ಪುಣೆ: ಬಿಲ್ಲವ ಸಮಾಜ ಬಾಂಧವರಿಗಾಗಿ ನಾವು ಆಯೋಜಿಸುವ ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಪ್ರತಿ ಬಾರಿಯೂ ಯುವಕರು, ಹಿರಿಯರು, ಮಹಿಳೆಯರು ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸುತ್ತಿದ್ದಾರೆ. ಫಲಿತಾಂಶ ಏನೇ ಇರಲಿ ಆದರೆ ಸ್ಪರ್ಧೆಗಳಲಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಇತರರಿಗೆ ಪ್ರೇರಣೆ ನೀಡಬೇಕು. ಇಂದು ನಾವು ಸಮಾಜ ಬಾಂಧವರಿಗೆ ಆಯೋಜಿಸಿದ ಈ ಕ್ರಿಕೆಟ್ ಪಂದ್ಯಾಟಗಳಲ್ಲಿ ಮಹಿಳೆಯರಲ್ಲೂ ಉತ್ಸಾಹ ಮೂಡಿ ಎರಡು ತಂಡಗಳನ್ನು ರಚಿಸಿ ಕ್ರಿಕೆಟ್ ಅಡಿರುವುದು ಸಂತೋಷದ ವಿಷಯವಾಗಿದೆ. ಎರಡು ಮಹಿಳಾ ತಂಡಗಳ ಜತೆಯಲ್ಲಿ ಪುರುಷರ ಎಂಟು ತಂಡಗಳು ಒಟ್ಟಾರೆಯಾಗಿ ಹತ್ತು ತಂಡಗಳು ಭಾಗವಹಿಸಿರುವುದು ಹೆಮ್ಮೆಯಾಗುತ್ತಿದೆ. ಸಮಯ ಪಾಲನೆಯೊಂದಿಗೆ ಶಿಸ್ತುಬದ್ಧವಾಗಿ ಅಡಿ ಬಿಲ್ಲವ ಸಮಾಜದ ಘನತೆಯನ್ನು ಎತ್ತಿ ತೋರಿಸಿ¨ªಾರೆ. ಸ್ಪರ್ಧೆಗಳಲ್ಲಿ ಸೋಲು ಗೆಲುವು ಎಂಬುದು ಇದ್ದೇ ಇರುತ್ತದೆ. ಭಾಗವಹಿಸುವುದು ಮುಖ್ಯ. ಸೋಲು-ಗೆಲುವು ನಮ್ಮಲ್ಲಿ ಸ್ಪರ್ಧಿಸಲು ಮತ್ತಷ್ಟು ಪ್ರೇರಣೆಯನ್ನು ನೀಡುತ್ತದೆ ಎಂದು ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ ಕಡ್ತಲ ಹೇಳಿದರು.
ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಫೆ. 17ರಂದು ನಡೆಯಲಿರುವ ಬೈದಶ್ರೀ ಕ್ರೀಡೋತ್ಸವಕ್ಕೆ ಪೂರಕವಾಗಿ ಫೆ. 11ರಂದು ಪುಣೆಯ ತಲಾಜೈ ಮೈದಾನದಲ್ಲಿ ನಡೆದ ಬೈದಶ್ರೀ ಟ್ರೋಫಿ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೈದಶ್ರೀ ಕ್ರೀಡಾಕೂಟದಲ್ಲಿ ಸಮಾಜ ಬಾಂಧವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಬೇಕು ಎಂದು ನುಡಿದರು.
ವೇದಿಕೆಯಲ್ಲಿ ಪುಣೆ ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷರಾದ ಸುಂದರ್ ಪೂಜಾರಿ, ಉಪಾಧ್ಯಕ್ಷರಾದ ಸಂದೇಶ್ ಪೂಜಾರಿ, ಕಾರ್ಯದರ್ಶಿ ಸದಾನಂದ ಬಂಗೇರ, ಕೋಶಾಧಿಕಾರಿ ಹರೀಶ್ ಪೂಜಾರಿ, ಮಾಜಿ ಅಧ್ಯಕ್ಷರಾದ ಶೇಖರ್ ಟಿ. ಪೂಜಾರಿ, ಸದಾಶಿವ ಎಸ್. ಸಾಲ್ಯಾನ್, ಸದಾನಂದ ಪೂಜಾರಿ, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಜಯ ಪೂಜಾರಿ, ಕ್ರೀಡಾ ಕಾರ್ಯಾಧ್ಯಕ್ಷ ರಾಜೇಶ್ ಪೂಜಾರಿ, ಸದಸ್ಯರಾದ ಕರುಣಾಕರ ಶಾಂತಿ, ಶಂಕರ್ ಪೂಜಾರಿ, ಶ್ಯಾಮ್ ಸುವರ್ಣ, ಉತ್ತಮ್ ಪಣಿಯಾಡಿ, ಬಾಲಕೃಷ್ಣ ಸುವರ್ಣ, ವಿಶ್ವನಾಥ್ ಪೂಜಾರಿ ಕಪಿಲ, ಮಹಿಳಾ ವಿಭಾಗದ ಅಧ್ಯಕ್ಷೆ ಉಮಾ ಪೂಜಾರಿ, ಮಾಜಿ ಅಧ್ಯಕ್ಷೆ ಪ್ರಿಯಾ ಪಣಿಯಾಡಿ, ಪದಾಧಿಕಾರಿಗಳಾದ ಭಾಸ್ಕರ ಪೂಜಾರಿ, ಧನಂಜಯ್ ಪೂಜಾರಿ, ಸುದೀಪ್ ಪೂಜಾರಿ ಅವರು ಉಪಸ್ಥಿತರಿದ್ದರು.
ವಿಜೇತ ತಂಡಗಳಿಗೆ ಗಣ್ಯರು ಟ್ರೋಫಿಯನ್ನಿತ್ತು ಗೌರವಿಸಿದರು. ಅಲ್ಲದೆ ಈ ಪಂದ್ಯಾಟಕ್ಕೆ ಅತಿಥಿಗಳಾಗಿ ಆಗಮಿಸಿದ ಪುಣೆ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಅಬ್ಬಬಾಗುಲ್, ತಿಲಕ್ ಮಹಾರಾಷ್ಟ್ರ ವಿದ್ಯಾಪೀಠದ ಪ್ರಿನ್ಸಿಪಾಲ್ ಸ್ವಾತಿ ನಾನಿವಾಡೆಕರ್, ನಿವೃತ್ತ ಪೊಲೀಸ್ ಅಧಿಕಾರಿ ಅನಿಲ್ ನಿಂಬಾಳ್ಕರ್ ಅವರನ್ನು ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ ಅವರು ಸತ್ಕರಿಸಿದರು. ಬೆಳಿಗ್ಗೆ ಸ್ಥಾಪಕ ಅಧ್ಯಕ್ಷ ಸುಂದರ್ ಪೂಜಾರಿ, ವಿಶ್ವನಾಥ್ ಪೂಜಾರಿ ಹಾಗೂ ಪದಾಧಿಕಾರಿಗಳು ಮತ್ತು ಎÇÉಾ ತಂಡಗಳ ಸದಸ್ಯರ ಸಮ್ಮುಖದಲ್ಲಿ ತೆಂಗಿನ ಕಾಯಿ ಒಡೆದು ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾಟಗಳಿಗೆ ಚಾಲನೆ ನೀಡಿದರು. ಉಪಾಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಿದ ಧನಂಜಯ್ ಪೂಜಾರಿ ಅಜೆಕಾರ್ ಹಾಗೂ ವಿಶ್ವನಾಥ್ ಪೂಜಾರಿ ಅಂಬಿಕಾ, ವೀಕ್ಷಕ ವಿವರಣೆ ನೀಡಿದ ಸಂತೋಷ್ ಪೂಜಾರಿ, ದಯಾನಂದ ಪೂಜಾರಿ ಮತ್ತು ಆದರ್ಶ್, ಅಂಪಾಯರ್‌ಗಳಾಗಿ ಕಾರ್ಯ ನಿರ್ವಹಿಸಿದ ಕುಮಾರ್, ರಿಷಿಕೇಶ್, ಸುಧೀರ್ ಅವರನ್ನು ಗಣ್ಯರು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಿದರು. ಕಾರ್ಯದರ್ಶಿ ಸದಾನಂದ ಬಂಗೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಮ್ಮ ಸಂಘದ ಮುಖಾಂತರ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೆ ಸರ್ವ ಬಾಂಧವರು ಮುಂದೆ ಬಂದು ಸಹಕರಿಸಿ ಯಶಸ್ವಿಗೊಳಿಸುತ್ತಿದ್ದೀರಿ. ಇದನ್ನು ಕಂಡಾಗ ಮನಸ್ಸಿಗೆ ಸಂತೋಷವಾಗುತ್ತದೆ. ಇಂದು ನಡೆದ ನಮ್ಮ ಬಾಂಧವರ ಕ್ರಿಕೆಟ್ ಪಂದ್ಯಾಟ ತಮ್ಮೆಲ್ಲರ ಸಹಕಾರದಿಂದ ಸುಗಮವಾಗಿ ನಡೆದಿದೆ. ಫೆ. 17ರಂದು ನಡೆಯುವ ನಮ್ಮ ಕ್ರೀಡೋತ್ಸವ ಕೂಡಾ ಯಶಸ್ವಿಯಾಗಿ ನಡೆಯಲು ತಾವೆಲ್ಲರೂ ಭಾಗಿಗಳಾಗಬೇಕು
– ಸುಂದರ್ ಪೂಜಾರಿ, ಸ್ಥಾಪಕಾಧ್ಯಕ್ಷರು, ಬಿಲ್ಲವ ಸೇವಾ ಸಂಘ ಪುಣೆ
ಚಿತ್ರ-ವರದಿ: ಹರೀಶ್ ಮೂಡಬಿದ್ರೆ ಪುಣೆ