Advertisement

ಪುಣೆ ಬಿಲ್ಲವ ಸಮಾಜ ಸೇವಾ ಸಂಘ: ಸಾಧಕರಿಗೆ  ಸಮ್ಮಾನ

01:05 PM Sep 18, 2018 | Team Udayavani |

ಪುಣೆ: ಬಿಲ್ಲವ ಸಮಾಜ ಸೇವಾ ಸಂಘ ಪುಣೆ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ  164 ನೇ ಜಯಂತಿ ಆಚರಣೆಯು  ಸೋಮವಾರ ಪೇಟೆಯ ನರಪತ್‌ ಗಿರಿ ಚೌಕಾದ ಸಂತ  ಘಾಡೆY ಮಹಾರಾಜ್‌ ಪ್ರಾರ್ಥನಾಗೃಹದಲ್ಲಿ  ಸೆ. 9 ರಂದು ನಡೆಯಿತು. ಗುರುಪೂಜೆಯ ಅಂಗವಾಗಿ ಬೆಳಗ್ಗೆ 9 ರಿಂದ  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಲ್ದಾಕ್ಕ ಚೌಕಾ ಮಂಗಳವಾರ ಪೇಟೆಯ ಪ್ರಧಾನ ಅರ್ಚಕರಾದ  ಕರುಣಾಕರ ಶಾಂತಿ ಅವರ  ಪೌರೋಹಿತ್ಯದಲ್ಲಿ ಕಲಶ ಮಹೋರ್ತ, ಗುರು ಪೂಜೆ, ಭಜನೆ, ಮಂಗಳಾರತಿ ನಡೆಯಿತು.

Advertisement

ನಂತರ ಪುಣೆ ಬಿಲ್ಲವ ಸಂಘದ ಅಧ್ಯಕ್ಷ ಶೇಖರ್‌ ಟಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ  ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು.  ವೇದಿಕೆಯಲ್ಲಿ ಪೂಜಾ ಸಮಿತಿಯ ಕಾರ್ಯಾದ್ಯಕ್ಷ ಪಾಂಡುರಂಗ  ಅರ್‌. ಪೂಜಾರಿ, ಸಂಘದ ಸಂಸ್ಥಾಪಕ  ಅಧ್ಯಕ್ಷ ಸುಂದರ್‌ ಎನ್‌. ಪೂಜಾರಿ, ಧಾರ್ಮಿಕ ಪ್ರವಚನಕಾರ ಕೊಳ್ತಿಗೆ ನಾರಾಯಣ ಗೌಡ, ಪಿಂಪ್ರಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಸತೀಶ್‌ ಅರ್‌. ಸಾಲ್ಯಾನ್‌, ಪುಣೆ ಬಿಲ್ಲವ  ಸಂಘದ ಉಪಾಧ್ಯಕ್ಷರುಗಳಾದ ವಿಶ್ವನಾಥ್‌ ಪೂಜಾರಿ ಕಡ್ತಲ, ಜಯ ಅರ್‌. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಿನಿ ಡಿ. ಬಂಗೇರ ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ಬಿಲ್ಲವ  ಸಮಾಜದ ಪ್ರತಿಭಾನ್ವಿತ  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ  ಸತ್ಕರಿಸಲಾಯಿತು. ಹಾಗೂ ಸಮಾಜದ ಹಿರಿಯರಾದ ಕೊಥ್ರೊಡ್‌  ಮಾದವ ಪೂಜಾರಿ  ದಂಪತಿ ಹಾಗೂ  ಶಿವಾಜಿ ನಗರದ  ದೇವಕಿ ಗಿರಿಯ  ಪೂಜಾರಿ ಅವರನ್ನು ಸಂಘದ ಪರವಾಗಿ  ಸಮ್ಮಾನಿಸಲಾಯಿತು.  ಸಂಘದ ಜೊತೆ ಕಾರ್ಯದರ್ಶಿ ಸುಂದರ ಕರ್ಕೇರ ರವರು ಕಾರ್ಯಕ್ರಮ ನಿರೂಪಿಸಿದರು. ಹರೀಶ್‌ ಪೂಜಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next