ಶ್ರೀನಗರ: ನಲ್ವತ್ತು ಮಂದಿ ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾಗಿದ್ದ ಪುಲ್ವಾಮಾ ಆತ್ಮಾಹುತಿ ದಾಳಿಯ ಮಾಸ್ಟರ್ ಮೈಂಡ್ ಮುದಸ್ಸಿರ್ ಅಹ್ಮದ್ ಖಾನ್ ಅಲಿ ಯಾಸ್ ಮೊಹಮ್ಮದ್ ಭಾಯ್‌ನನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. ದಕ್ಷಿಣ ಕಾಶ್ಮೀರದ ತ್ರಾಲ್ ಪ್ರದೇಶದಲ್ಲಿ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಮುದಸ್ಸಿರ್ ಸಹಿತ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮುದಸ್ಸಿರ್ ಹತ್ಯೆ ಮೂಲಕ ಜೈಶ್ ಉಗ್ರ ಸಂಘಟನೆಗೆ ಅತೀ ದೊಡ್ಡ ಆಘಾತ ನೀಡಲಾಗಿದೆ ಎಂದು ತುರ್ತು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ಧಿಲ್ಲಾನ್, ಸಿಆರ್‌ಪಿಎಫ್ ಐಜಿ ಝುಲ್ಫಿಕರ್ ಹುಸೇನ್ ಮತ್ತು ಕಾಶ್ಮೀರದ ಐಜಿ ಎಸ್.ಪಿ. ಪಾಣಿ ತಿಳಿಸಿದರು.
ತ್ರಾಲ್ ಪ್ರದೇಶದ ಪಿಂಗ್ಲಿಷ್‌ನಲ್ಲಿ ಉಗ್ರರು ಅವಿತಿರುವ ಬಗ್ಗೆ ಸುಳಿವು ಸಿಗುತ್ತಲೇ ರವಿವಾರ ರಾತ್ರಿ ಭದ್ರತಾ ಪಡೆ ಶೋಧ ಕಾರ್ಯ ಆರಂಭಿಸಿತು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಕೆಲವು ಗಂಟೆಗಳ ಕಾಲ ಪರಸ್ಪರ ಗುಂಡಿನ ಚಕಮಕಿ ನಡೆಯಿತು. ಈ ಎನ್‌ಕೌಂಟರ್‌ನಲ್ಲಿ ಮೂವರನ್ನು ಹೊಡೆ ದುರುಳಿಸಲಾಯಿತು. ಮೃತ ಉಗ್ರರಲ್ಲಿ ಓರ್ವನನ್ನು “ಕೋಡ್ ಖಾಲಿದ್’ ಎಂದು ಗುರುತಿಸಲಾಗಿದ್ದು, ಈತ ಪಾಕಿಸ್ಥಾನಿ ಪ್ರಜೆ ಎಂದು ಹೇಳಲಾಗಿದೆ.
ಈತನಲ್ಲದೆ ದಾಳಿಯ ಮಾಸ್ಟರ್‌ಮೈಂಡ್ ಮುದಸ್ಸಿರ್ ಮತ್ತು ಸಜ್ಜದ್ ಭಟ್‌ನನ್ನೂ ಹತ್ಯೆ ಗೈಯಲಾಗಿದೆ. ಸಜ್ಜದ್ ಭಟ್‌ನ ಕಾರನ್ನೇ ಆತ್ಮಾಹುತಿ ದಾಳಿಗೆ ಬಳಸಲಾಗಿತ್ತು. ಕಾರ್ಯಾ ಚರಣೆ ಸಂದರ್ಭ ಗುರುತು ಕೂಡ ಸಿಗದ ರೀತಿ ಈತನ ದೇಹ ಸುಟ್ಟು ಕರಕ ಲಾಗಿದ್ದು, ಮೃತದೇಹವನ್ನು ಸ್ವೀಕರಿ ಸಲು ಕುಟುಂಬ ಸದಸ್ಯರು ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುದಸ್ಸಿರ್‌ನ ಕುಟುಂಬ ಸದಸ್ಯರು ಮೃತದೇಹ ವನ್ನು ಸ್ವೀಕ ರಿಸಿದ್ದಾರೆ. ಪುಲ್ವಾಮಾದವನೇ ಆಗಿ ರುವ ಮುದಸ್ಸಿರ್ ಖಾನ್ (23) ಪದವೀಧರನಾಗಿದ್ದು, ಎಲೆಕ್ಟ್ರೀಶಿಯನ್ ಕೋರ್ಸ್ ಕೂಡ ಮುಗಿಸಿದ್ದಾನೆ. ಪುಲ್ವಾಮಾ ದಾಳಿಗೆ ಸಂಚು ರೂಪಿಸುವುದರ ಜತೆಗೆ ಸ್ಫೋಟಕ ಗಳು ಮತ್ತು ವಾಹನದ ವ್ಯವಸ್ಥೆಯನ್ನು ಕಲ್ಪಿಸಿದ್ದು ಕೂಡ ಈತನೇ ಎಂದು ಸಾಕ್ಷ್ಯ ಸಂಗ್ರಹ ವೇಳೆ ತನಿಖಾಧಿಕಾರಿಗಳು ಕಂಡುಕೊಂಡಿದ್ದರು.