Advertisement

ಬಂಟರ ಭವನ ಪರಿಸರಕ್ಕೊಂದು ಅತ್ಯುತ್ತಮ ಕೊಡುಗೆ: ಅಮೋಲ್‌ ಬಲ್ವಾಡ್ಕರ್‌

01:35 PM Aug 19, 2021 | Team Udayavani |

ಪುಣೆ: ಪುಣೆ ಬಂಟರ ಸಂಘದ ವತಿ ಯಿಂದ ದೇಶದ 75ನೇ ಸ್ವಾತಂತ್ರ್ಯೋತ್ಸವವನ್ನು ಆ. 15ರಂದು ಸಂಘದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ಆಚರಿಸಲಾಯಿತು.

Advertisement

ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಣೇರ್‌ ಪರಿಸರದ ನಗರ ಸೇವಕ ಅಮೋಲ್‌ ಬಲ್ವಾಡ್ಕರ್‌ ಉಪಸ್ಥಿತರಿದ್ದರು.

ಅಮೋಲ್‌ ಬಲ್ವಾಡ್ಕರ್‌ ಅವರು ಭವನದ ಆವರಣದಲ್ಲಿರುವ ಶಿವಾಜಿ ಪ್ರತಿಮೆಗೆ ಹಾರಾರ್ಪಣೆ ಮಾಡಿ ಬಳಿಕ ಧ್ವಜಾರೋಹಣವನ್ನು ನೆರವೇರಿಸಿದರು. ಉಪಸ್ಥಿತರಿದ್ದ ಸಂಘದ ಪದಾಧಿಕಾರಿಗಳು, ಸದಸ್ಯರು ಧ್ವಜವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರ ಸೇವಕ ಅಮೋಲ್‌ ಬಲ್ವಾಡ್ಕರ್‌ ಮಾತನಾಡಿ, ಬಂಟ ಸಮಾಜ ಬಾಂಧವರು ನಿರ್ಮಿಸಿದ ಬಂಟರ ಭವನ ಪರಿಸರಕ್ಕೊಂದು ಅತ್ಯುತ್ತಮ ಕೊಡುಗೆಯಾಗಿದೆ. ಇಂತಹ ಸುಂದರ ಭವನ ಪುಣೆಯಲ್ಲಿಯೇ ಅತ್ಯುತ್ತಮ ಭವನವಾಗಿದೆ. ಕೋವಿಡ್‌ ಸಂಕಷ್ಟದ ಸಮಯದಲ್ಲಿಯೂ ಬಂಟರ ಸಂಘ ಮಾಡಿರುವ ಸೇವಾಕಾರ್ಯವನ್ನು ಹತ್ತಿರದಿಂದ ಬಲ್ಲೆ. ಮುಂದೆಯೂ ನಿಮ್ಮ ಸಾಮಾಜಿಕ ಕಾರ್ಯಗಳು ಸಂಘದ ಮುಖಾಂತರ ನಿರಂತರವಾಗಿ ನಡೆಯುತ್ತಿರಲಿ. ನಿಮ್ಮೊಂದಿಗೆ ನಾನೂ ಕೈಜೋಡಿಸಲು ಸಿದ್ಧ ಎಂದರು.

ಇದನ್ನೂ ಓದಿ:ಕಲ್ಪನೆಗೂ ಮೀರಿದ ‘ಬ್ಯೂಟಿಫುಲ್’ ಅಂದ್ರೆ ಫೋಟೋಗ್ರಫಿ..!

ಇದೇ ಸಂದರ್ಭದಲ್ಲಿ ನಗರ ಸೇವಕ ಅಮೋಲ್‌ ಬಲ್ವಾಡ್ಕರ್‌ ಅವರನ್ನು ಸಂಘದ ವತಿಯಿಂದ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ ಸ್ಮರಣಿಕೆ ನೀಡಿ ಗೌರವಿಸಿದರು. ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರು 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಸತೀಶ್‌ ಶೆಟ್ಟಿ, ಪದಾಧಿಕಾರಿಗಳಾದ ರಾಮಕೃಷ್ಣ ಶೆಟ್ಟಿ, ಪ್ರವೀಣ್‌ ಶೆಟ್ಟಿ ಪುತ್ತೂರು, ಪ್ರಶಾಂತ್‌ ಶೆಟ್ಟಿ ಹೆರ್ಡೆಬೀಡು, ದಕ್ಷಿಣ ಪ್ರಾದೇಶಿಕ ಸಮಿತಿ ಪದಾಧಿಕಾರಿ ಶೇಖರ ಸಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್‌. ಶೆಟ್ಟಿ, ಸದಸ್ಯೆಯರಾದ ಶಮ್ಮಿ ಅಜಿತ್‌ ಹೆಗ್ಡೆ, ದಿವ್ಯಾ ಸಂತೋಷ್‌ ಶೆಟ್ಟಿ, ಗೀತಾ ಆರ್‌. ಶೆಟ್ಟಿ, ಯುವ ವಿಭಾಗದ ಅಭಿನಂದನ್‌ ಶೆಟ್ಟಿ ಮತ್ತಿತರರಿದ್ದರು.

Advertisement

ಚಿತ್ರ – ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next