ಪುಣೆ: ಪುಣೆಯಲ್ಲಿ ಬಂಟ ಬಾಂಧವರು ಒಟ್ಟಾಗಿ ಭವ್ಯ ಭವನ ನಿರ್ಮಿಸಿ ಸಮಾಜಕ್ಕೊಪ್ಪಿಸುವ ಮಹತ್ಕಾರ್ಯ ಮಾಡಿರುವುದು ಅಭಿನಂದನೀಯ ಎಂದು ಶ್ರೀಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ನುಡಿದರು.
ಅವರು ಶನಿವಾರ ಬಾರ್ಣೇಯಲ್ಲಿ ಪುಣೆ ಬಂಟರ ಸಂಘವು ನಿರ್ಮಿಸಿದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನಮ್ಮ ನಮ್ಮ ಉದ್ಯೋಗ, ವ್ಯವಹಾರಗಳೊಂದಿಗೆ ಸೇವೆಗೈವ ಅವಕಾಶವನ್ನು ದೇವರು ನಮಗೆ ಕರುಣಿಸಿ¨ªಾನೆ. ಫಲಾಪೇಕ್ಷೆಯಿಲ್ಲದೆ ಉದಾಸೀನ ತೊರೆದು ಕರ್ಮವನ್ನು ಮಾಡಿದಾಗ ಭಗವಂತ ಪ್ರತಿಫಲ ನೀಡುತ್ತಾನೆ. ಪ್ರತಿಯೊಬ್ಬರೂ ಸಮಾಜದ ಋಣವನ್ನು ತೀರಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು. ಅಂತಹ ಮಹತ್ಕಾರ್ಯವೊಂದು ಪುಣೆಯಲ್ಲಿನ ಬಂಟರು ಸಂತೋಷ್ ಶೆಟ್ಟಿ ಅವರ ಸಾರಥ್ಯದಲ್ಲಿ ಮಾಡಿ ತೋರಿಸಿರುವುದು ಧರ್ಮ ಕಾರ್ಯವಾಗಿದೆ ಎಂದು ಡಾ| ಹೆಗ್ಗಡೆ ಅವರು ಹೇಳಿದರು.
ಸಂತೋಷ್ ಶೆಟ್ಟಿ ಅವರ ಸಮಾಜಮುಖೀ ಸೇವೆ ಶ್ಲಾಘನೀಯವಾಗಿದೆ. ಸಮಾಜದ ಎಲ್ಲರ ಪ್ರೀತಿ- ವಿಶ್ವಾಸಗಳನ್ನು ಗಳಿಸಿಕೊಂಡು ಉದ್ದೇಶಿತ ಕಾರ್ಯವನ್ನು ಸಾಧಿಸಿ¨ªಾರೆ. ಅದೇ ಭವನಕ್ಕೆ ಸಮಾಜದ ಮೇಲೆ ಪ್ರೀತಿ- ಗೌರವದೊಂದಿಗೆ ನಮ್ಮದೇ ಸಮಾಜ ಎಂಬ ನೆಲೆಯಲ್ಲಿ ಪ್ರೀತಿಯಿಂದ ದಾನಿಗಳು ದಾನವನ್ನು ಮಾಡಿ¨ªಾರೆ. ಎಲ್ಲರ ಅಪೇಕ್ಷೆಯಂತೆ ಭವನವನ್ನು ಬಲು ಸುಂದರವಾಗಿ, ಸುಸಜ್ಜಿತವಾಗಿ, ಅತ್ಯಾಕರ್ಷಕವಾಗಿ ರೂಪಿಸಲಾಗಿದೆ. ಭವಿಷ್ಯದಲ್ಲಿ ಬಂಟ ಸಮಾಜ ಇನ್ನಷ್ಟು ಯಶಸ್ಸನ್ನು ಸಾಧಿಸು ವಂತಾಗಲಿ. ಧರ್ಮಸ್ಥಳ ಶ್ರೀ ಮಂಜುನಾಥ ದೇವರ ಅನುಗ್ರಹ ನಿಮಗೆ ಸದಾಯಿರಲಿ ಎಂದು ಶುಭಹಾರೈಸಿದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿ ಓಣಿಮಜಲು, ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್, ಚರಿಶ್ಮಾ ಬಿಲ್ಡರ್ಸ್‌ನ ಸಿಎಂಡಿ ಸುಧೀರ್ ಶೆಟ್ಟಿ, ಲತಾ ಸುಧೀರ್ ಶೆಟ್ಟಿ, ಐಶ್ವರ್ಯಾ ರೈಯವರ ತಾಯಿ ವೃಂದಾ ರೈ, ಪುಣೆಯ ಉಸ್ತುವಾರಿ ಸಚಿವ ಗಿರೀಶ್ ಬಾಪಟ್, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ| ವಿನಯ್ ಹೆಗ್ಡೆ, ವಿಕೆ ಗ್ರೂಪ್ ಆಪ್ ಕಂಪೆನೀಸ್‌ನ ಸಿಎಂಡಿ ಕೆ. ಎಂ. ಶೆಟ್ಟಿ, ಫೆಡರೇಷನ್ ಆಪ್ ವಲ್ಡ…ì ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷ ಡಾ| ಎಂ. ಮೋಹನ್ ಆಳ್ವ, ಸಚ್ಚಿದಾನಂದ ಶೆಟ್ಟಿ, ಪುಣೆ ಮಹಾನಗರಪಾಲಿಕೆಯ ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಸದಾನಂದ ಕೃಷ್ಣ ಶೆಟ್ಟಿ, ಶಾಸಕಿ ಮೇಧಾ ಕುಲಕರ್ಣಿ, ಚಿಂಚಾÌಡ್‌ನ ಶಾಸಕ ಲಕ್ಷ್ಮಣ್ ಪಿ. ಜಗತಾಪ್, ಸ್ಥಳೀಯ ನಗರ ಸೇವಕರಾದ ಸ್ವಪ್ನಾಲಿ ಪಿ. ಸಾಯ್ಕರ್, ಜ್ಯೋತಿ ಕಲಮ್ಕರ್, ಅಮೋಲ್ ಬಲವಾಡ್ಕರ್, ಬಾಬುರಾವ್ ಚೆಂಡೇರೆ, ನಗರ ಸೇವಕಿ ಸುಜಾತಾ ಎಸ್. ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ ಶೆಟ್ಟಿ, ಮಾಧವ ಆರ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಗೌರವ ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ ಶೆಟ್ಟಿ ಕಳತ್ತೂರು, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ ಉಪಸ್ಥಿತರಿದ್ದರು. ದೀಪ ಪ್ರಜ್ವಲಿಸಿ ಸಭಾಂಗಣವನ್ನು ಉದ್ಘಾಟಿಸಲಾಯಿತು.
ಡಾ| ಹೆಗ್ಗಡೆಗೆ ಸಮ್ಮಾನ
ಡಾ| ವೀರೇಂದ್ರ ಹೆಗ್ಗಡೆಯವರನ್ನು ಸಂಘದ ವತಿಯಿಂದ ಇದೇ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಮಾಜಿ ಅಧ್ಯಕ್ಷ ಸಿಎ ಸದಾನಂದ ಶೆಟ್ಟಿ ವೀರೇಂದ್ರ ಹೆಗ್ಗಡೆ ಅವರ ಸಮ್ಮಾನ ಪತ್ರವನ್ನು ವಾಚಿಸಿದರು. ವೀರೇಂದ್ರ ಹೆಗ್ಗಡೆಯವರನ್ನು ಶೋಭಾಯಾತ್ರೆಯ ಮೂಲಕ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾ ಯಿತು. ಮೊದಲಿಗೆ ಭವನದ ಅಂಗಳದಲ್ಲಿ ಬಂಟ ಧ್ವಜಾರೋಹಣ ಮಾಡಲಾಯಿತು. ಭವನದ ಒಳಗಡೆ ಪ್ರವೇಶಿಸುತ್ತಿದ್ದಂತೆ ರಿಬ್ಬನ್ ತುಂಡರಿಸಿ ಸಿಂಗಾರಗೊಂಡ ಚಾವಡಿಯಲ್ಲಿ ದೀಪವನ್ನು ಪ್ರಜ್ವಲಿಸಿ ಭವನವನ್ನು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಅವರು ಸ್ವಾಗತಿಸಿದರು. ಅಶೋಕ್ ಪಕ್ಕಳ ಮತ್ತು ಕರ್ನೂರು ಮೋಹನ್ ರೈ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಅವರು ವಂದಿಸಿದರು.
ಕರ್ಮಭೂಮಿಯನ್ನಾಗಿಸಿ…
ತುಳುನಾಡಿನಿಂದ ಆಗಮಿಸಿ ಪುಣೆಯನ್ನು ಕರ್ಮಭೂಮಿಯನ್ನಾಗಿಸಿಕೊಂಡು ತುಳುವರು ಪ್ರಾಮಾಣಿಕತೆ, ಸತ್ಯ, ಧರ್ಮ, ಕರ್ತವ್ಯ ಪ್ರಜ್ಞೆಯನ್ನು ಉಳಿಸಿಕೊಂಡು ಧರ್ಮ ಕಾರ್ಯದಲ್ಲಿ ತೊಡಗಿಕೊಂಡಿರುವುದರಿಂದಲೇ ಸಮಾಜಮುಖೀ ಚಿಂತನೆಯೊಂದಿಗೆ ಇಂತಹ ಸಮಾಜದ ಭವನವನ್ನು ನಿರ್ಮಿಸಲು ಸಾಧ್ಯವಾಯಿತು ಎಂದು ಹೇಳಿದ ಹೆಗ್ಗಡೆ ಅವರು ನಾವೆಲ್ಲಿಗೆ ಹೋದರೂ ತುಳುನಾಡಿನ ಭಾಷೆ, ಸಂಸ್ಕೃತಿಯನ್ನು ಮರೆಯದೆ ಕಾಪಾಡಿಕೊಂಡು ಬರಬೇಕಾಗಿದೆ ಎಂದರು.
ಚಿತ್ರ-ವರದಿ : ಕಿರಣ್ ಬಿ.ರೈ ಕರ್ನೂರು.