Advertisement
ಪುಣೆ ಬಂಟರ ಸಂಘದ ಕಲ್ಪವೃಕ್ಷ ಶಕುಂತಲಾ ಜಗನ್ನಾಥ ಶೆಟ್ಟಿ ಸಮಾಜ ಕಲ್ಯಾಣ ಯೋಜನೆಯ ಶೈಕ್ಷಣಿಕ ನೆರವು ವಿತರಣೆ, ಸೇವಾ ಸಾಧಕ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿಗಳ ದತ್ತು ಸ್ವೀಕಾರ ಹಾಗೂ ಭವನದ 4ನೇ ವಾರ್ಷಿಕೋತ್ಸವವನ್ನು ಆ. 13ರಂದು ಪುಣೆ ಬಂಟರ ಸಂಘದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಭವನದ ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿ ಗರ ಸಾಧನೆ ಅಗಾಧವಾದುದು. ಕನ್ನಡ ಹಾಗೂ ಮರಾಠಿ ಭಾಷಿಕರ ಸಂಬಂಧ ಅನ್ಯೋನ್ಯವಾಗಿದೆ. ದೇಶಭಕ್ತಿ ಹಾಗೂ ನಾಯ ಕತ್ವ ಬಂಟರಲ್ಲಿದೆ. ವಿಜಯಾ ಬ್ಯಾಂಕನ್ನು ಕಟ್ಟಿ ಬೆಳೆಸಿದವರು ಬಂಟ ಸಮಾಜವಾಗಿದೆ. ಜ್ಞಾನ ಪಸರಿಸುವಲ್ಲಿಯೂ ಬಂಟ ಸಮಾಜ ಮುಂದಿದ್ದು, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಪುಣೆ ಬಂಟರ ಸಂಘ ಇನ್ನಷ್ಟು ಪ್ರಗತಿ ಸಾಧಿಸುವಂತಾಗಲಿ. ಸರಕಾರದಿಂದ ಏನು ಸಾಧ್ಯವೂ ಅದನ್ನು ಪುಣೆ ಬಂಟರ ಸಂಘದ ಅಭಿವೃದ್ಧಿಗೆ ಖಂಡಿತಾ ನೀಡುತ್ತೇವೆ. ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ದೇಶದೆಲ್ಲೆಡೆ ಆಚರಣೆ ನಡೆಯುತ್ತಿದೆ. ಸಮೃದ್ಧ, ಸಶಕ್ತ ದೇಶ ಕಟ್ಟುವಲ್ಲಿ ನಿಮ್ಮೆಲ್ಲರ ಸಹಕಾರ ಸದಾಯಿರಲಿ ಎಂದರು.
Related Articles
Advertisement
ಸಭಾ ಕಾರ್ಯಕ್ರಮವನ್ನು ನಿತೇಶ್ ಎಕ್ಕಾರ್, ಬಂಟರವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಕ್ಷತಾ ಸುಜಿತ್ ಶೆಟ್ಟಿ ಹಾಗೂ ಕರ್ನೂರು ಮೋಹನ್ ರೈ ನಿರೂಪಿಸಿದರು.
ಸಂತೋಷ್ ಶೆಟ್ಟಿ ಅವರಿಗೆ “ಬಂಟ ಸೇನಾಧಿಪತಿ’ ಬಿರುದು :
ಪುಣೆ ಬಂಟರ ಸಂಘದ ಅಧ್ಯಕ್ಷ, ಸಂಘದ ಹತ್ತು ಹಲವು ಯೋಜನೆಗಳ ಕತೃì, ಬಂಟರ ಭವನದ ರೂವಾರಿ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅವರನ್ನು ಸಂಘಕ್ಕೆ ಹಾಗೂ ಸಮಾಜಕ್ಕೆ ಸಲ್ಲಿಸಿದ ವಿಶೇಷ ಸೇವೆಗಾಗಿ ಪುಣೆಯ ಸಮಸ್ತ ಬಂಟ ಸಮಾಜ ಬಾಂಧವರ ಪರವಾಗಿ “ಬಂಟ ಸೇನಾಧಿಪತಿ’ ಬಿರುದನ್ನು ನೀಡಿ ಸಿಎಂ ಬೊಮ್ಮಾಯಿ ಹಾಗೂ ಅತಿಥಿಗಳು ಸಮ್ಮಾನಿಸಿದರು.
ಸಾಧಕರ ಪ್ರತಿಮೆ ಅನಾವರಣ :
ಪುಣೆ ಬಂಟರ ಸಂಘದ ಬೆನ್ನೆಲುಬು ದಿ| ಜಗನ್ನಾಥ ಶೆಟ್ಟಿ ಹಾಗೂ ದಿ| ಗುಂಡೂರಾಜ್ ಶೆಟ್ಟಿಯವರ ಪ್ರತಿಮೆಗಳನ್ನು ಸಿಎಂ ಬೊಮ್ಮಾಯಿ ಅವರು ಅನಾವರಣಗೊಳಿಸಿದರು. ಸಂಘದ ಕಲ್ಪವೃಕ್ಷ ಶಕುಂತಲಾ ಜಗನ್ನಾಥ ಎಂಆರ್‌ಜಿ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಪ್ರಕಾಶ್ ಶೆಟ್ಟಿ, ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಜಯಂತ್ ಶೆಟ್ಟಿ, ಉದ್ಯಮಿಗಳಾದ ದಯಾಶಂಕರ್ ಶೆಟ್ಟಿ, ಉದ್ಯಮಿ ಹಾಗೂ ಸಮಾಜ ಸೇವಕ ಜಿತೇಂದ್ರ ಹೆಗ್ಡೆ, ಖ್ಯಾತ ಕ್ಯಾಟರಿಂಗ್ ಉದ್ಯಮಿ ಹಾಗೂ ಸಮಾಜ ಸೇವಕ ಕೆ. ಕೆ. ಶೆಟ್ಟಿ ಅಹ್ಮದ್‌ನಗರ ದಂಪತಿಗಳನ್ನು ಗೌರವಿಸಲಾಯಿತು. ಪುಣೆ ಬಂಟರ ಸಂಘದ ಕನಸಿನ ಯೋಜನೆ ಕಲ್ಪವೃಕ್ಷ ಶೈಕ್ಷಣಿಕ ಸಂಸ್ಥೆಗಳ ನೀಲನಕ್ಷೆ ಬಿಡುಗಡೆಗೊಳಿಸಲಾಯಿತು.
ಧ್ವಜಾರೋಹಣ :
ಭವನದ ಆವರಣದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಸಿಎಂ ಬೊಮ್ಮಾಯಿ ಅವರು ಹಾರಾರ್ಪಣೆ ಮಾಡಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಆರತಿ ಶಶಿಕಿರಣ್ ಶೆಟ್ಟಿ ಚಾವಡಿಯಲ್ಲಿ ದೇವರ ಮಂಟಪಕ್ಕೆ ಆರತಿ ಬೆಳಗಿ ಪ್ರಾರ್ಥಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಮಿತಾ ಜತ್ತನ್ ಮತ್ತು ಅಮಿತಾ ಕಲಾವೃಂದ ಮೀರಾರೋಡ್ ಕಲಾವಿದರಿಂದ ಹಾಗೂ ಸಂಘದ ಮಹಿಳಾ ವಿಭಾಗದಿಂದ ವಿವಿಧ ಸಾಂಸ್ಕೃತಿಕ ನೃತ್ಯ ಪ್ರದರ್ಶನಗೊಂಡಿತು.