Advertisement

ಉಡುಪಿ ಜಿಲ್ಲೆ: 77,740  ಮಕ್ಕಳಿಗೆ ಪಲ್ಸ್‌ ಪೋಲಿಯೋ

01:00 AM Mar 10, 2019 | Harsha Rao |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಾ. 10ರಂದು ನಡೆಯುವ ಪಲ್ಸ್‌ ಪೋಲಿಯೋ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ ಒಟ್ಟು 77,740 (ಗ್ರಾಮೀಣ ಪ್ರದೇಶ 63,630, ನಗರ ಪ್ರದೇಶ 14,110) ಮಕ್ಕಳಿಗೆ ಲಸಿಕೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದ್ದಾರೆ. 

Advertisement

ಜಿಲ್ಲೆಯಲ್ಲಿ  ಕರ್ತವ್ಯ ನಿರ್ವಹಿಸುವ ಒಟ್ಟು ಲಸಿಕಾ ಕೇಂದ್ರಗಳು 657 (ಗ್ರಾಮೀಣ ಪ್ರದೇಶ 569, ನಗರ ಪ್ರದೇಶ 88). ಇದಲ್ಲದೆ 9 ಮೊಬೈಲ್‌ ಟೀಮ್‌ ಮತ್ತು 32 ಟ್ರಾನ್ಸಿಟ್‌ ಬೂತ್‌ಗಳನ್ನು ತೆರೆದು ಪಲ್ಸ್‌ ಪೋಲಿಯೋ ಲಸಿಕೆ ನೀಡಲಾಗುತ್ತದೆ.  ಈ ಕಾರ್ಯಕ್ರಮಕ್ಕೆ ಲಸಿಕಾ ಸ್ವಯಂಸೇವಕರ ಸಂಖ್ಯೆ 2,774 ಮತ್ತು ಮೇಲ್ವಿಚಾರಕರು 137 ಅಲ್ಲದೆ ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬಂದಿಗಳು ಭಾಗವಹಿಸಿ ಯಶಸ್ವಿಯಾಗಿ ನಡೆಸಲು ಸಹಕರಿಸಲಿದ್ದಾರೆ. 

ಆರೋಗ್ಯ, ಪಂಚಾಯತ್‌ರಾಜ್‌, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ ಇಲಾಖೆ ಮತ್ತು ಇತರ ಇಲಾಖೆ, ರೋಟರಿ ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ, ಜಿಲ್ಲಾಡಳಿತದ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮ ನಡೆಯಲಿದೆ.  

ಸಾರ್ವಜನಿಕರು, ವಲಸೆ ಕಾರ್ಮಿಕರು, ಕೊಳಚೆ ನಿವಾಸಿಗಳು ತಮ್ಮ 0-5 ವರ್ಷದೊಳಗಿನ  ಎಲ್ಲ  ಮಕ್ಕಳಿಗೂ ಪಲ್ಸ್‌ ಪೋಲಿಯೋವನ್ನು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿ ಸಹಕರಿಸಬೇಕು. ಉಳಿದವರಿಗೆ ಗ್ರಾಮಾಂತರ ಪ್ರದೇಶದಲ್ಲಿ ಮಾ. 11 ಮತ್ತು 12ರಂದು ಹಾಗೂ ನಗರ ಪ್ರದೇಶದಲ್ಲಿ ಮಾ. 11ರಿಂದ 13ರ ತನಕ ಸ್ವಯಂಸೇವಕರು ಮನೆ ಮನೆ ಭೇಟಿ ನೀಡಿ ಪೋಲಿಯೋ ಹನಿ ಹಾಕಿಸಿದ ಬಗ್ಗೆ ಖಚಿತಪಡಿಸಿಕೊಳ್ಳುತ್ತಾರೆ. ಉದ್ಘಾಟನೆಯು ಮಾ. 10ರ ಬೆಳಗ್ಗೆ 8 ಕ್ಕೆ ಬೀಡಿನಗುಡ್ಡೆಯ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next