Advertisement

ಶಾಸಕರಿಂದ 10 ಲಕ್ಷ ರೂ. ಮೊತ್ತದ 700ಕ್ಕೂ ಅಧಿಕ ಪಲ್ಸ್ ಆಕ್ಸಿ ಮೀಟರ್ ಹಸ್ತಾಂತರ

05:55 PM May 29, 2021 | Team Udayavani |

ಕಟಪಾಡಿ : ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಥಳೀಯ ಶಾಸಕರ ನಿಯಿಂದ ಕೋವಿಡ್ ಪೇಶೆಂಟ್ ಗಳ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ  ಕೋವಿಡ್ ಸಂಬಂಧಿಸಿದಂತೆ ತುರ್ತು ಸಂದರ್ಭದಲ್ಲಿ ಬಳಕೆಗೆ ಬರುವಂತೆ 10 ಲಕ್ಷ ರೂ. ವೆಚ್ಚದಲ್ಲಿ ಸುಮಾರು 700ಕ್ಕೂ ಅಕ  ಪಲ್ಸ್ ಆಕ್ಸಿ ಮೀಟರ್ ಗುಣಮಟ್ಟದ ಉಪಕರಣವನ್ನು  ದೆಹಲಿಯಿಂದ ತರಿಸಲಾಗಿದ್ದು, ಕಾಪು ಕ್ಷೇತ್ರದ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಲಾಗುತ್ತಿದೆ ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಉದಯವಾಣಿಗೆ ತಿಳಿಸಿದರು.

Advertisement

ಇದನ್ನೂ ಓದಿ : ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕ ಸಿಂಪಡಣೆಯ ಪ್ರಾಯೋಗಿಕ ಕಾರ್ಯಾಚರಣೆಗೆ ಚಾಲನೆ

ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆಗೆ ಪ್ರಯತ್ನಿಸಲಾಗುತ್ತಿದ್ದು, ಕಾಪು ಕ್ಷೇತ್ರದಲ್ಲಿನ ಶವಾಗಾರಕ್ಕೆ ಶೀತಲೀಕರಣ ಪೆಟ್ಟಿಗೆಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ದಾನಿಗಳ ನೆರವನ್ನೂ ಪಡೆದು ಆ್ಯಂಬುಲೆನ್ಸ್, ಕೋವಿಡ್ ಮುಂಜಾಗ್ರತಾ ಕ್ರಮವಾದ ಸ್ಯಾನಿಟೈಸರ್, ಪಿಪಿಇ ಕಿಟ್, ಮಾಸ್ಕ್ ಕೂಡಾ ಬಳಸಲಾಗುತ್ತಿದೆ. ಕಾಪು ಕ್ಷೇತ್ರದಾದ್ಯಂತ ಕೋವಿಡ್ ಮುಕ್ತಗೊಳಿಸಿ ಜನರಲ್ಲಿ ನೆಮ್ಮದಿ ಸುರಕ್ಷತೆಯತ್ತ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಜನರ ಸಹಕಾರವೂ ಅವಶ್ಯಕವಾಗಿದೆ . ಉಡುಪಿ ಜಿಲ್ಲೆಯಲ್ಲಿ  ಕೊರೊನಾ ಹತೋಟಿಗೆ ಬರುತ್ತಿದೆ. ಆಕ್ಸಿಜನ್ ಸೆಂಟರ್ ಕೂಡಾ ನಮ್ಮ ಕ್ಷೇತ್ರದಲ್ಲಿದೆ.

ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರ, ಮಣಿಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಕ್ಕೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ,ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ,ಶಿರ್ವ ಸಮುದಾಯ ಆರೋಗ್ಯ ಕೇಂದ್ರ ಸಹಿತ 10 ಆರೋಗ್ಯ ಕೇಂದ್ರಗಳಿಗೆ 700ಕ್ಕೂ ಅಧಿಕ  ಪಲ್ಸ್ ಆಕ್ಸಿ ಮೀಟರ್ ಹಸ್ತಾಂತರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next