Advertisement

ಪುಣೆ ಬಂಟರ ಸಂಘ ಜಗನ್ನಾಥ ಶೆಟ್ಟಿ ಅಭಿನಂದನಾ ಗ್ರಂಥ ಬಿಡುಗಡೆ

03:51 PM Oct 09, 2018 | Team Udayavani |

ಪುಣೆ: ಪುಣೆ ಬಂಟರ ಸಂಘದ ಅಭಿವೃದ್ಧಿಯ ಹರಿಕಾರ, ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿರುವ  ಜಗನ್ನಾಥ ಶೆಟ್ಟಿಯವರ ಸಿದ್ಧಿ ಸಾಧನೆಗಳನ್ನೊಳಗೊಂಡ ಅಜಾತ ಶತ್ರು ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸುವ ಪುಣ್ಯ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ದೊರಕಿರುವುದು ದೊಡ್ಡ ಸೌಭಾಗ್ಯವಾಗಿದ್ದು  ಮನಸ್ಸಿಗೆ ಅಭಿಮಾನವಾಗುತ್ತಿದೆ. ಅವರಂತಹ ವ್ಯಕ್ತಿ ಕೇವಲ ವ್ಯಕ್ತಿಯಾಗಿರದೆ ಬಂಟ ಸಮಾಜದ ಬಲು ದೊಡ್ಡ ಪ್ರೇರಣಾ ಶಕ್ತಿಯಾಗಿ¨ªಾರೆ ಎಂದು ಉದ್ಯಮಿ, ಆಲ್‌ ಕಾರ್ಗೋ ಲಾಜಿಸ್ಟಿಕ್ಸ್‌ನ ಕಾರ್ಯಾಧ್ಯಕ್ಷ  ಶಶಿಕಿರಣ್‌ ಶೆಟ್ಟಿ ಅಭಿಪ್ರಾಯಪಟ್ಟರು.
ಅ. 7 ರಂದು  ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದ ಲತಾ ಸುಧೀರ್‌ ಶೆಟ್ಟಿ ವೇದಿಕೆಯಲ್ಲಿ  ಓಣಿಮಜಲು ಜಗನ್ನಾಥ ಶೆಟ್ಟಿಯವರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ, ಶಕುಂತಳಾ ಜಗನ್ನಾಥ ಶೆಟ್ಟಿ ಕಲ್ಪವೃಕ್ಷ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಉತ್ಸಾಹಿ ನಾಯಕತ್ವದ ಗುಣಗಳನ್ನು ಹೊಂದಿದ ಸಂತೋಷ್‌ ಶೆಟ್ಟಿಯವರ ನೇತೃ ತ್ವದಲ್ಲಿ ಸುಂದರವಾದ ಪುಣೆ ಬಂಟರ ಭವನವು ನಿರ್ಮಾಣಗೊಂಡಿರುವುದು ಅಭಿನಂದನೀಯ ಕಾರ್ಯವಾಗಿದೆ ಎಂದರು. 

Advertisement

ಸಂಘದ ಅಭಿವೃದ್ಧಿಯ ದಿಶೆಯಲ್ಲಿ ತನ್ನ ಅಮೂಲ್ಯ ಸಮಯವನ್ನು ಮೀಸಲಿ ಟ್ಟು ಸಮಾಜದ ಹಿತಚಿಂತನೆಯಲ್ಲಿ ತೊಡಗಿಸಿಕೊಂ ಡಿರುವ ಸಂತೋಷ್‌ ಶೆಟ್ಟಿಯವರಂತಹ ಜನರು ಯಾವುದೇ ಸಮಾಜದಲ್ಲಿ ಕಾಣಸಿಗುವುದು ತೀರಾ  ಅಪರೂಪವಾಗಿದೆ. ಅವರಿಗೆ ಪುಣೆ ಬಂಟರೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಅದೇ  ರೀತಿ ಉತ್ತಮ  ಧ್ಯೇಯದೊಂದಿಗೆ ಕಲ್ಪವೃಕ್ಷ ಯೋಜನೆಯು ಇಂದು ಉದ್ಘಾಟ ನೆಗೊಂಡಿರುವುದು ಅರ್ಥಪೂರ್ಣ ಕಾರ್ಯ ಕ್ರಮವಾಗಿದೆ. ಮುಖ್ಯವಾಗಿ ನಮ್ಮ ಯುವ ಸಮುದಾಯವನ್ನು ಸಂಘದೊಂದಿಗೆ ಜೋಡಿ ಸುವ ಕಾರ್ಯ ಆಗಬೇಕಾಗಿದೆ. ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಆತ್ಮವಿಶ್ವಾಸ, ಕಠಿಣ ಪರಿಶ್ರಮ, ಉತ್ತಮ ಗುರಿ ಯನ್ನು ಹೊಂದಬೇಕಾಗಿದೆ ಎಂದರು.

ಸಂಘದ ನೂತನ ಕಲ್ಪವೃಕ್ಷ ಪರಿಕಲ್ಪನೆಯ  ಅನ್ನದಾತ ಯೋಜನೆಯ  ಪ್ರಾಯೋಜಕರಾದ ವಿಂಡ್ಸರ್‌  ರಿಫ್ರಾಕ್ಟರೀಸ್‌ ಇದರ ಆಡಳಿತ ನಿರ್ದೇಶಕರಾದ ದಯಾಶಂಕರ್‌ ಶೆಟ್ಟಿ ಮಾತನಾಡಿ,  ಪುಣೆಯಲ್ಲಿ ಬಂಟ ಸಮಾಜದಲ್ಲಿ ಅಗ್ರಗಣ್ಯರಾಗಿ ಗುರುತಿಸಿಕೊಳ್ಳುವ ಹೆಸರು  ಜಗನ್ನಾಥ ಶೆಟ್ಟಿಯವರ¨ªಾಗಿದೆ. ಅವರ ಮಾರ್ಗದರ್ಶನ, ಸಹಕಾರದಿಂದ ಸಂತೋಷ್‌ ಶೆಟ್ಟಿಯವರ ಸಾರಥ್ಯದಲ್ಲಿ ಸುಂದರ ಭವನ ತಲೆಯೆತ್ತಿರುವುದು ಅಭಿನಂದನೀಯವಾಗಿದೆ. ಇದು ನಿಜವಾಗಿಯೂ ದೇವರು ಮೆಚ್ಚುವ ಕೆಲಸವಾಗಿದೆ. ಅದೇ ರೀತಿ ಇಂದು ಕಲ್ಪವೃಕ್ಷ ಯೋಜನೆ ಸಂಘದ ಮೂಲಕ ಆರಂಭಗೊಂ ಡಿರುವುದರಿಂದ ಭವಿಷ್ಯದಲ್ಲಿ ಇದರಿಂದ ಸಮಾಜ ಬಾಂಧವರಿಗೆ ನೆರವಾಗಲಿದೆ ಎಂದರು.

ವೇದಿಕೆಯಲ್ಲಿ  ಸಂಘದ ಗೌರವಾಧ್ಯಕ್ಷ ಓಣಿಮಜಲು ಜಗನ್ನಾಥ ಶೆಟ್ಟಿ, ಆರೋಗ್ಯದಾತ ಯೋಜನೆಯ ಪ್ರಾಯೋಜಕರಾದ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಜಯಂತ್‌ ಕುಮಾರ್‌ ಶೆಟ್ಟಿ, ಶೋಭಾ ಜೆ. ಶೆಟ್ಟಿ, ಪ್ರತಿಭಾ ಡಿ. ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಗೌರವ ಕೋಶಾಧಿಕಾರಿ ಎರ್ಮಾಳ್‌ ಚಂದ್ರಹಾಸ ಶೆಟ್ಟಿ, ಉಪಾಧ್ಯಕ್ಷರಾದ ಮಾಧವ ಆರ್‌. ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ  ಪ್ರವೀಣ್‌ ಶೆಟ್ಟಿ ಪುತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ  ದಿನೇಶ್‌ ಶೆಟ್ಟಿ ಕಳತ್ತೂರು, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್‌ ಶೆಟ್ಟಿ ಬೈಲೂರು, ಯುವ ವಿಭಾಗದ ಕಾರ್ಯಾಧ್ಯಕ್ಷ ರೋನಕ್‌ ಜಯ ಶೆಟ್ಟಿ ಅವರು ಉಪಸ್ಥಿತರಿದ್ದರು.

ಮೊದಲಿಗೆ ಓಣಿಮಜಲು ಜಗನ್ನಾಥ ಶೆಟ್ಟಿಯವರ ಅಭಿನಂದನಾ ಗ್ರಂಥ  ಅಜಾತ ಶತ್ರು   ಅತಿಥಿಗಣ್ಯರ ಹಸ್ತದಿಂದ ಬಿಡುಗಡೆ ಗೊಳಿಸಿ ಜಗನ್ನಾಥ ಶೆಟ್ಟಿಯವರನ್ನು ಪೇಟ ತೊಡಿಸಿ, ಅಭಿನಂದನಾ ಗ್ರಂಥ ಸಮರ್ಪಿಸಿ, ನೆನಪಿನ ಕಾಣಿಕೆಯೊಂದಿಗೆ ಸಮ್ಮಾನಿಸಲಾಯಿತು. ಸಂಘದ ನೂತನ ಕಲ್ಪವೃಕ್ಷ ಯೋಜನೆಯನ್ನು ಅತಿಥಿಗಣ್ಯರು ಉದ್ಘಾಟಿಸಿದರು. ಕಲ್ಪವೃಕ್ಷ  ಯೋಜನೆಯ ಪ್ರಾಯೋಜಕರಾದ ದಯಾಶಂಕರ್‌ ಶೆಟ್ಟಿ ದಂಪತಿ, ಜಯಂತ್‌ ಕುಮಾರ್‌ ದಂಪತಿ ಹಾಗೂ ಅತಿಥಿಗಳನ್ನು ಸಮ್ಮಾನಿಸಲಾಯಿತು.  ಭವನಕ್ಕೆ ರಜತ ದೇಣಿಗೆ ನೀಡಿದ ಮಹಾದಾನಿಗಳನ್ನು ಸಮ್ಮಾನಿಸಲಾಯಿತು.

Advertisement

ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ, ಪ್ರಾದೇಶಿಕ ಸಮಿತಿಗಳು, ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ  ಆನಂದ್‌ ಶೆಟ್ಟಿ ಮಿಯ್ನಾರು ಮತ್ತು ಕಾರ್ಯಕಾರಿ ಸಮಿತಿ ಮತ್ತು ಮಹಿಳಾ ವಿಭಾಗ, ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಅಧ್ಯಕ್ಷ ವಿಜಯ್‌ ಶೆಟ್ಟಿ ಬೋರ್ಕಟ್ಟೆ ಮತ್ತು ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಅಜಾತ ಶತ್ರು ಅಭಿನಂದನಾ ಗ್ರಂಥದ ಸಂಪಾದಕ ಮಂಡಳಿ ಇವರುಗಳನ್ನು ಸಮ್ಮಾನಿಸಲಾಯಿತು.

ಅತಿಥಿಗಳನ್ನು ಸುಧಾಕರ್‌ ಸಿ. ಶೆಟ್ಟಿ, ಗಣೇಶ್‌ ಹೆಗ್ಡೆ, ಪ್ರಶಾಂತ್‌ ಶೆಟ್ಟಿ, ಚಂಪಾ ಶೆಟ್ಟಿ, ಅಜಿತ್‌ ಹೆಗ್ಡೆ ಪರಿಚಯಿಸಿದರು. ನಿತೇಶ್‌ ಶೆಟ್ಟಿ ಎಕ್ಕಾರು ಹಾಗೂ ಸುಲತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಲತಾ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನದ ಗಾನಗಂಧರ್ವ ಪಟ್ಲ ಸತೀಶ್‌ ಶೆಟ್ಟಿ ಮತ್ತು ಬಳಗದಿಂದ  ಯಕ್ಷಗಾನ ನೃತ್ಯ ವೈಭವ ಪ್ರದರ್ಶನಗೊಂಡಿತು. ಸ್ನೇಹಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ, ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

ಪುಣೆಯ ಹಿರಿಯ ಸಾಧಕರಾದ ಜಗನ್ನಾಥ ಶೆಟ್ಟಿಯವರು ಸಮಾ ಜದ ಹೆಮ್ಮೆಯ ಆಸ್ತಿಯಾಗಿ¨ªಾರೆ. ಪುಣೆ ಬಂಟರÇÉೆ ಭೀಷ್ಮ ಪಿತಾಮಹಾನಿದ್ದಂತೆ. ಅಜಾತಶತ್ರು ಬಿರು ದನ್ನೂ ಪ್ರಧಾನಿಸಿ ಅಭಿನಂದನಾ ಗ್ರಂಥ ಸಮರ್ಪಿಸಿ ಜಗನ್ನಾಥ ಶೆಟ್ಟಿಯವರನ್ನು ಅಭಿನಂದಿಸಿರುವುದು ಅಭಿಮಾನದ ಸಂಗತಿ ಯಾಗಿದೆ. ಪುಣೆಯಲ್ಲಿ ಸಂತೋಷ್‌ ಶೆಟ್ಟಿ ಯವರ ದಕ್ಷ ನೇತೃತ್ವದಲ್ಲಿ ಉತ್ತಮವಾದ ಭವನನಿರ್ಮಿಸಿರುವುದಲ್ಲದೆ ಶಿವಾಜಿ ಮಹಾ ರಾಜರ ಪ್ರತಿಮೆಯನ್ನೂ ಅನಾವರಣಗೊ ಳಿಸಿರುವುದು ಹೆಮ್ಮೆಯ ವಿಷಯವಾಗಿದೆ.  
-ಗೋಪಾಲ್‌ ಶೆಟ್ಟಿ , ಸಂಸದರು

ಪುಣೆಯ ಜಗನ್ನಾಥ ಶೆಟ್ಟಿಯವರನ್ನು  ಯುಗಪುರುಷ ಎನ್ನಬಹುದಾಗಿದೆ. ಉನ್ನತ ವ್ಯಕ್ತಿತ್ವವನ್ನು ಹೊಂದಿದ ಅವರು  ಭವಿಷ್ಯದ ಪೀಳಿಗೆಗೆ ಅವರೊಬ್ಬ ಆದರ್ಶರಾಗಿ¨ªಾರೆ. ಅವರ ಅಭಿನಂದನೆ ಶ್ಲಾಘನೀಯ ಕಾರ್ಯವಾಗಿದೆ. ಪುಣೆಯಲ್ಲಿ ಬಂಟರ ಸಂಘ ಸಂತೋಷ್‌ ಶೆಟ್ಟಿಯವರ ನೇತೃತ್ವದಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದು ಭವಿಷ್ಯದಲ್ಲಿ ಸಂಘದ ಮೂಲಕ ಶಿಕ್ಷಣ  ಸಂಸ್ಥೆಗಳು, ಆಸ್ಪತ್ರಗಳು ನಿರ್ಮಾಣಗೊಂಡು ಸಮಾಜಕ್ಕೆ ಸೇವೆ ನೀಡುವಂತಾಗಲಿ.  
 – ಸಿಎ ಶಂಕರ್‌ ಶೆಟ್ಟಿ , ಮಾಜಿ ಅಧ್ಯಕ್ಷರು : ಬಂಟರ ಸಂಘ ಮುಂಬಯಿ

ನಮ್ಮ ಮಾರ್ಗದರ್ಶಕ,ಪುಣೆಯ ಮಹಾದಾನಿ, ದೇವರೂಪಿ ಯಂತಿದ್ದ ಜಗನ್ನಾಥ ಶೆಟ್ಟಿಯವರ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ, ಅಜಾತಶತ್ರು ಬಿರು ದನ್ನಿತ್ತು ಸಂಘದಿಂದ ಗೌರವಸಲ್ಲಿಸುವ ಇಂದಿನ ಕಾರ್ಯಕ್ರಮ ಬಂಟರ ಸಂಘದ ಇತಿಹಾಸದಲ್ಲಿ  ಸ್ಮರಣೀಯವಾಗಲಿದೆ. ಅದೇ ರೀತಿ ಶಕುಂತಲಾ ಜಗನ್ನಾಥ ಶೆಟ್ಟಿಯವರ ಹೆಸರಿನಲ್ಲಿ ಮಹತ್ವಾ ಕಾಂಕ್ಷೆಯ ಕಲ್ಪವೃಕ್ಷ ಯೋಜನೆ ಉದ್ಘಾಟನೆ ಗೊಂಡಿದ್ದು ಭವಿಷ್ಯದ ಸಮಾಜ ಸೇವೆಗೆ ಮುನ್ನುಡಿಯಾಗಿದೆ. ಶಶಿಕಿರಣ್‌ ಶೆಟ್ಟಿ, ದಯಾ ಶಂಕರ್‌ ಶೆಟ್ಟಿ, ಜಯಂತ್‌ ಕುಮಾರ್‌ ಶೆಟ್ಟಿ, ಗೋಪಾಲ್‌ ಶೆಟ್ಟಿ, ಸಿಎ ಶಂಕರ್‌ ಶೆಟ್ಟಿ ಅವರಂ ತಹ ಮಹಾದಾನಿಗಳಿಂದ ಇಂತಹ ಕಾರ್ಯ ಸಾಕಾರ ವಾಗುತ್ತಿದ್ದು ದಾನಿಗಳೆಲ್ಲ ರಿಗೂ ಕೃತಜ್ಞತೆಗಳು. ಸಂಘದ  ಮಹಿಳಾ ವಿಭಾಗ, ಯುವ ವಿಭಾಗ, ಪ್ರಾದೇಶಿಕ ಸಮಿತಿ ಗಳಿಗೂ ತನ್ನೊಂದಿಗೆ ಸಂಘದ ಕಾರ್ಯದಲ್ಲಿ ಹೆಗ ಲು ನೀಡಿ ಸಹಕಾರ ನೀಡಿರುವುದಕ್ಕೆ ವಂದ ನೆಗಳು. ನಾವೆಲ್ಲರೂ ಒಗ್ಗಟ್ಟಿನಿಂದ  ಸಂಘ ದೊಂದಿಗೆ ಕೈಜೋಡಿಸಿ ದೇಶಕ್ಕೆ ಮಾದರಿ ಯಾಗಿ ಗುರುತಿಸಿಕೊಳ್ಳುವಂತೆ  ಸಂಘವನ್ನು ಬೆಳೆಸೋಣಲಿ.  
– ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು , ಅಧ್ಯಕ್ಷರು : ಬಂಟರ ಸಂಘ ಪುಣೆ

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next