Advertisement
ಮುಂಬಯಿ ಪಂದ್ಯ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೆ 200ನೇ ಪಂದ್ಯವಾಗಿತ್ತು. ವೈಯಕ್ತಿಕ ಸಾಧನೆಯೊಂದಿಗೆ ಅವರೇನೋ ಇದನ್ನು ಸ್ಮರಣೀಯಗೊಳಿಸಿದರು. ಆದರೆ ಕೊನೆಯಲ್ಲಿ ತಂಡ ಸೋಲುವುದನ್ನು ಕಾಣಬೇಕಾಯಿತು. ಪುಣೆ ಮುಖಾ ಮುಖೀ ಕೂಡ ಸ್ಮರಣೀಯವೇ. ಕಾರಣ, ಇದು ಭಾರತ-ನ್ಯೂಜಿಲ್ಯಾಂಡ್ ನಡುವಿನ 100ನೇ ಪಂದ್ಯ!
“ವಾಂಖೇಡೆ’ಯಲ್ಲಿ ಆರಂಭಿಕ ಕುಸಿತಕ್ಕೆ ಸಿಲುಕಿದ ಭಾರತ, ಬಳಿಕ ಕೊಹ್ಲಿ ಶತಕ ಸಾಹಸದಿಂದ 280ರ ತನಕ ಬೆಳೆದಿತ್ತು. ಇದನ್ನು ಧಾರಾಳವಾಗಿ ಉಳಿಸಿಕೊಳ್ಳಬಹುದಿತ್ತು. ಆದರೆ 80 ರನ್ನಿಗೆ 3 ವಿಕೆಟ್ ಕಿತ್ತ ಭಾರತಕ್ಕೆ ರಾಸ್ ಟಯ್ಲರ್-ಟಾಮ್ ಲ್ಯಾಥಂ ಜೋಡಿ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತು. ಈ ಜೋಡಿ ಬೇರ್ಪಡುವಾಗ ಆಗಲೇ ಇತ್ತಂಡಗಳ ಮೊತ್ತ ಸಮನಾಗಿತ್ತು. ಟಯ್ಲರ್-ಲ್ಯಾಥಂ 4ನೇ ವಿಕೆಟಿಗೆ 200 ರನ್ನುಗಳ ದಾಖಲೆ ಜತೆಯಾಟ ನಡೆಸಿ ನ್ಯೂಜಿಲ್ಯಾಂಡಿಗೆ ಅಮೋಘ ಜಯವೊಂದನ್ನು ತಂದಿತ್ತರು.
Related Articles
Advertisement
ಪುಣೆ ಪಂದ್ಯಕ್ಕಾಗಿ ಭಾರತದ ಸ್ಪಿನ್ ವಿಭಾಗದಲ್ಲಿ ಬದಲಾವಣೆ ಗೋಚರಿಸೀತೇ ಎಂಬುದೊಂದು ಪ್ರಶ್ನೆ. ಯಾದವ್ ಅಥವಾ ಚಾಹಲ್ ಬದಲು ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವಕಾಶ ಪಡೆಯಲೂಬಹುದು. ಯಾರೇ ಬಂದರೂ ನ್ಯೂಜಿಲ್ಯಾಂಡಿಗೆ ಸ್ಪಿನ್ ಭೀತಿ ಹುಟ್ಟಿಸದೆ ಗೆದ್ದು ಬರುವುದು ಕಷ್ಟ!
ಬೇಕಿದೆ ದಿಟ್ಟ ಆರಂಭನ್ಯೂಜಿಲ್ಯಾಂಡಿನ ಬೌಲಿಂಗ್ ಕೂಡ ಭಾರತವನ್ನು ಕಟ್ಟಿ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಮುಖ್ಯ ವಾಗಿ ವೇಗಿ ಟ್ರೆಂಟ್ ಬೌಲ್ಟ್ ನಿಖರ ಹಾಗೂ ಘಾತಕ ದಾಳಿ ಸಂಘಟಿಸಿದರು. ಇವರನ್ನು ಎದುರಿಸುವುದು ಧವನ್-ರೋಹಿತ್ ಜೋಡಿಗೆ ದೊಡ್ಡ ಸಮಸ್ಯೆಯಾಗಿ ಪರಿ ಣಮಿಸಿತು. ಸೌಥಿ 3 ವಿಕೆಟ್ ಕಿತ್ತರೂ ದುಬಾರಿಯಾದರು. ಮಿಲೆ° ಕೂಡ ಪರಿಣಾಮ ಬೀರಲಿಲ್ಲ. ಬೌಲ್ಟ್ ದಾಳಿ ಯನ್ನು ಯಶಸ್ವಿಯಾಗಿ ನಿಭಾಯಿಸಿ ಉತ್ತಮ ಆರಂಭ ಕಂಡುಕೊಳ್ಳುವುದು ಭಾರತದ ಯೋಜನೆ ಆಗಬೇಕು. ರೋಹಿತ್-ಧವನ್, ಇಬ್ಬರಲ್ಲೊಬ್ಬರು ಸಿಡಿಯಲೇಬೇಕು. ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗಿನ ಶಕ್ತಿ ಸಾಲದು. ಕೇದಾರ್ ಜಾಧವ್ ಬದಲು ಪಾಂಡೆಯನ್ನು ಆಡಿಸುವ ಬಗ್ಗೆ ಚಿಂತಿಸಲಾಗುತ್ತಿದೆಯಾದರೂ, ಜಾಧವ್‌ಅವರಿಗೆ ಪುಣೆ ತವರು ಅಂಗಳವಾದ್ದರಿಂದ ಅವರನ್ನು ಕೈಬಿಡುವ ಸಾಧ್ಯತೆ ಕಡಿಮೆ. ಪುಣೆಯ “ಮಹಾರಾಷ್ಟ್ರ ಕ್ರಿಕೆಟ್ ಆಸೋಸಿಯೇಶನ್ ಸ್ಟೇಡಿಯಂ’ ದೊಡ್ಡ ಮೊತ್ತಕ್ಕೆ ಹೆಸರುವಾಸಿ. ಇಲ್ಲಿ ಈವರೆಗೆ ಎರಡೇ ಪಂದ್ಯಗಳು ನಡೆದರೂ 3 ಇನ್ನಿಂಗ್ಸ್‌ಗಳಲ್ಲಿ ತಂಡದ ಮೊತ್ತ ಮುನ್ನೂರರ ಆಚೆ ಜಿಗಿದಿದೆ. 2 ಸಲ 350ರ ಗಡಿಯನ್ನೂ ಮುಟ್ಟಿದೆ! ಇಲ್ಲಿ ಮೊದಲ ಏಕದಿನ ಪಂದ್ಯ ನಡೆದದ್ದು 2013ರಲ್ಲಿ, ಆಸ್ಟ್ರೇಲಿಯ ವಿರುದ್ಧ. ಇದನ್ನು ಆಸೀಸ್ 72 ರನ್ನುಗಳಿಂದ ಗೆದ್ದಿತ್ತು. ಮೊದಲು ಬ್ಯಾಟ್ ಮಾಡಿದ ಜಾರ್ಜ್ ಬೈಲಿ ಪಡೆ 8ಕ್ಕೆ 304 ರನ್ ಗಳಿಸಿದರೆ, ಭಾರತ 232ಕ್ಕೆ ಕುಸಿದಿತ್ತು. ಈ ಫಲಿತಾಂಶದೊಂದಿಗೆ ಆಸ್ಟ್ರೇಲಿಯ 7 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಪುಣೆಯ 2ನೇ ಪಂದ್ಯ ಇದೇ ವರ್ಷ ಜ. 15ರಂದು ಇಂಗ್ಲೆಂಡ್ ವಿರುದ್ಧ ನಡೆದಿತ್ತು. ಬೃಹತ್ ಮೊತ್ತದ ಈ ಮೇಲಾಟದಲ್ಲಿ ಭಾರತ 3 ವಿಕೆಟ್‌ಗೆಲುವು ಒಲಿಸಿಕೊಂಡಿತ್ತು. ಇಂಗ್ಲೆಂಡ್ 7ಕ್ಕೆ 350 ರನ್ ಪೇರಿಸಿ ಸವಾಲೊಡ್ಡಿದರೆ, ಧೋನಿ ಪಡೆ 48.1 ಓವರ್‌ಗಳಲ್ಲಿ 7 ವಿಕೆಟಿಗೆ 356 ರನ್ ಬಾರಿಸಿ ಜಯಭೇರಿ ಮೊಳಗಿಸಿತು. ಕೊಹ್ಲಿ 122, ಕೇದಾರ್ ಜಾಧವ್ 120 ರನ್ ಬಾರಿಸಿ ಅಮೋಘ ಗೆಲುವು ತಂದಿತ್ತರು. ಇವರಿಬ್ಬರ 5ನೇ ವಿಕೆಟ್ ಜತೆಯಾಟದಲ್ಲಿ ಭರ್ತಿ200 ರನ್ ಒಟ್ಟುಗೂಡಿತ್ತು.
ಈ ಸಲವೂ ಇಲ್ಲಿ ರನ್ ಹೊಳೆಯೇ ಹರಿಯುವ ನಿರೀಕ್ಷೆ ದಟ್ಟವಾಗಿದೆ.