವಂದಿಸಿದರು.
ಚಿತ್ರ-ವರದಿ: ಹರೀಶ್ ಮೂಡಬಿದ್ರೆ ಪುಣೆ