ಪುಣೆ: ಪುಣೆ ಬಂಟರ ಸಂಘ ವಿವಿಧ ಸಾಮಾಜಿಕ ಕಾರ್ಯ ಗಳೊಂದಿಗೆ ಕ್ರೀಡಾಕೂಟವನ್ನೂ ಆಯೋಜಿಸುವ ಮೂಲಕ ಸಮಾಜ ಬಾಂಧವರನ್ನು ಒಗ್ಗೂಡಿಸುವ ಕಾಯಕ ಮಾಡುತ್ತಿರುವುದು ಅಭಿನಂದ ನೀಯವಾಗಿದೆ. ಜೀವನದಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವಲ್ಲಿ, ನಾಯಕತ್ವದ ಗುಣ ಗಳೊಂದಿಗೆ ಉನ್ನತ ಸ್ಥಾನಮಾನಗಳನ್ನು ಗಳಿಸುವಲ್ಲಿ, ಮುಖ್ಯವಾಗಿ ಸನ್ನಡತೆಯನ್ನು ರೂಪಿಸಿಕೊಳ್ಳುವಲ್ಲಿ ಕ್ರೀಡಾ ಮನೋ ಭಾವ ಮುಖ್ಯವಾಗಿದೆ. ಸಂಘ ಸಂಸ್ಥೆಗಳು ಇಂತಹ ಕ್ರೀಡಾಕೂಟವನ್ನು ಆಯೋಜಿಸುವುದರಿಂದ ಯುವ ಪೀಳಿಗೆ ಯನ್ನು ಒಗ್ಗಟಾಗಿಸುವುದರ ಜೊತೆಗೆ ಉತ್ತಮ ಪೋ›ತ್ಸಾಹ ನೀಡಿದಂತಾಗುತ್ತದೆ. ಮಕ್ಕಳಿಗೆ ಉತ್ತಮ ವಿದ್ಯೆಯನ್ನು ನೀಡುವುದರ ಜತೆಗೆ ಹೆಣ್ಣು ಗಂಡೆಂಬ ಬೇಧಭಾವವನ್ನು ಮಾಡದೆ ಕ್ರೀಡಾಭಿಮಾನವನ್ನೂ ಬೆಳೆಸಿಕೊಳ್ಳುವಲ್ಲಿ ಪ್ರೇರೇಪಿಸಬೇಕಾಗಿದೆ ಎಂದು ಮುಂಬಯಿ ಥಾಣೆಯ ಉದ್ಯಮಿ ಕ್ರಿಸ್ಟಲ್ ಆಟೋಮೇಶನ್ ಪ್ರೈವೇಟ್ ಲಿಮಿಟೆಡ್ ಇದರ ಮುಖ್ಯ ಆಡಳಿತ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಅವರು ನುಡಿದರು.
ಅವರು ಡಿ. 10ರಂದು ನಗರದ ಗರ್ವಾರೆ ಕಾಲೇಜು ಮೈದಾನದಲ್ಲಿ ನಡೆದ ಪುಣೆ ಬಂಟರ ಸಂಘದ ವಾರ್ಷಿಕ ಕ್ರೀಡೋತ್ಸವದ ಸಮಾರೋಪ ಸಮಾರಂಭದ ಮುಖ್ಯ ಅತಿಯಾಗಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ಪುಣೆಯಲ್ಲಿ ಸಂತೋಷ್ ಶೆಟ್ಟಿಯವರ ದಕ್ಷ ನೇತೃತ್ವದಲ್ಲಿ ಇಷ್ಟೊಂದು ಸುಸಜ್ಜಿತವಾದ ಸುಂದರ ಭವನ ನಿರ್ಮಾಣಗೊಂಡಿರುವುದನ್ನು ಕಂಡಾಗ ನಿಜಕ್ಕೂ ಆಶ್ಚರ್ಯವಾಯಿತು. ಇದೊಂದು ವಿಶ್ವ ಮಟ್ಟದಲ್ಲಿ ಗುರುತಿಸಿ ಕೊಳ್ಳುವಂತಹ ಅರ್ಹತೆಯನ್ನು ಹೊಂದಿದ್ದು, ಭವಿಷ್ಯದಲ್ಲಿ ವಿಶ್ವಸ್ಥರದ ಬಂಟರೆಲ್ಲರನ್ನು ಸೇರಿಸಿಕೊಂಡು ಕಾರ್ಯ ಕ್ರಮ ನಡೆಸುಸುವಂತಾಗಲಿ ಎಂದರು.
ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಅವರು ಮಾತನಾಡಿ, ಸಂಘದ ಕ್ರೀಡಾ ಸಮಿತಿಯ ನೇತೃತ್ವದಲ್ಲಿ ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಪ್ರಾದೇಶಿಕ ಸಮಿತಿಗಳ ಸಹಕಾರದೊಂದಿಗೆ ಇಂದಿನ ಕ್ರೀಡೋತ್ಸವ ಯಶಸ್ವಿಯಾಗಿ ಜರಗಿದ್ದು ಸಮಾಜ ಬಾಂಧವರೆಲ್ಲರೂ ಉತ್ಸಾಹದಿಂದ ಭಾಗವಹಿಸಿರುವುದಕ್ಕೆ ಆನಂದವಾಗುತ್ತಿದೆ. ಆಧುನಿಕ ಯಾಂತ್ರೀಕೃತ ಬದುಕಿನಲ್ಲಿ ಯಾರಿಗೂ ಸಮಯವಿಲ್ಲವಾಗಿದ್ದು ಇಂತಹ ಕ್ರೀಡಾಕೂಟವನ್ನು ಆಯೋಜಿಸುವುದರ ಮೂಲಕ ಸಮಾಜ ಬಾಂಧವರನ್ನು ಒಗ್ಗಟ್ಟಿನಿಂದ ಬೆಸೆಯುವ ಹಾಗೂ ಮುಖ್ಯವಾಗಿ ನಮ್ಮ ಮಕ್ಕಳನ್ನು ಪೋ›ತ್ಸಾಹಿಸಿ ಅವರಿಗೆ ಕ್ರೀಡೆಯ ಬಗ್ಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ನಮ್ಮ ಮಕ್ಕಳು ಕ್ರೀಡಾಕ್ಷೇತ್ರದಲ್ಲಿ ಗುರುತಿಸಿಕೊಂಡು ಯಶಸ್ಸನ್ನು ಗಳಿಸಿಸುವಂತಾಗಲಿ ಎಂದು ನುಡಿದು, ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲೂ ಸಮಾಜ ಬಾಂಧವರೆಲ್ಲರೂ ಭಾಗಿಗಳಾಗಿ ಇದೇ ರೀತಿಯ ಸಹಕಾರ ನೀಡಿ ಎಂದರು.
ಬಳ್ಳಾರಿಯ ವೈದ್ಯ ಡಾ| ರಾಮ ರಾಜ್ ಮಾತನಾಡಿ, ಇಂದಿನ ದಿನ ಗಳಲ್ಲಿ ಧಾವಂತದ ಬದುಕಿಗೆ ಮಾರು ಹೋಗಿರುವ ನಾವುಗಳು ನಮ್ಮ ಆರೋಗ್ಯದ ಬಗ್ಗೆ ಗಮನ ನೀಡುವುದನ್ನು ಮರೆತಿದ್ದೇವೆ. ನಮ್ಮ ಮಕ್ಕಳು ಟಿವಿ, ಮೊಬೈಲ್‌ಗಳಲ್ಲಿ ಆಟವಾಡುತ್ತಾ ಬೊಜ್ಜನ್ನು ಬೆಳೆಸುತ್ತಿದ್ದು ಮೈದಾನದಲ್ಲಿ ಆಟವಾಡಲು ಸಮಯವೇ ಇಲ್ಲವಾಗಿದೆ. ಆದುದರಿಂದ ನಾವು ಎಚ್ಚೆತ್ತುಕೊಂಡು ಮಕ್ಕಳನ್ನು ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸ ಬೇಕಾಗಿದೆ ಎಂದು ನುಡಿದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಜಗನ್ನಾಥ ಬಿ. ಶೆಟ್ಟಿ ಓಣಿಮಜಲು, ಉಪಾಧ್ಯಕ್ಷ ರಾಮಕೃಷ್ಣ ಶೆಟ್ಟಿ, ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ ಆವರ್ಸೆ ಇಸಾರಮಕ್ಕಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ ಬೈಲೂರು, ಮಹಿಳಾ ವಿಭಾಗದ ಸುಲತಾ ಎಸ್. ಶೆಟ್ಟಿ, ಶಮ್ಮಿ ಅಜಿತ್ ಹೆಗ್ಡೆ, ಸಾರಿಕಾ ಸಿ. ಶೆಟ್ಟಿ, ಸುಚಿತ್ರಾ ಶೆಟ್ಟಿ ಉಪಸ್ಥಿತರಿದ್ದರು.
ಅತಿಥಿಗಳನ್ನು ಪುಷ್ಪಗುತ್ಛ, ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ಕ್ರೀಡಾ ಸ್ಪರ್ಧೆ ಗಳಲ್ಲಿ ಭಾಗವಹಿಸಿ ಜಯಗಳಿಸಿದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿ ಸಲಾಯಿತು. ಸುಲತಾ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು. ಸಂಘದ ಕಾರ್ಯ ಕಾರಿ ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು, ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಗಳ ಸದಸ್ಯರು ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು