Advertisement

ಕಾಮಗಾರಿ ಸ್ಥಳದಲ್ಲಿ ವಾಹನ ನಿಲ್ಲಿಸದಂತೆ ಸಂಸದರಿಂದ ಸೂಚನೆ

11:16 AM Jul 06, 2018 | |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಂಪ್‌ ವೆಲ್‌ ಬಳಿ ಫ್ಲೈ ಓವರ್‌ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ಹೊಂದಿಕೊಂಡಂತೆ ತೊಕ್ಕೊಟ್ಟು ಮಾರ್ಗದ ಕಾಮಗಾರಿ ನಡೆಯಬೇಕಾದ ಜಾಗದಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡಿ ಸುಗಮ ಸಂಚಾರಕ್ಕೆ ಅಡ್ಡಿ ಮಾಡಲಾಗುತ್ತಿದೆ. ಈ ರೀತಿ ಅನಧಿಕೃತವಾಗಿ ವಾಹನ ನಿಲ್ಲಿಸುವುದಕ್ಕೆ ಅನುಮತಿ ನೀಡಬಾರದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಟ್ರಾಫಿಕ್‌ ಪೊಲೀಸರಿಗೆ ಸೂಚಿಸಿದ್ದಾರೆ.

Advertisement

ಎನ್‌ಎಚ್‌ಎಐ ಮತ್ತು ನವಯುಗ ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳೊಂದಿಗೆ ಗುರುವಾರ ತೊಕ್ಕೊಟ್ಟು, ತಲಪಾಡಿ, ಪಂಪ್‌ವೆಲ್‌, ನಂತೂರು, ಕೊಟ್ಟಾರ ಹಾಗೂ ಸುರತ್ಕಲ್‌ಗ‌ಳಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೀಕ್ಷಣೆ ಮಾಡಿದ ಸಂದರ್ಭ ಅವರು ಅಧಿಕಾರಿಗಳಿಗೆ ಈ ಸೂಚನೆ ಕೊಟ್ಟಿದ್ದಾರೆ.

ಫ್ಲೈಓವರ್‌ ನಿರ್ಮಾಣದ ಸಂಪರ್ಕ ರಸ್ತೆಯ ಮಧ್ಯ ಭಾಗದ ಖಾಲಿ ವಾಹನಗಳನ್ನು ನಿಲ್ಲಿಸುವುದರಿಂದ ಸರ್ವಿಸ್‌ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡ್ಡಿಯಾಗಿ ನಿತ್ಯ ಟ್ರಾಫಿಕ್‌ ಸಮಸ್ಯೆ ಎದುರಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಇಲ್ಲಿ ಇನ್ನುಮುಂದೆ ವಾಹನಗಳ ನಿಲುಗಡೆ ಮಾಡಲು ಅವಕಾಶ ನೀಡಬಾರದು ಎಂದು ಹೇಳಿದರು. 

ಪಂಪ್‌ವೆಲ್‌ನಲ್ಲಿ ಮೇಲ್ಸೇತುವೆ ಪೂರ್ತಿಗೊಳಿಸುವ ಮೊದಲು ಸರ್ವೀಸ್‌ ರಸ್ತೆಯ ನಿರ್ಮಾಣ ಆಗಬೇಕು ಎಂದವರು ಸೂಚನೆ ನೀಡಿದರು. ಎನ್‌ಎಚ್‌ಎಐ ಅಧಿಕಾರಿ ಅಜಿತ್‌, ಬಿಜೆಪಿ ಮುಖಂಡರಾದ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಸತೀಶ್‌ ಕುಂಪಲ, ಲಲಿತಾ ಸುಂದರ್‌ ತೊಕ್ಕೊಟ್ಟು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next