ಮುಂಬೈ: ಇತ್ತೀಚಿನ ದಿನಗಳಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಹೆಸರು ಸುದ್ದಿಯಲ್ಲಿರುವಂತೆ ಇದೀಗ ಅವರ ಪೋಷಕರಿಗೂ ಕಂಟಕ ಎದುರಾಗಿದೆ ಅದರಂತೆ ಪೂಜಾ ಖೇಡ್ಕರ್ ಅವರ ತಾಯಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಭೂ ವಿವಾದಕ್ಕೆ ಸಂಬಂಧಿಸಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದಾದ್ಯಂತ ಅಪಾರ ಆಸ್ತಿ ಹೊಂದಿರುವ ಖೇಡ್ಕರ್ ಕುಟುಂಬ ಪುಣೆಯ ಮುಲ್ಶಿ ತಹಸಿಲ್‌ನಲ್ಲಿ 25 ಎಕರೆ ಭೂಮಿಯನ್ನು ಖರೀದಿಸಿತ್ತು. ಈ ನಡುವೆ ಇದರ ಅಕ್ಕಪಕ್ಕದಲ್ಲಿರುವ ರೈತರ ಜಮೀನನ್ನು ಖೇಡ್ಕರ್ ಕುಟುಂಬ ಕಬಳಿಸಲು ಯತ್ನಿಸಿದೆ ಎಂದು ಅಲ್ಲಿನ ರೈತರು ಆರೋಪಿಸಿದ್ದಾರೆ ಈ ವಿವಾದಕ್ಕೆ ಪುಷ್ಟಿ ನೀಡುವಂತೆ ಮನೋರಮಾ ಖೇಡ್ಕರ್ ಕೈಯಲ್ಲಿ ಗನ್ ಹಿಡಿದು ರೈತರಿಗೆ ಧಮ್ಕಿ ಹಾಕುವ ವಿಡಿಯೋ ವೈರಲ್ ಕೂಡ ಆಗಿತ್ತು ಕಳೆದ ವರ್ಷ ನಡೆದಿರುವ ಪ್ರಕರಣ ಇದಾಗಿದ್ದು ಇತ್ತೀಚಿಗೆ ಪೂಜಾ ಖೇಡ್ಕರ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೂಜಾ ಪೋಷಕರ ಭೂ ಕಬಳಿಕೆಯ ವಿಡಿಯೋ ಕೂಡ ವೈರಲ್ ಆಗಿತ್ತು ಅಲ್ಲದೆ ರೈತರು ಮನೋರಮಾ ಖೇಡ್ಕರ್ ವಿರುದ್ಧ ಪುಣೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು ಅದರಂತೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 323, 504, 506, 143, 144, 147, 148 ಮತ್ತು 149 ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಮನೋರಮಾ ಖೇಡ್ಕರ್ ಅವರನ್ನು ರಾಯಗಢ ಜಿಲ್ಲೆಯ ಮಹಾದ್‌ನಿಂದ ಬಂಧಿಸಿ ಪುಣೆಗೆ ಕರೆತರಲಾಗಿದ್ದು, ಪ್ರಾಥಮಿಕ ವಿಚಾರಣೆ ಬಳಿಕ ಬಂಧಿಸಲಾಗುವುದು ಎಂದು ಪುಣೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ದೇಶಮುಖ್ ತಿಳಿಸಿದ್ದಾರೆ.
ಇದನ್ನೂ ಓದಿ: Mangaluru; ತುರ್ತು ಪರಿಸ್ಥಿಯಿಂದ ದ.ಕ. ಜಿಲ್ಲೆಗೆ ಯಾವುದೇ ಕೆಡುಕಾಗಿಲ್ಲ: ಬಿ. ರಮಾನಾಥ ರೈ