Advertisement

ಪುಣೆ ಬಿಲ್ಲವ ಸಂಘ: ವಾರ್ಷಿಕ ಬೈದಶ್ರೀ ಕ್ರೀಡಾಕೂಟ ಸಮಾರೋಪ

04:15 PM Feb 21, 2019 | |

ಪುಣೆ: ನಮ್ಮಲ್ಲಿ  ದೈಹಿಕ ಶಕ್ತಿ  ಇದೆ, ಛಲವಿದೆ, ಮನೋಬಲವಿದೆ. ಅಂತಹ ಸಂದರ್ಭದಲ್ಲಿ ನಾವು ಆಯ್ದುಕೊಂಡ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿಯೇ ಮಾಡುತ್ತೇವೆ ಎಂಬ ದೃಢವಾದ ಸಂಕಲ್ಪ ನಮ್ಮಲ್ಲಿದ್ದರೆ ಗುರಿಯನ್ನು ಸಾಧಿಸುವ ಅವಕಾಶ ಇದ್ದೇ ಇರುತ್ತದೆ. ಅಂತಹ ಅವಕಾಶಕ್ಕಾಗಿ ನಾವು ತಯಾರಾಗಬೇಕು. ಅಲ್ಲದೆ  ಮಕ್ಕಳಿಗೆ ಪೋಷಕರು ಪ್ರೋತ್ಸಾಹ ನೀಡಬೇಕು. ಶಾರೀರಿಕವಾಗಿ ಸದೃಢರಾಗಿ  ತಾವೆಲ್ಲರೂ ಸಮರ್ಥರಾಗಿದ್ದಿರಿ. ಸಾಮರ್ಥ್ಯ ಇರುವಾಗ ಇಂತಹ ಕ್ರೀಡಾಕೂಟಗಳ ಸ್ಪರ್ಧೆಗಳಲ್ಲಿ ಭಾಗವಹಿಸುದು ಮುಖ್ಯ. ಪದಕ ಸಿಗಲೇಬೇಕು ಎಂಬ ಮನೋಬಲ ನಮ್ಮಲ್ಲಿರಬೇಕು. ನಾವು ಆಯ್ದುಕೊಂಡ ಕ್ಷೇತ್ರ ಯಾವುದೇ ಇರಲಿ ಮಾನಸಿಕವಾಗಿ ತಯಾರಾಗಿದ್ದರೆ  ಕಠಿನ  ಸ್ಪರ್ಧೆಯಲ್ಲಿ   ಜಯವನ್ನು ಕಾಣಬಹುದು ಎಂದು ತನ್ನ ಎರಡು ಕೈಗಳನ್ನು ಕಳೆದುಕೊಂಡಿರುವ    2018 ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯಾನ್‌ ಪ್ಯಾರಾ ಓಲಂಪಿಕ್ಸ್‌ನ ಈಜು ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಗೆದ್ದ ಸುಯಾಸ್‌ ಜಾಧವ್‌ ಹೇಳಿದರು.

Advertisement

ಫೆ. 17ರಂದು ಪುಣೆಯ ಸ್ವಾರ್‌ಗೆàಟ್‌ ಹತ್ತಿರದ ಮುಕುಂದ್‌ ನಗರದ ಚಂದ್ರ ಶೇಖರ್‌  ಅಗಸ್ಯೆ ಕಟಾರಿಯ ಕಾಲೇಜು ಮೈದಾನದಲ್ಲಿ ನಡೆದ ಬಿಲ್ಲವ ಸಮಾಜ ಸೇವಾ ಸಂಘ ಪುಣೆ ಇದರ ವಾರ್ಷಿಕ ಬೈದಶ್ರೀ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಕ್ರೀಡಾಕ್ಷೇತ್ರ ಎಂಬುದು ಒಂದು ಸ್ಪರ್ಧಾತ್ಮಕ ಕಣವಾಗಿದೆ. ಈ ಸ್ಪರ್ಧೆಯನ್ನು ಗೆಲ್ಲುವ ಛಲ ಯುವಕ ಯುವತಿಯರಲ್ಲಿ ಮೂಡಿ ಬರಬೇಕು.  ಕ್ರೀಡಾ ವಲಯದಲ್ಲಿ ಭಾರತ ಇನ್ನಷ್ಟು ಎತ್ತರಕ್ಕೆ ಏರಬೇಕಾಗಿದೆ. ಅದಕ್ಕೆಲ್ಲ ಯುವ ಜನತೆ ಕ್ರೀಡಾಕ್ಷೇತ್ರದತ್ತ ಒಲವು ಬೆಳೆಸಿಕೊಳ್ಳಬೇಕು.  ಪುಣೆ ಬಿಲ್ಲವ ಸಂಘದ ಈ ಕ್ರೀಡಾಕೂಟ ಬಹಳ ಯಶಸ್ವಿಯಾಗಿ ನಡೆದಿದೆ ಎಂದು  ಇಲ್ಲಿ ಸೇರಿದ ಜನ ಸಮೂಹವನ್ನು ಕಂಡಾಗ ಗೊತ್ತಾಗುತ್ತದೆ.  ಮನಸ್ಸಿಗೆ ತುಂಬಾ ಸಂತೋಷವಾಗುತ್ತಿದೆ. ನನ್ನನ್ನು ಗುರುತಿಸಿ ಆಹ್ವಾನಿಸಿ ಸಮ್ಮಾನ ಮಾಡಿ ಗೌರವಿಸಿದ್ದೀರಿ. ಬಿಲ್ಲವ ಸಂಘದ ಎÇÉಾ ಸಮಾಜ ಬಾಂಧವರಿಗೆ ನನ್ನ ಅಭಿನಂದನೆಗಳು ಎಂದರು.

ಬಿಲ್ಲವ ಸಂಘ ಪುಣೆ ಇದರ ವತಿಯಿಂದ ಅಧ್ಯಕ್ಷರಾದ ವಿಶ್ವನಾಥ್‌  ಪೂಜಾರಿ ಮತ್ತು ಪದಾಧಿಕಾರಿಗಳು ಸುಯಾಸ್‌ ಜಾಧವ್‌ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ಕೇತಕಿ ಆರ್‌. ಪೂಜಾರಿ  ಅವರು  ಸುಯಾಸ್‌ ಜಾಧವ್‌ ಅವರ ಸಾಧನೆಗಳನ್ನು ವಿವರಿಸಿದರು.

ವೇದಿಕೆಯಲ್ಲಿ ಸ್ಥಾಪಕ  ಅಧ್ಯಕ್ಷ ಸುಂದರ್‌ ಪೂಜಾರಿ, ಅಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಪುರಂದರ ಪೂಜಾರಿ, ಉಪಾಧ್ಯಕ್ಷರುಗಳಾದ  ಸಂದೇಶ್‌ ಪೂಜಾರಿ, ರವಿಜಾ ಪೂಜಾರಿ, ಗೌರವ ಕಾರ್ಯದರ್ಶಿ  ಸದಾನಂದ ಬಂಗೇರ, ಕೋಶಾಧಿಕಾರಿ ಹರೀಶ್‌ ಪೂಜಾರಿ, ಕ್ರೀಡಾ ಕಾರ್ಯಾಧ್ಯಕ್ಷ ರಾಜೇಶ್‌ ಪೂಜಾರಿ, ಕರುಣಾಕರ ಶಾಂತಿ, ಮಹಿಳಾ ಅಧ್ಯಕ್ಷೆ ಉಮಾ ಪೂಜಾರಿ ಅವರು ಉಪಸ್ಥಿತರಿದ್ದರು. ಸರೋಜಿನಿ ಬಂಗೇರ ಮತ್ತು ಶಂಕರ ಪೂಜಾರಿ ಪ್ರಾರ್ಥನೆಗೈದರು. ಹರೀಶ್‌ ಪೂಜಾರಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕ್ರೀಡಾಕೂಟಕ್ಕೆ ಪೂರಕವಾಗಿ ಜರಗಿದ ಕ್ರಿಕೆಟ್‌ ಪಂದ್ಯಾಟದ ವಿಜೇತ ತಂಡಗಳಾದ ಅಂಬಿಕಾ ಗ್ರೂಪ್‌ ಮತ್ತು ದ್ವಿತೀಯ  ಸ್ಥಾನಿಯಾದ  ಗಾಯತ್ರಿ ತಂಡಕ್ಕೆ  ಟ್ರೋಫಿ ಮತ್ತು ಕ್ರೀಡಾಕೂಟದ ವಿಜೇತರಿಗೆ ಪದಕಗಳನ್ನು  ಅತಿಥಿ-ಗಣ್ಯರು ವಿತರಿಸಿ ಶುಭಹಾರೈಸಿದರು. ವಿಜೇತರ ವರದಿಯನ್ನು ಸುಂದರ ಕರ್ಕೇರ ಓದಿದರು.
ಕ್ರೀಡಾ ಕಾರ್ಯಾಧ್ಯಕ್ಷ ರಾಜೇಶ್‌ ಪೂಜಾರಿ ಅವರು ಬೈದಶ್ರೀ ಕ್ರೀಡಾಕೂಟವನ್ನು ಯಶಸ್ವಿಯಾಗಿ  ಆಯೋಜಿಸುವಲ್ಲಿ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತುಂಬಾ ಶ್ರಮಪಟ್ಟಿ¨ªಾರೆ  ಎಂದು ನುಡಿದು ಎಲ್ಲರಿಗೂ ವಂದಿಸಿದರು. ಈ ಕ್ರೀಡಾಕೂಟದ ಸಂದರ್ಭದಲ್ಲಿ ಊಟದ ಪ್ರಾಯೋಜಕತ್ವ ವಹಿಸಿದ ಬಾಲಕೃಷ್ಣ ಸುವರ್ಣ, ಅವಿಸ್‌ ಫುಡ್ಸ್‌,  ಚಾ ತಿಂಡಿಯ ಪ್ರಾಯೋಜಕರಾದ  ಧನಂಜಯ್‌ ಪೂಜಾರಿ ಅಜೆಕಾರ್‌, ಉಮೇಶ್‌ ಪೂಜಾರಿ, ಭಾಸ್ಕರ್‌ ಪೂಜಾರಿ ಜಾನ್ವಿ , ಸುದೀಪ್‌ ಪೂಜಾರಿ ಮತ್ತು ಇತರೆ  ಪ್ರಾಯೋಜಕರನ್ನು ಅಧ್ಯಕ್ಷರು ಗೌರವಿಸಿ ದರು.
ಸಮಾಜ ಬಾಂಧವರ ವಿವಿಧ ವಯೋಮಿತಿಗೆ ಅನುಗುಣವಾಗಿ  ಮಕ್ಕ ಳಿಗೆ, ಯುವಕರಿಗೆ ಪುರುಷರು ಮತ್ತು ಮಹಿಳೆ ಯರಿಗೆ ಲಿಂಬು- ಚಮಚ ನಡಿಗೆ, ಓಟದ ಸ್ಪರ್ಧೆಗಳು, ಲಾಂಗ್‌ ಜಂಪ್‌, ಶಾಟ್‌ಪುಟ್‌, ರಿಲೇ  ವಾಲಿಬಾಲ್‌, ಥ್ರೋಬಾಲ…, ವೇಗದ ನಡಿಗೆ, ಹಗ್ಗ-ಜಗ್ಗಾಟ ಮೊದಲಾದ ವಿವಿಧ  ಸ್ಪರ್ಧೆಗಳು ನಡೆದವು. ಮಕ್ಕಳು ಯುವಕ ಯುವತಿಯರು ಮಹಿಳೆಯರು, ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾ  ಸ್ಫೂರ್ತಿ ಮೆರೆದರು. ಹಗ್ಗ ಜಗ್ಗಾಟ ಇನ್ನಿತರ  ಸ್ಪರ್ಧೆಗಳು ನಡೆದವು.

ಕ್ರೀಡಾಕೂಟದ ಯಶಸ್ಸಿಗೆ ವಿವಿಧ ಘಟಕಗಳ ಪ್ರಮುಖರಾದ ವನಿತಾ ಬಿ. ಪೂಜಾರಿ, ರೇವತಿ ಪೂಜಾರಿ, ಪ್ರಕಾಶ್‌ ಪೂಜಾರಿ ಬೈಲೂರು, ಧನಂಜಯ… ಎಲ್‌. ಪೂಜಾರಿ, ಪ್ರಶಾಂತ್‌ ಸುವರ್ಣ, ಡಾ|  ಶ್ರುತಿ ಡಿ. ಪೂಜಾರಿ, ಡಾ| ವಿಜಯಲಕ್ಷ್ಮೀ ಪಿ. ಪೂಜಾರಿ, ಡಾ|  ಪ್ರವೀಣ್‌ ಪೂಜಾರಿ, ಶಾಲಿನಿ ವಿ.  ಪೂಜಾರಿ, ನೆಹಲ್‌ ಡಿ. ಪೂಜಾರಿ, ದೀಕ್ಷಾ ಎಸ್‌. ಪೂಜಾರಿ, ರಷ್ಮಿತಾ ಎನ್‌. ಪೂಜಾರಿ, ಮಯೂರಿ ಪೂಜಾರಿ, ಸಂಧ್ಯಾ ಪೂಜಾರಿ, ಶ್ವೇತಾ ಪೂಜಾರಿ, ಅರುಣಾ ಪೂಜಾರಿ, ರೇಣುಕಾ ಪೂಜಾರಿ, ರಂಜಿತಾ ಪೂಜಾರಿ, ಪ್ರಿಯ ಪೂಜಾರಿ, ಸ್ವಾತಿ ಪೂಜಾರಿ, ಚೈತ್ರಾ ಪೂಜಾರಿ, ತೃಪ್ತಿ ಪೂಜಾರಿ, ಪ್ರದಾನ್ಯ ಪೂಜಾರಿ, ಅಕ್ಷತ್‌ ಪೂಜಾರಿ, ತುಷಾರ್‌ ಪೂಜಾರಿ, ದಿವ್ಯಾ ಬಂಗೇರ, ರಿತಿಷಾ ಪೂಜಾರಿ, ಉಮೇಶ್‌ ಪೂಜಾರಿ, ಪ್ರದೀಪ್‌ ಪೂಜಾರಿ, ಬಾಲಕೃಷ್ಣ ಪೂಜಾರಿ, ರಾಘು ಪೂಜಾರಿ, ಯಾದವ್‌ ಪೂಜಾರಿ, ಶಿವರಾಂ ಪೂಜಾರಿ, ಗಿರೀಶ್‌ ಪೂಜಾರಿ, ಶಿವರಾಂ ಸುವರ್ಣ, ಧನಂಜಯ್‌ ಪೂಜಾರಿ,  ಶಿವರಾಂ ಪೂಜಾರಿ, ಸುಮಾ ಪೂಜಾರಿ, ಅನಿತಾ ಪೂಜಾರಿ, ಅಂಕಿತಾ ಪೂಜಾರಿ, ಸುದ‌ರ್ಶನ್‌ ಪೂಜಾರಿ, ನಿತೇಶ ಪೂಜಾರಿ, ಚಿರಾಗ್‌ ಪೂಜಾರಿ, ದೀಪಾ ಪೂಜಾರಿ, ಲಕ್ಷಿ¾ ಪೂಜಾರಿ, ಶೋಭಾ ಪೂಜಾರಿ, ಪ್ರಭಾ ಪೂಜಾರಿ, ಜ್ಯೋತಿ ಪೂಜಾರಿ, ಗೀತಾ ಪೂಜಾರಿ, ನವಿತಾ ಪೂಜಾರಿ, ಕಸ್ತೂರಿ ಪೂಜಾರಿ, ಕವಿತಾ ಸುವರ್ಣ, ಆಶಾ ಪೂಜಾರಿ, ಶೋಭಾ ಸುವರ್ಣ, ಸೌಮ್ಯಾ ಪೂಜಾರಿ, ಶ್ರೇಯಾ ಪೂಜಾರಿ, ವಿಶಾಲ್‌ ಪೂಜಾರಿ, ಸಂಗೀತಾ ಪೂಜಾರಿ, ನೀಲಂ ಪೂಜಾರಿ, ಲತಾ ಪೂಜಾರಿ ಅವರು ಶ್ರಮಿಸಿದರು. 

Advertisement

ಸದಾನಂದ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಸಾದ್‌ ಪೂಜಾರಿ ವಂದಿಸಿದರು. ಇತ್ತೀಚೆಗೆ ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ಕೃತಕ್ಕೆ ಹುತಾತ್ಮರಾದ ವೀರ ಯೋಧರಿಗೆ ಇದೇ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

 ಬಿಲ್ಲವ ಸಂಘದ ಬೈದಶ್ರೀ ಕ್ರೀಡಾಕೂಟವೆಂದರೆ ನಮ್ಮ ಯುವ ಶಕ್ತಿಯನ್ನು ಒಗ್ಗೂಡಿಸಿ, ಸಮಾಜ ಬಾಂಧವರೆಲ್ಲರೊ ಸೇರಿ  ಕ್ರೀಡಾ ಸ್ಫೂ³ರ್ತಿಯೊಂದಿಗೆ ಸಮಾಜದ ಒಗ್ಗಟ್ಟಿನ  ಶಕ್ತಿ ಪ್ರದರ್ಶನ ತೋರಿಸಿದಂತಾಗಿದೆ. ಇನ್ನು ಮುಂದೆಯೂ ಸಂಘದ ಮುಖಾಂತರ ಬೇರೆ ಬೇರೆ ರೀತಿಯ ಪ್ರತಿಭಾ ಸ್ಪರ್ಧೆಗಳು ಮನೋರಂಜನಾ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ  ಕಾರ್ಯಕ್ರಮಗಳು ನಡೆಯಲಿವೆ. ಪುಣೆಯ ಬಿಲ್ಲವರ ಸಾಮರ್ಥ್ಯವನ್ನು ತೋರಿಸಿಕೊಟ್ಟು  ಬೇರೆ ಸಂಸ್ಥೆಗಳಿಗೆ ಮಾದರಿಯಾಗಬೇಕು. ನಮ್ಮ ಸಂಘದ ಸ್ಥಾಪಕ ಅಧ್ಯಕ್ಷರ ಆಶೀರ್ವಾದ, ಹಿರಿಯರ ಸೂಚನೆಗಳೊಂದಿಗೆ ಮಾಜಿ ಅಧ್ಯಕ್ಷರುಗಳ ಕಾರ್ಯ ಯೋಜನೆಗಳು,   ಪದಾಧಿಕಾರಿಗಳು, ಸಮಾಜ ಬಾಂಧವರು, ಉತ್ಸಾಹಿ ಕ್ರೀಡಾಭಿಮಾನಿಗಳ ಸಹಕಾರದಿಂದ ಮುಂದಿನ ನಮ್ಮ ಯೋಜನೆಗಳು ಸಾಕಾರಗೊಳ್ಳಲಿ. ಇಂದಿನ ನಮ್ಮ ಕ್ರೀಡಾಕೂಟ ಶಿಸ್ತುಬದ್ಧವಾಗಿ  ಅಮೋಘವಾಗಿ ನಡೆಯಲು ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ.     
 – ವಿಶ್ವನಾಥ್‌ ಪೂಜಾರಿ ಕಡ್ತಲ, 
ಅಧ್ಯಕ್ಷರು , ಬಿಲ್ಲವ ಸಮಾಜ ಸೇವಾ ಸಂಘ ಪುಣೆ

ಚಿತ್ರ-ವರದಿ: ಹರೀಶ್‌ ಮೂಡಬಿದ್ರೆ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next