Advertisement

ಬೀದಿ ನಾಯಿಗಳನ್ನು ಜೀವಂತ ಸುಟ್ಟ ದುಷ್ಕರ್ಮಿಗಳು

12:28 PM Oct 05, 2017 | udayavani editorial |

ಪುಣೆ : ಇನ್ನೊಂದು ಆಘಾತಕಾರಿ ಮತ್ತು ಅಮಾನುಷ ಪ್ರಾಣಿ ಹಿಂಸೆ ದುಷ್ಕೃತ್ಯದ ಪ್ರಕರಣವೊಂದರಲ್ಲಿ ನಾಲ್ಕು ಬೀದಿ ನಾಯಿಗಳನ್ನು ಹಗ್ಗದಿಂದ ಬಿಗಿದು, ರಸ್ತೆಯಲ್ಲಿ ಅವುಗಳನ್ನು ದರದರನೆ ಎಳೆದೊಯ್ದು ಜೀವಂತ ಸುಟ್ಟು ಹಾಕಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

Advertisement

ನಾಯಿಗಳ ಅರೆಸುಟ್ಟ ದೇಹದ ಕೊಳೆತ ಭಾಗಗಳು ಮತ್ತು ಅಸ್ಥಿಪಂಜರಗಳು ಸಮೀಪದ ಪೊದೆಗಳಲ್ಲಿ ಕಂಡು ಬಂದಿರುವುದಾಗಿ ವರದಿಗಳು ತಿಳಿಸಿವೆ. ನಾಯಿಗಳಿಗೆ ಮೊದಲು ವಿಷ ಉಣಿಸಿ ಬಳಿಕ ಅವುಗಳನ್ನು ದಾರುಣವಾಗಿ ಮತ್ತು ಅಮಾನುಷವಾಗಿ ಸುಟ್ಟು ಕೊಲ್ಲಲಾಗಿರುವುದು ಅವಶೇಷಗಳಿಂದ ಗೊತ್ತಾಗಿದೆ.

ಈ ದುಷ್ಕೃತ್ಯದ ಬಗ್ಗೆ ಅನಾಮಿಕ ಕರೆ ಪಡೆದ ಎನ್‌ಜಿಓ ಸದಸ್ಯೆ ನೀನಾ ರಾಯ್‌ ಎಂಬವರು ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಪೊದೆಯಡಿ ಅರೆ ಸುಟ್ಟ ನಾಯಿಗಳ ಅವಶೇಷಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದವು. ಸುಟ್ಟು ಕೊಲ್ಲಲಾಗಿರುವ ನಾಯಿಗಳು ಸಂಖ್ಯೆ ನಾಲ್ಕಕ್ಕಿಂತ ಹೆಚ್ಚಿರಬಹುದೆಂದು ಶಂಕಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next