Advertisement
ಈ ಸಭೆಯಲ್ಲಿ ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಇದರ ಅಧ್ಯಕ್ಷರಾದ ಡಾ| ಸತ್ಯಪ್ರಕಾಶ ಶೆಟ್ಟಿ ಉಪಸ್ಥಿತರಿದ್ದು ಮಾತನಾಡಿ, ಪುಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಬಂಟರ ಭವನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯುತ್ತಿರುವುದು ಸಂತಸದ ವಿಚಾರವಾಗಿದೆ. ಬಹಳ ಹಿಂದಿನಿಂದಲೂ ನಮ್ಮ ನಮ್ಮ ಮನೆಗಳಲ್ಲಿ ವೆಂಕಟರಮಣ ದೇವರನ್ನು ಆರಾಧಿಸಿಕೊಂಡು ಬಂದವರಾಗಿದ್ದು ಇದೊಂದು ಧಾರ್ಮಿಕ ಪ್ರಕ್ರಿಯೆಯಾಗಿದೆ. ಇಂತಹ ಆಚರಣೆಗಳಿಂದ ನಮ್ಮ ಧಾರ್ಮಿಕ ಪ್ರಜ್ಞೆ ಜಾಗೃತಗೊಳ್ಳುವುದಲ್ಲದೆ ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಗು ತ್ತದೆ. ಮುಖ್ಯವಾಗಿ ನಮ್ಮ ಯುವ ಪೀಳಿಗೆಗೆ ಇಂದಿನ ದಿನಮಾನಗಳಲ್ಲಿ ಧಾರ್ಮಿಕ ಪ್ರಜ್ಞೆಯ ನ್ನು ಮೂಡಿಸುವ ಕಾರ್ಯ ಆಗಬೇಕಾಗಿದೆ. ಶ್ರದ್ಧಾ ಭಕ್ತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದರೆ ನಮಗೆ ದೈವಾನುಗ್ರಹ ಸಿಗುವುದರಲ್ಲಿ ಅನುಮಾನವಿಲ್ಲ. ಆದುದರಿಂದ ಕಾರ್ಯಕ್ರಮವನ್ನು ಉತ್ತಮವಾಗಿ ಸಂಯೋ ಜಿಸಬೇಕಾಗಿದೆ. ನಾವು ಬಂಟರು ಮೂಲತಃ ಗುರು ಪರಂಪರೆಯಿಂದ ಬಂದಿಲ್ಲ ವಾದರೂ ನಮ್ಮ ಹಿರಿಯರು ನಮಗೆ ಮಾರ್ಗ ದರ್ಶನ ಮಾಡುತ್ತಿದ್ದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಗುರುಗಳ ಮಾರ್ಗದರ್ಶನ ನಮಗೆ ಹಾಗೂ ಯುವ ಪೀಳಿಗೆಗೆ ಅಗತ್ಯವಾಗಿದ್ದು ಈ ಸಮಾಜಕ್ಕೆ ಒಳಿತನ್ನು ಮಾಡುವ ಜ್ಞಾನ ಭಂಡಾರವನ್ನು ಹೊಂದಿದ್ದ ಯಾವುದೇ ಗುರುಗಳನ್ನು ಯಾವುದೇ ಭೇದ-ಭಾವವನ್ನು ಮಾಡದೆ ಮಾರ್ಗ ದರ್ಶಕರಾಗಿ ಸ್ವೀಕರಿಸಬಹುದಾಗಿದೆ. ನಮ್ಮ ಧರ್ಮ, ಜಾತಿ ಹಾಗೂ ಭಾಷೆಗಳಲ್ಲಿ ಅಭಿಮಾನ ಬೆಳೆಸಿಕೊಂಡು ಋಣಸಂದಾಯ ಮಾಡುವ ಸಾಮಾಜಿಕ ಜವಾಬ್ದಾರಿ ನಮ್ಮಲ್ಲಿದೆ ಎಂದರು.
ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ಮಾತನಾಡಿ, ನಮ್ಮಲ್ಲಿ ಧರ್ಮ ಜಾಗೃತಿಯ ಶ್ರೀನಿವಾಸ ಕಲ್ಯಾಣೋತ್ಸವ ನಡೆಯುತ್ತಿರುವುದು ನಮ್ಮ ಸೌಭಾಗ್ಯವಾಗಿದೆ. ಭಕ್ತಿಪೂರ್ವಕವಾಗಿ ನಾವೆಲ್ಲರೂ ಸಹಕಾರ ನೀಡುತ್ತೇವೆ ಎಂದರು.
Related Articles
Advertisement
ಸಭೆಯಲ್ಲಿ ಕಾರ್ಯಕ್ರಮದ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು. ಡಾ | ಸತ್ಯಪ್ರಕಾಶ್ ಶೆಟ್ಟಿ ಹಾಗೂ ಭಾಸ್ಕರ ಶೆಟ್ಟಿ ಥಾಣೆ ಇವರುಗಳನ್ನು ಸಂಘದ ವತಿಯಿಂದ ಪುಷ್ಪಗುತ್ಛ ನೀಡಿ ಸತ್ಕರಿಸಲಾಯಿತು. ಸಭೆಯಲ್ಲಿ ಪುಣೆ ಬಂಟರ ಸಂಘದ ಪದಾಧಿಕಾರಿಗಳಾದ ಸತೀಶ್ ಶೆಟ್ಟಿ, ವಿವೇಕಾನಂದ ಶೆಟ್ಟಿ ಆವರ್ಸೆ, ಪ್ರಶಾಂತ್ ಎ. ಶೆಟ್ಟಿ, ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಸುಜಿತ್ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಪದಾಧಿಕಾರಿಗಳಾದ ಗಣೇಶ್ ಪೂಂಜಾ, ಹರೀಶ್ ಶೆಟ್ಟಿ, ಪಿಂಪ್ರಿ-ಚಿಂಚಾÌಡ್ ಬಂಟರ ಸಂಘದ ಕಾರ್ಯದರ್ಶಿ ದಿನೇಶ್ ಶೆಟ್ಟಿ ಬಜಗೋಳಿ, ನಿತಿನ್ ಶೆಟ್ಟಿ ನಿಟ್ಟೆ, ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಆನಂದ್ ಶೆಟ್ಟಿ, ಜತೆ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಪಿನ್ ಬಂಟರ ಸಂಘದ ಮಹಿಳಾ ವಿಭಾಗದ ಸುಲತಾ ಎಸ್. ಶೆಟ್ಟಿ, ವಿನಯಾ ಶೆಟ್ಟಿ, ದಿವ್ಯಾ ಎಸ್. ಶೆಟ್ಟಿ, ನಯನಾ ಜೆ. ಶೆಟ್ಟಿ ಉಪಸ್ಥಿತರಿದ್ದರು.
ನಮ್ಮ ಸಾಂಸ್ಕೃತಿಕ ಸಮಿತಿಯ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದ್ದು ಇದರ ಪೂರ್ಣ ಜವಾಬ್ದಾರಿಯನ್ನು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹಾಗೂ ಚಂದ್ರಶೇಖರ ಶೆಟ್ಟಿಯವರು ವಹಿಸಿಕೊಂಡಿದ್ದು, ನಮ್ಮ ಸಂಘದೊಂದಿಗೆ ಪಿಂಪ್ರಿ-ಚಿಂಚಾÌಡ್ ಬಂಟರ ಸಂಘ ಹಾಗೂ ಬಂಟ್ಸ್ ಅಸೋಸಿಯೇಶನ್ ಪುಣೆ ಸಹಕಾರ ನೀಡಲಿದೆ. ನಮ್ಮಲ್ಲಿ ಯಾವುದೇ ಜಾತಿ, ಸಂಘ ಸಂಸ್ಥೆಗಳೊಂದಿಗೆ ಭೇದಭಾವವಿಲ್ಲ. ಇದೊಂದು ಧಾರ್ಮಿಕ ಕಾರ್ಯಕ್ರಮ ವಾಗಿದ್ದು. ಎಲ್ಲಾ ಸಂಘ ಸಂಸ್ಥೆಗಳೂ ಸೇರಿದಂತೆ ನಮ್ಮ ಸಂಘದ ಕಾರ್ಯಕಾರಿ ಸಮಿತಿ, ಯುವ ವಿಭಾಗ, ಮಹಿಳಾ ವಿಭಾಗ ಎಲ್ಲರೂ ಸಹಕಾರ ನೀಡಬೇಕು.-ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು
ಅಧ್ಯಕ್ಷರು : ಪುಣೆ ಬಂಟರ ಸಂಘ ಇದೊಂದು ಧಾರ್ಮಿಕ ಕಾರ್ಯಕ್ರಮವಾಗಿದ್ದು ಜೀವನದಲ್ಲಿ ಧಾರ್ಮಿಕ ಪ್ರಜ್ಞೆ, ಸಂಸ್ಕೃತಿಯ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ. ನಮ್ಮ ಸಮಿತಿ ಈ ಕಾರ್ಯಕ್ರಮದ ಪೂರ್ತಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಆಯೋಜಿಸುತ್ತೇವೆ. ಉತ್ತಮ ಜ್ಞಾನವನ್ನು ನೀಡುವ ಎಲ್ಲಾ ಗುರುಗಳಿಂದ ಉತ್ತಮ ವಿಚಾರಗಳನ್ನು ಕಲಿಯಲು ಸಾಧ್ಯವಿದೆ ಆದುದರಿಂದ ಎಲ್ಲಾ ಗುರುಗಳು ನಮಗೆ ಸಮಾನರು
– ಪ್ರವೀಣ್ ಶೆಟ್ಟಿ ಪುತ್ತೂರು
ಕಾರ್ಯಾಧ್ಯಕ್ಷರು : ಸಾಂಸ್ಕೃತಿಕ ಸಮಿತಿ ಪುಣೆ ಬಂಟರ ಸಂಘ ಚಿತ್ರ-ವರದಿ : ಕಿರಣ್ ಬಿ ರೈ ಕರ್ನೂರು