ಪುಣೆ: ಪುಣೆ ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಸಭೆಯೊಂದು ಸಂಘದ ಓಣಿ ಮಜಲು ಜಗನ್ನಾಥ ಶೆಟ್ಟಿ ಬಂಟರ ಭವನದ ಮೀಟಿಂಗ್ ಹಾಲ್‌ನಲ್ಲಿ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್ ಬೆಟ್ಟು ಸಂತೋಷ್ ಶೆಟ್ಟಿಯವರ ಅಧ್ಯಕ್ಷತೆ ಯಲ್ಲಿ ಜರಗಿತು.
ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆಯವರು ಕಳೆದ ಸಭೆಯ ವರದಿಯನ್ನು ಸಭೆಯ ಮುಂದಿಟ್ಟರು. ಗೌರವ ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ್ ಶೆಟ್ಟಿ ಆರ್ಥಿಕ ವ್ಯವಹಾರಗಳ ಮಾಹಿತಿಯನ್ನು ನೀಡಿದರು. ಭವನದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಮಾತನಾಡಿ, ಕಳೆದ ನಾಲ್ಕು ವರ್ಷಗಳ ನನ್ನ ಅಧ್ಯಕ್ಷತೆಯ ಕಾಲಾವಧಿಯಲ್ಲಿ ಪುಣೆ ಬಂಟರ ಸಂಘವು ಐತಿಹಾಸಿಕವಾದ ಕೆಲಸ ಗಳನ್ನು ಸಾಧಿಸಿದೆ ಎಂಬ ಅಭಿಮಾನ ನಮ್ಮದಾಗಿದೆ. ನೂತನ ಭವನ ನಿರ್ಮಾಣ ಸಂಘದ ಯಶಸ್ಸಿನ ಮೈಲುಗÇÉಾಗಿದ್ದು ಎಲ್ಲಕ್ಕಿಂತ ಮುಖ್ಯವಾಗಿ ಈ ಭವನ ನಿರ್ಮಿಸಲು ಕಾರಣೀಭೂತರಾದ ಸರ್ವ ದಾನಿಗಳನ್ನು ನಾವು ಭವಿಷ್ಯದಲ್ಲಿ ಯಾವತ್ತೂ ಮರೆಯದೆ ಗೌರವಗಳನ್ನು ಸಲ್ಲಿಸುತ್ತಿರಬೇಕಾಗಿದೆ. ಮುಂದೆ ಬರುವಂತಹ ಹೊಸ ಕಾರ್ಯಕಾರಿ ಸಮಿತಿಯಿರಲಿ, ಅಧ್ಯಕ್ಷರು ಯಾರೇ ಆಗಲಿ ಆದರೆ ಭವನದ ದಾನಿಗಳ ಕೊಡುಗೆಯನ್ನು ನೆನಪಿಡುವ ಕಾರ್ಯ ಆಗಬೇಕಾಗಿದೆ. ಅದೇ ರೀತಿ ಸಮಾಜದ ಅಭ್ಯುದಯದ ಕನಸಿ ನೊಂದಿಗೆ ಆರಂಭಿಸಿದ ಮಹತ್ವಾಕಾಂಕ್ಷೆಯ ಕಲ್ಪವೃಕ್ಷ ಯೋಜನೆ ಸಮಾಜದ ಎಲ್ಲ ಸ್ಥರದ ಜನರಿಗೆ, ಮುಖ್ಯವಾಗಿ ಅಗತ್ಯವಿರುವ ಜನರಿಗೆ ಆಶಾದಾಯಕವಾಗಿ ಕಾರ್ಯಾ ಚರಿಸಬೇಕಾಗಿದೆ. ಸುಮಾರು 5 ಕೋಟಿ ರೂಪಾಯಿಗಳ ಆರಂಭಿಕ ಯೋಜನೆ ಇದಾಗಿದ್ದು ಈಗಾಗಲೇ ಎರಡು ಕೋಟಿ ರೂಪಾಯಿಗಳ ನೆರವು ಲಭಿಸಿದ್ದು ಭವಿಷ್ಯದಲ್ಲಿ ಸಮಾಜಮುಖೀ ಕಾರ್ಯಗಳಿಗೆ ದಾನಿಗಳ ನೆರವಿನೊಂದಿಗೆ ಸಮಾಜಕ್ಕೆ ಹಿತಕಾರಿಯಾಗಿ ಉತ್ತಮ ಯೋಜನೆಯಾಗಿ ಮೂಡಿಬರಲಿ ಎಂಬ ಆಶಯ ನಮ್ಮದಾಗಿದೆ. ಕೇವಲ ಭವನ ನಿರ್ಮಿಸಿ ನಾವು ವಿರಮಿಸುವಂತಾಗಬಾರದು. ಈ ಭವನವನ್ನು ಸುವ್ಯವಸ್ಥಿತ ರೀತಿಯಲ್ಲಿ ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಳ್ಳದೆ ಒಗ್ಗಟಿನ ಮಂತ್ರ ನಮ್ಮದಾಗಬೇಕು. ಕಳೆದ ನಾಲ್ಕು ವರ್ಷಗಳಿಂದ ಸಂಘದ ಕಾರ್ಯ ದೇವರ ಕಾರ್ಯವೆಂದು ಭಾವಿಸಿ ಸಂಘದ ಸರ್ವ ಕಾರ್ಯಗಳಲ್ಲಿ ಹೆಗಲಿಗೆ ಹೆಗಲು ನೀಡಿ ಸಹಕಾರ ನೀಡಿದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಗಳಿಗೆ ಹೃದಯಾಂತರಾಳದ ಕೃತಜ್ಞತೆಗಳು. ಸಂಘದೊಂದಿಗೆ, ಸಮಾಜದೊಂದಿಗೆ ನಮ್ಮ ನಿರಂತರ ಸಂಪರ್ಕ, ಸದ್ಭಾವನೆ, ಸೌಹಾರ್ದತೆ ಮುಂದುವರಿಯಲಿ ಎಂದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಮಾಧವ ಆರ್. ಶೆಟ್ಟಿ, ಪದಾಧಿಕಾರಿಗ ಳಾದ ಚಂದ್ರಶೇಖರ ಶೆಟ್ಟಿ ನಿಟ್ಟೆ, ವಿವೇಕಾನಂದ್ ಶೆಟ್ಟಿ ಆವರ್ಸೆ, ಶಶೀಂದ್ರ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು, ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಸತೀಶ್ ಶೆಟ್ಟಿ, ಗಣೇಶ್ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ವಿಶ್ವನಾಥ ಶೆಟ್ಟಿ, ರಂಜಿತ್ ಶೆಟ್ಟಿ, ಪ್ರಶಾಂತ್ ಎ. ಶೆಟ್ಟಿ, ಸುಜಿತ್ ಶೆಟ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಕಾರ್ಯದರ್ಶಿ ಸುಲತಾ ಎಸ್. ಶೆಟ್ಟಿ, ಕೋಶಾಧಿಕಾರಿ ಸುಚಿತ್ರಾ ಎಸ್. ಶೆಟ್ಟಿ, ಸಂಘದ ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ಗಣೇಶ್ ಪೂಂಜಾ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ ಬೈಲೂರು, ಕಾರ್ಯದರ್ಶಿ ಶೇಖರ್ ಸಿ. ಶೆಟ್ಟಿ ಉಪಸ್ಥಿತರಿದ್ದರು.
ಚಿತ್ರ-ವರದಿ: ಕಿರಣ್ ಬಿ.ರೈ ಕರ್ನೂರು