Advertisement

ಪುಲ್ವಾಮಾ ದಾಳಿ: ಮಹಿಳೆಯರು, ಮಕ್ಕಳಿಂದ ಪಾಕ್‌ ಮಿಲಿಟರಿ RDX ಸಾಗಾಟ

10:23 AM Feb 20, 2019 | udayavani editorial |

ಶ್ರೀನಗರ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ಕಳೆದ ಫೆ.14ರಂದು ಕನಿಷ್ಠ 40 ಭಾರತೀಯ ಯೋಧರನ್ನು ಬಲಿಪಡೆದಿದ್ದ ಜೆಇಎಂ ಉಗ್ರರ ಆತ್ಮಾಹುತಿ ಬಾಂಬ್‌ ದಾಳಿಗೆ ಬಳಸಲಾಗಿದ್ದ ಸುಮಾರು 300 ಕಿಲೋ ಆರ್‌ಡಿಎಕ್ಸ್‌ ಸ್ಫೋಟಕವನ್ನು ಗಡಿಯಾಚೆಯಿಂದ ತರಲಾಗಿದ್ದು ಅದನ್ನು ಸಣ್ಣ ಸಣ್ಣ ಪ್ರಮಾಣದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಬಳಸಿಕೊಂಡು ಸಾಗಾಟ ಮಾಡಲಾಗಿತ್ತು ಎಂದು ಗುಪ್ತಚರ ಮೂಲಗಳು ತಿಳಿಸಿವೆ. 

Advertisement

ಆತ್ಮಾಹುತಿ ಬಾಂಬ್‌ ದಾಳಿಗೆ ಬಳಸಲಾದ ಆರ್‌ಡಿಎಕ್ಸ್‌ ಬಗ್ಗೆ ಗುಪ್ತಚರ ದಳ ಕಲೆಹಾಕಿದ ಮಾಹಿತಿಗಳು ಈ ರೀತಿ ಇವೆ :

1. 2018ರ ಮಾರ್ಚ್‌ ತಿಂಗಳಿಂದ ತೊಡಗಿ, ಪುಲ್ವಾಮಾ ದಾಳಿಗೆ  ಕೆಲವೇ ದಿನಗಳು ಇರುವ ತನಕ, ಆರ್‌ಡಿಎಕ್ಸ್‌ ಸ್ಫೋಟಕವನ್ನು ಗಡಿಯಾಚೆಯಿಂದ (ಪಾಕಿಸ್ಥಾನದಿಂದ) ಕಂತು ಕಂತಿನಲ್ಲಿ ತರಲಾಗಿತ್ತು.

2. ಈ ಸ್ಫೋಟಕವು ಮಿಲಿಟರಿ ಮಾತ್ರವೇ ಬಳಸುವ ಉನ್ನತ  ಎ-5 ದರ್ಜೆಯ ಆರ್‌ಡಿಎಕ್ಸ್‌ ಸ್ಫೋಟಕವಾಗಿದ್ದು ಇದು ಅತ್ಯಂತ ದುಬಾರಿ; ಇದರ ಸ್ಫೋಟ ಅತ್ಯಂತ ಪರಿಣಾಮಕಾರಿ. ಎ-5 ಗ್ರೇಡ್‌ ಎನ್ನುವುದು ಶೇ.98.5 ರಿಂದ ಶೇ.99.5 ಶುದ್ಧತೆಯ ಸ್ಫೋಟಕಕ್ಕೆ ಸೂಚಕವಾಗಿದೆ.

3. ರಾವಲ್ಪಿಂಡಿಯಲ್ಲಿನ ಸೇನಾ ಘಟಕ ಇದನ್ನು ಜೈಶ್‌ ಉಗ್ರರಿಗೆ ಪೂರೈಸಿದೆ. ಈ ಸ್ಫೋಟಕ ಅತ್ಯಂತ ಸಂವೇದನಾಶೀಲವಾಗಿದ್ದು ಇದನ್ನು ಸಾಗಿಸಲು ಮೇಣ ಅಥವಾ ಸೋಪಿನೊಂದಿಗೆ ಬೆರೆಸಬೇಕಾಗುತ್ತದೆ.

Advertisement

4. ಇಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕವನ್ನು ಸಣ್ಣ ಸಣ್ಣ  ಡ್ರಮ್ಮುಗಳಲ್ಲಿ, ಕಲ್ಲಿದ್ದಲು ಚೀಲಗಳಲ್ಲಿ, ಸಿಲಿಂಡರ್‌ಗಳಲ್ಲಿ ಮತ್ತು ಉಗ್ರರ ಬ್ಯಾಕ್‌ ಪ್ಯಾಕ್‌ ಗಳಲ್ಲಿ ತುಂಬಿಸಿಕೊಂಡು ಪುಲ್ವಾಮಾ ಜಿಲ್ಲೆಯ ತ್ರಾಲ್‌ ಗ್ರಾಮಕ್ಕೆ ತರಲಾಗಿದೆ ಮತ್ತು ಅಲ್ಲಿ ಇದನ್ನು ರಹಸ್ಯವಾಗಿ  ಶೇಖರಿಸಿಡಲಾಗಿದೆ.

5. ಸ್ಫೋಟಕವನ್ನು ಬಳಸುವ ಮುನ್ನ ಇದರ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಕಬ್ಬಿಣ, ಮೊಳೆ ಮೊದಲಾದ ವಸ್ತುಗಳ ಚೂರುಪಾರುಗಳನ್ನು ಶೇಖರಿಸಲಾಗಿದೆ. ಇದರ ಜತೆಗೆ ಅಮೋನಿಯಂ ನೈಟ್ರೇಟ್‌ ಅನ್ನು ಕೂಡ ಸಂಗ್ರಹಿಸಿಡಲಾಗಿದೆ. ಇವೆಲ್ಲವನ್ನೂ ಪುಲ್ವಾಮಾ ಸ್ಫೋಟಕ್ಕೆ ಒಂದೆರಡು ದಿನಗಳಿರುವಾಗ ಮಿಶ್ರಣ ಮಾಡಿ ವಾಹನದಲ್ಲಿ ಅಣಿಗೊಳಿಸಲಾಗಿದೆ. ಸ್ಫೋಟ ನಡೆಸುವ ಎಲ್ಲ ತಾಂತ್ರಿಕ ಪ್ರಕ್ರಿಯೆಗಳನ್ನು ಸ್ಥಳೀಯವಾಗಿಯೇ  ಕೈಗೊಳ್ಳಲಾಗಿದೆ.

6. ಮಿಲಿಟರಿ ದರ್ಜೆಯ ಆರ್‌ಡಿಎಕ್ಸ್‌ ಸ್ಫೋಟಕದ ಪೂರೈಕೆ, ಬಳಕೆ ವಿಧಾನ ಮತ್ತು ಅದರ ನಿರ್ವಹಣೆ ಮತ್ತು ಅಂತಿಮವಾಗಿ ಸ್ಫೋಟ ಇತ್ಯಾದಿ ಎಲ್ಲ ವಿಷಯದಲ್ಲೂ ಪಾಕ್‌ ಮಿಲಿಟರಿಯೇ ನೆರವು, ಸಲಹೆ, ಸೂಚನೆ ನೀಡಿರುವುದು ಸ್ಪಷ್ಟವಿದೆ. 

Advertisement

Udayavani is now on Telegram. Click here to join our channel and stay updated with the latest news.

Next