ಪುಣೆ: ಪುಣೆ ಬಿಲ್ಲವ ಸಂಘವು ನಮ್ಮ ಹಿರಿಯರ ಸಮಾಜ ಸೇವಾ ಮನೋಭಾವದಿಂದ ಸಂಘಟನೆ ಅಗತ್ಯ ಇದೆ ಎಂಬ ಕಾರಣದಿಂದ 25ವರ್ಷಗಳ ಹಿಂದೆ ಸ್ಥಾಪನೆ ಮಾಡಿದ್ದಾರೆ. ಈ ಮೂಲಕ ಸಮಾಜಬಾಂಧವರ ಕಷ್ಟ ಸುಖಗಳಲ್ಲಿ ಭಾಗಿಗಳಾಗಿ, ಶಿಕ್ಷಣ, ಅರೋಗ್ಯ,ಕಲಾ ಸೇವಾ ಕಾರ್ಯಗಳ ಮುಖಾಂತರ ಸೇವೆಗೈಯುತ್ತ ಬರುತ್ತಿದೆ. ಸಂಘ ವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಹಲವಾರು ಬಿಲ್ಲವ ಸಮಾಜದ ಗಣ್ಯರು, ಮಾಜಿ ಅಧ್ಯಕ್ಷರು, ಸಮಾಜದ ಪ್ರಮುಖರು ಶ್ರಮಿಸಿದ್ದಾರೆ. ಇದೀಗ ಸಂಘವು ಬೆಳ್ಳಿ ಮಹೋತ್ಸವದ ಹೊಸ್ತಿಲಲ್ಲಿದೆ. ಈ ಪರ್ವವನ್ನು ಬಹಳ ಅದ್ದೂರಿಯಾಗಿ ನಡೆಸುವ ಸದವಕಾಶ ನಮಗೆ ಒದಗಿ ಬಂದಿದೆ. ಪುಣೆಯ ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಎಲ್ಲಾ ಸಮಾಜ ಬಾಂಧವರನ್ನು ಒಗ್ಗೂಡಿಸಿ ಸರ್ವರ ಸಹಕಾರದಿಂದ ಈ ಉತ್ಸವವನ್ನು ಸ್ಮರಣಿಯವಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಬೆಳ್ಳಿ ಮಹೋತ್ಸವದ ಯಶಸ್ವಿಗೆ ಸರ್ವ ಬಿಲ್ಲವ ಸಮಾಜ ಬಾಂಧವರು ಕೈ ಜೋಡಿಸಿ ಸಹಕಾರ ನೀಡುವ ಅಗತ್ಯವಿದೆ ಎಂದು ಪುಣೆ ಬಿಲ್ಲವ ಸಂಘದ ಅಧ್ಯಕ್ಷರಾದ ಶೇಖರ್ ಪೂಜಾರಿ ತಿಳಿಸಿದರು.
ನ. 9ರಂದು ಪುಣೆ ಬಿಲ್ಲವ ಸಂಘದ 25ನೇ ವಾರ್ಷಿಕ ಬೆಳ್ಳಿ ಮಹೋತ್ಸವ ಆಚರಣೆಯ ಅಂಗವಾಗಿ ಕಾತ್ರಜ್ನ ಕಿನಾರ ಹೊಟೇಲ್ ಸಭಾಗೃಹದಲ್ಲಿ ನಡೆದ ಪೂರ್ವಭಾವಿ ಸಮಾಲೋಚನ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಂಘದ ಬೆಳ್ಳಿಹಬ್ಬದ ಯಶಸ್ಸಿಗೆ ಸಮಾಜದ ಯುವ ವಿಭಾಗವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕು. ಅಲ್ಲದೆ ಈ ಕಾರ್ಯಕ್ರಮದಲ್ಲಿ ಪ್ರತಿಯೊಂದು ಮನೆಯವರುಪಾಲ್ಗೊಳ್ಳುವಂತಾಗಬೇಕು. ಮುಂದಿನನಮ್ಮ ಸಂಘದ ಅಭಿವೃದ್ಧಿಗೆಸಹಕಾರ ನೀಡುವ ಜತೆಗೆ ಸಮಾಜದ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಈ ಪೂರ್ವಭಾವಿ ಸಭೆಯು ಪುಣೆ ಬಿಲ್ಲವ ಸಂಘದ ಅಧ್ಯಕ್ಷ ಶೇಖರ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ವಿಶ್ವನಾಥ್ ಪೂಜಾರಿ ಕಡ್ತಲ, ಜಯ ರಾಮ ಪೂಜಾರಿ, ಮಾಜಿ ಅಧ್ಯಕ್ಷರಾದ ಸದಾಶಿವ ಎಸ್. ಸಾಲ್ಯಾನ್, ಸದಾನಂದ ಪೂಜಾರಿ, ಶ್ಯಾಮ ಸುವರ್ಣ, ಮಹಿಳಾ ವಿಭಾಗದ ಅಧ್ಯಕ್ಷೆ ಸರೋಜಿನಿ ಡಿ. ಬಂಗೇರ ಅವರು ಉಪಸ್ಥಿತರಿದ್ದರು. ಶಂಕರ್ ಪೂಜಾರಿ ಬಂಟಕಲ್ಲು ಅವರು ಪ್ರಾರ್ಥನೆಗೈದರು. ಈ ಸಂದರ್ಭದಲ್ಲಿ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಆಯೋಜನ ಸಮಿತಿಯನ್ನು ರಚಿಸಲಾಯಿತು. ಸಂಘದ
ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ಇವರನ್ನು ಸಮಿತಿ ಅಧ್ಯಕ್ಷ
ರನ್ನಾಗಿ ಮತ್ತು ಮಹಿಳಾ ವಿಭಾಗದಲ್ಲಿ ರೇವತಿ ಪೂಜಾರಿ ಅವರನ್ನು ಕಾರ್ಯಾಧ್ಯಕ್ಷೆಯನ್ನಾಗಿ ಅಯ್ಕೆ ಮಾಡಲಾಯಿತು.
ವಿಶ್ವನಾಥ್ ಪೂಜಾರಿ ಕಡ್ತಲ ಅವರು ಸಮಾರಂಭದ ತಯಾರಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಣೆ ತುಳುಕೂಟದ ಪಿಂಪ್ರಿ-ಚಿಂಚಾÌಡ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಶ್ಯಾಮ… ಸುವರ್ಣ, ಪುಣೆ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಸದಾಶಿವ ಸಾಲ್ಯಾನ್, ಮಹಿಳಾ ವಿಭಾಗದ ಅಧ್ಯಕ್ಷೆ ಸರೋಜಿನಿ ಬಂಗೇರ ಮತ್ತು ಸಮಿತಿ ಸದಸ್ಯರು ಸಮಾಜ ಬಾಂಧವರು ಕೆಲವು ಸಲಹೆ ಸೂಚನೆ ಅನಿಸಿಕೆಗಳನ್ನೂ ಸಭೆಯಲ್ಲಿ ವ್ಯಕ್ತಪಡಿಸಿದರು. ಬೆಳ್ಳಿ ಮಹೋತ್ಸವವನ್ನು 2018ರ ಫೆಬ್ರವರಿ ತಿಂಗಳಲ್ಲಿ ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಂದಿನ ಸಭೆಯಲ್ಲಿ ದಿನಾಂಕ ನಿಗದಿಪಡಿಸಿ ತಿಳಿಸಲಾಗುವುದೆಂದು ಹೇಳಿದರು.
ಈ ಸಭೆಯಲ್ಲಿ ಬಿಲ್ಲವ ಸಂಘದ ಕಾರ್ಯದರ್ಶಿ ಲೋಹಿತ್ ಕೆ. ಪೂಜಾರಿ ಅವರು ಸಮಾಜದ ಪ್ರಮುಖರಾದ ಶಂಕರ್ ಪೂಜಾರಿ ದುರ್ಗಾ, ಸುದರ್ಶನ್ ಸುವರ್ಣ, ರವಿಂದ್ರ ಪೂಜಾರಿ, ಶಂಕರ್ ಪೂಜಾರಿ ಬಂಟಕಲ್ಲು, ಶಿವರಾಮ ಪೂಜಾರಿ, ಪ್ರಭಾಕರ ಗುರುಸ್ವಾಮಿ, ಜಯ ಟಿ. ಪೂಜಾರಿ, ವಿಶ್ವನಾಥ್ ಟಿ. ಪೂಜಾರಿ, ವಿಶ್ವನಾಥ್ ಪೂಜಾರಿ ಕಪಿಲ, ಹರೀಶ್ ಪೂಜಾರಿ, ಹರೀಶ್ ಟಿ. ಪೂಜಾರಿ, ಗಿರೀಶ್ ಪೂಜಾರಿ, ವಸಂತ್ ಪೂಜಾರಿ ಪಾಷಣ್, ಶಿವಪ್ರಸಾದ್ ಪೂಜಾರಿ, ಕಿಶೋರ್ ಪೂಜಾರಿ, ಉಮಾ ಪೂಜಾರಿ, ರೇವತಿ ಪೂಜಾರಿ, ನೂತನ್ ಸುವರ್ಣ, ಲೀಲಾ ಪೂಜಾರಿ, ಶಾಲಿನಿ ಪೂಜಾರಿ, ಕಾರ್ಯದರ್ಶಿ ಸುನೀತಾ ಪೂಜಾರಿ, ವನಿತಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು. ಸಂಘದ ಜೊತೆ ಕಾರ್ಯದರ್ಶಿ ಸುಂದರ್ ಕರ್ಕೇರ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.