Advertisement

ಪುಲ್ವಾಮಾ: 6 ಭದ್ರತಾ ಸಿಬಂದಿ ಹುತಾತ್ಮ; ಇಬ್ಬರು ಉಗ್ರರ ಹತ್ಯೆ

07:25 PM Aug 26, 2017 | Team Udayavani |

ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪೊಲೀಸ್‌ ಲೈನ್‌ನಲ್ಲಿ ಇಂದು ನಡೆದ ಎನ್‌ಕೌಂಟರ್‌ನಲ್ಲಿ ಆರು ಭದ್ರತಾ ಪಡೆ ಸಿಬಂದಿಗಳು ಹುತಾತ್ಮರಾಗಿದ್ದಾರೆ. ಇಬ್ಬರು ಉಗ್ರರು ಹತರಾಗಿದ್ದಾರೆ ಮತ್ತು ಐದು ಭದ್ರತಾ ಸಿಬಂದಿಗಳು ಗಾಯಗೊಂಡಿದ್ದಾರೆ.

Advertisement

ಹುತಾತ್ಮರಾದ ಭದ್ರತಾ ಸಿಬಂದಿಗಳಲ್ಲಿ ಮೂವರು ಪೊಲೀಸರಾಗಿದ್ದಾರೆ ಮತ್ತು ಇಬ್ಬರು  ಸಿಆರ್‌ಪಿಎಫ್ ಜವಾನರಾಗಿರುವ ಜಸ್ವಂತ್‌ ಸಿಂಗ್‌ ಮತ್ತು ಧನವಾಡೆ ರವೀಂದರ್‌. ಇನ್ನಿಬ್ಬರು ಸಿಆರ್‌ಪಿಎಫ್ ಸಿಬಂದಿಗಳಿಗೆ ಗಾಯಗಳಾಗಿವೆ. 

ಈಗಲೂ ಜಾರಿಯಲ್ಲಿರುವ ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಈ ಮೊದಲು ನಾಪತ್ತೆಯಾಗಿದ್ದಾರೆ ಎಂದು ತಿಳಿಯಲಾಗಿದ್ದ ವಿಶೇಷ ಪೊಲೀಸ್‌ ಅಧಿಕಾರಿಗಳಿಬ್ಬರ ಶವಗಳು ಅನಂತರದಲ್ಲಿ ಪತ್ತೆಯಾಗಿವೆ. 

Advertisement

Udayavani is now on Telegram. Click here to join our channel and stay updated with the latest news.

Next