Advertisement

ಮಸೂದ್‌ಗೆ ಪಾಕ್‌ನಲ್ಲಿ ಲಾಡೆನ್‌ನಷ್ಟೇ ಭದ್ರತೆ!

12:30 AM Feb 17, 2019 | |

ಪುಲ್ವಾಮಾ ದಾಳಿ ಹೊಣೆ ಹೊತ್ತಿರುವ ಜೈಶ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ಗೆ ಪಾಕ್‌ನಲ್ಲಿ ಉಗ್ರ ಒಸಾಮಾ ಬಿನ್‌ ಲಾಡೆನ್‌ಗೆ ನೀಡಿ ದಷ್ಟೇ ಭದ್ರತೆ ಒದಗಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈತ ಬಹಾವಲ್‌ಪುರದಲ್ಲಿ ಪಾಕಿ ಸ್ತಾನ ಸೇನಾ ಅಕಾಡೆಮಿಯಿಂದ ಅರ್ಧ ಕಿ.ಮೀಟರು ದೂರದಲ್ಲಿರುವ ಬೃಹತ್‌ ಬಂಗಲೆಯಲ್ಲಿ ವಾಸಿಸುತ್ತಿ ದ್ದಾನೆ. ಈತನ ಮನೆಯಿಂದ ಸ್ವಲ್ಪ ದೂರದಲ್ಲೇ ಸೇನಾ ಕಂಟೋನ್ಮೆಂಟ್‌ ಕೂಡ ಇದೆ. ಇದೇ ಪ್ರದೇಶದಲ್ಲಿ ಜಾಮಿಯಾ ಮಸೀದಿ ಸುಭಾನ್‌ ಅಲ್ಲಾ ಕೂಡ ಇದೆ. 2011ರ ಸುಮಾರಿಗೆ ಈ ಮಸೀದಿಯನ್ನು ಸಮಗ್ರ ವಾಗಿ ಮರುನಿರ್ಮಾಣ ಮಾಡಲಾಗಿದೆ. ಈ ಸ್ಥಳಕ್ಕೆ ಭದ್ರತೆ ಒದಗಿಸುವುದಕ್ಕಾಗಿ ಸಾರೈಕಿ ಚೌಕ್‌ ಎಂಬಲ್ಲಿ ಎಫ್6 ಯುದ್ಧ ವಿಮಾನಗಳನ್ನು ನಿಯೋಜಿಸಲಾಗಿದೆ. ಇಲ್ಲಿಂದ 8 ಕಿ.ಮೀ ದೂರದಲ್ಲಿ 30 ಸಾವಿರ ಯೋಧರ ಪಡೆಯ ಕೇಂದ್ರ ಕಚೇರಿ ಇದೆ. ಈ ಪ್ರದೇಶದಲ್ಲಿ ನ್ಯೂಕ್ಲಿಯರ್‌ ಆಂಕಾಲಜಿ ಇನ್‌ಸ್ಟಿಟ್ಯೂಟ್‌ ಹೆಸರಿನಲ್ಲಿ ಅಣ್ವಸ್ತ್ರವನ್ನೂ ನಿಯೋಜಿಸಲಾಗಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next