ಸಾಗರ: ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರು ಸಿಆರ್‌ಪಿಎಫ್ ಯೋಧರನ್ನು ಅಮಾನವೀಯವಾಗಿ ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ ರಕ್ತಚೆಲ್ಲಲೂ ತಾವು ಸಿದ್ಧ ಎಂದು ಕಾಲೇಜು ವಿದ್ಯಾರ್ಥಿಯೋರ್ವ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾನೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಕಾಂ ಓದುತ್ತಿರುವ ಮಹಮ್ಮದ್ ಸಾಕೀಬ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಉಗ್ರರ ದಮನಕ್ಕೆ ನಾವು ಯಾವುದೇ ಸಹಕಾರ ನೀಡಲು ಸಿದ್ಧರಿದ್ದೇವೆ. ಅಗತ್ಯ ಬಂದರೆ ರಕ್ತ ಚೆಲ್ಲಲೂ ಹಿಂಜರಿಯುವುದಿಲ್ಲ ಎಂದು ಪತ್ರದಲ್ಲಿ ಘೋಷಿಸಿದ್ದಾನೆ. ಇಂಗ್ಲಿಷ್‌ನಲ್ಲಿ ಪತ್ರ ಬರೆದಿರುವ ಸಾಕಿಬ್ ಫೆ. 14ರಂದು ಭಾರತದ ಯೋಧರ ಹತ್ಯೆಮಾಡಿರುವುದು ಅಮಾನುಷ ಕೃತ್ಯ. ಪಾಕಿಸ್ತಾನಿ ಉಗ್ರರಿಗೆ ಸೂಕ್ತ ಉತ್ತರ ನೀಡಬೇಕಾಗಿದೆ ಎಂದು ಒತ್ತಾಯಿಸಿದ್ದಾನೆ. ಪತ್ರವನ್ನು ಇ-ಮೇಲ್ ಹಾಗೂ ಅಂಚೆ ಇಲಾಖೆಯ ಸ್ಪೀಡ್‌ಪೋಸ್ಟ್ ಮೂಲಕ ಪ್ರದಾನಿ ಕಚೇರಿಗೆ ರವಾನಿಸಿದ್ದಾರೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಉದ್ದಿಮೆದಾರ ಅಬ್ದುಲ್ ಮುನಾಫ ಗೌರಕರ್ ಮತ್ತು ರೇಷ್ಮಾ ದಂಪತಿ ಹಿರಿಯ ಮಗನಾಗಿರುವ ಸಾಕೀಬ್ ಪಿಯುಸಿಯನ್ನು ಸಾಗರದ ಸರ್ಕಾರಿ ಕಾಲೇಜಿನಲ್ಲಿ ಪೂರೈಸಿದ್ದು, ಇದೀಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಉಗ್ರರ ದಾಳಿ ಬೇಸರ ತಂದಿತ್ತು. ಪ್ರಧಾನಿಗೆ ಪತ್ರ ಬರೆಯುವ ಬಯಕೆ ಆಯಿತು. ಗೆಳೆಯ ಆಸೀಫ್, ನಾನು ಸೇರಿ ಸಿದ್ದಾಪುರದ ಸೈಬರ್ ಸೆಂಟರ್‌ನಲ್ಲಿ ಪತ್ರ ಟೈಪ್ ಮಾಡಲು ತೊಡಗಿದೆವು. ಆಕಸ್ಮಿಕವಾಗಿ ಮಾಜಿ ಯೋಧರೊಬ್ಬರು ಅಲ್ಲಿಗೆ ಬಂದರು. ಅವರ ಬಳಿ ಸಲಹೆ ಪಡೆದುಕೊಂಡೆವು. ಶನಿವಾರ ಅಂಚೆ ಮೂಲಕ ಕಳಿಸಿದ್ದೇನೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಂದೆ ಸಹ ಭಾರತ ದೇಶಕ್ಕೆ ಏನಾದರೂ ಮಾಡಬೇಕೆಂಬ ಹಂಬಲವಿದೆ.
ಸಾಕೀಬ್ ಪತ್ರ ಬರೆದ ಯುವಕ
ಸಾಗರ ಕಾಲೇಜು ವಿದ್ಯಾರ್ಥಿ ಮಹಮ್ಮದ್ ಸಾಕೀಬ್ ಪ್ರಧಾನಿಯವರಿಗೆ ಬರೆದ ಪತ್ರ ಹೀಗಿದೆ.