Advertisement

ಭೀಮಾ-ಕೋರೇಗಾಂವ್‌: ಇಂದು 201ನೇ ವರ್ಷಾಚರಣೆ; ಬಿಗಿ ಭದ್ರತೆ

05:24 AM Jan 01, 2019 | udayavani editorial |

ಪುಣೆ : ಕೋರೇಗಾಂವ್‌ – ಭೀಮಾ ಐತಿಹಾಸಿಕ ಕದನದ 201ನೇ ವರ್ಷಾಚರಣೆ ಇಂದಿಲ್ಲಿ ನಡೆಯಲಿದ್ದು ಸುಮಾರು ಐದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

Advertisement

ಭೀಮಾ ಕೋರೇಗಾಂವ್‌ 201ನೇ ವರ್ಷಾಚರಣೆ ಪ್ರಯುಕ್ತ ಸಮಾವೇಶಗೊಳ್ಳವ ಜನರು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪೆರ್ಣೆ ಗ್ರಾಮಕ್ಕೆ ಸಮೀಪದ ಜಯ ಸ್ತಂಭಕ್ಕೆ 
ಭೇಟಿ ನೀಡಲಿದ್ದಾರೆ. 

ಕಳೆದ ವರ್ಷ ನಡೆದಿದ್ದ ಕಾರ್ಯಕ್ರಮದ ವೇಳೆ ಓರ್ವ ಮೃತಪಟ್ಟು ಇತರ ಅನೇಕರು ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನು ಈ ಬಾರಿ ಆಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ದೊಂಬಿ ನಿಗ್ರಹ ದಳದ ಮೂರು ತಂಡಗಳು ಮತ್ತು ಬಾಂಬ್‌ ವಿಲೇವಾರಿ ದಳದ ತಂಡಗಳನ್ನು ಈ ಬಾರಿ ಮುನ್ನೆಚ್ಚರಿಕೆಯ ಕ್ರಮವಾಗಿ ನಿಯೋಜಿಸಲಾಗಿದೆ. 

ಐದು ಸಾವಿರ ಪೊಲೀಸರು, ರಾಜ್ಯ ಮೀಸಲು ಪೊಲೀಸ್‌ ಪಡೆಯ 12 ತಂಡಗಳು, 1,000 ಹೋಮ್‌ ಗಾರ್ಡ್‌ ಸಿಬಂದಿಗಳು ಮತ್ತು 500 ಪರಿಸ್ಥಿತಿ-ಉಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

Advertisement

ನಿನ್ನೆ ಸೋಮವಾರ ಮಹಾರಾಷ್ಟ್ರದ ವಿವಿಧ ಭಾಗಗಳಿಂದ 18,000 ಕ್ಕೂ ಅಧಿಕ ಸಂದರ್ಶಕರು ಇಲ್ಲಿಗೆ ಬಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next