Advertisement

ಪುಣೆ ದೇವಾಡಿಗ ಸಂಘ: 8ನೇ ವಾರ್ಷಿಕೋತ್ಸವಕ್ಕೆ ಅದ್ದೂರಿ ಚಾಲನೆ

06:26 PM Feb 04, 2020 | Suhan S |

ಪುಣೆ, ಫೆ. 3: ದೇವಾಡಿಗ ಸಂಘ ಪುಣೆ ಇದರ 8ನೇ ವಾರ್ಷಿಕೋತ್ಸವ ಸಮಾರಂಭವು ಫೆ. 2ರಂದು ನಗರದ ಕೇತ್ಕರ್‌ ರೋಡ್‌ನ‌ಲ್ಲಿರುವ ಡಾ| ಶ್ಯಾಮ್‌ ರಾವ್‌ ಕಲ್ಮಾಡಿ ಹೈಸ್ಕೂಲ್‌ನ ಸಭಾ ಭವನದಲ್ಲಿ ಅಪರಾಹ್ನ 3ರಿಂದ ಮೊದಲ್ಗೊಂಡು ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಸಮಾರಂಭವನ್ನು ಅತಿಥಿ-ಗಣ್ಯರು ಹಾಗೂ ಸಂಘದ ಮಹಾನೀಯರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಪುಣೆ ದೇವಾಡಿಗ ಸಂಘದ ಗೌರವಾಧ್ಯಕ್ಷರಾದ ಎ. ಬಿ. ಶೇರಿಗಾರ್‌ ಅವರ ಉಪಸ್ಥಿತಿಯಲ್ಲಿ ಅಧ್ಯಕ್ಷರಾದ ನಾರಾಯಣ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಂಘದ ವಾರ್ಷಿಕೊತ್ಸವದ ಸಭಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಂಬಯಿ ದೇವಾಡಿಗ ಸಂಘದ ಉಪಾಧ್ಯಕ್ಷರಾದ ಪ್ರವೀಣ್‌ ದೇವಾಡಿಗ, ಮೂಡಬಿದ್ರಿ ದೇವಾಡಿಗ, ಸುಧಾರಕ ಸಂಘದ ಅಧ್ಯಕ್ಷರಾದ ಶಶಿಧರ ದೇವಾಡಿಗ, ಪುಣೆ ತುಳುಕೂಟದ ಅಧ್ಯಕ್ಷರಾದ ಮೋಹನ್‌ ಶೆಟ್ಟಿ ಎಣ್ಣೆಹೊಳೆ, ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ್‌ ಪೂಜಾರಿ ಕಡ್ತಲ, ಪುಣೆ ಕಾತ್ರಜ್‌ ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘದ ಅಧ್ಯಕ್ಷರಾದ ಸುಭಾಷ್‌ ಶೆಟ್ಟಿ, ಸಮ್ಮಾನಿತರಾದ ಸಮಾಜ ಸೇವಕ-ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿ. ಜಿ. ಮೋಹನದಾಸ್‌, ಪುಣೆ ದೇವಾಡಿಗಸಂಘದ ಮುಖ್ಯ ಸಲಹೆಗಾರರಾದ ನರಸಿಂಹ ದೇವಾಡಿಗ, ಸಂಘದ ಸ್ಥಾಪಕಾಧ್ಯಕ್ಷರಾದ ಪ್ರಭಾಕರ ದೇವಾಡಿಗ, ನಿಕಟಪೂರ್ವ ಅಧ್ಯಕ್ಷರಾದ ಸಚಿನ್‌ ದೇವಾಡಿಗ, ಉಪಾಧ್ಯಕ್ಷರಾದ ಮಹಾಬಲೇಶ್ವರ ದೇವಾಡಿಗ, ಸುಧಾಕರ ದೇವಾಡಿಗ, ಪ್ರಧಾನ

ಕಾರ್ಯದರ್ಶಿ ನವೀನ್‌ ದೇವಾಡಿಗ, ಕೋಶಾಧಿಕಾರಿ ಸುರೇಶ್‌ ಶ್ರೀಯಾನ್‌, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ವಿನೋದಾ ಎಸ್. ದೇವಾಡಿಗ ಮತ್ತುಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾಪ್ರಮುಖರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸಮ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಮಾಜದ ಸದಸ್ಯರಿಂದ, ಮಕ್ಕಳಿಂದ ನೃತ್ಯವೈವಿಧ್ಯ, ವಿವಿಧ ವಿನೋದಾವಳಿಗಳು ನಡೆಯಿತು.  ಅಲ್ಲದೆ ಭಾವನಾ ಡಾನ್ಸ್‌ ಸ್ಟುಡಿಯೋ ವಿಶ್ರಾಂತ್‌ವಾಡಿ ಪುಣೆ ಇವರಿಂದ ಸಾಂಸ್ಕೃತಿಕ ನೃತ್ಯ ವೈವಿಧ್ಯ ನಡೆಯಿತು.

 

ಚಿತ್ರ-ವರದಿ: ಹರೀಶ್‌ ಮೂಡಬಿದ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next