Advertisement
ಅಖೀಲ ಭಾರತ ತುಳು ಒಕ್ಕೂಟ, ಪುತ್ತೂರು ತುಳುಕೂಟ ಹಾಗೂ ಶ್ರೀ ರಾಮಕೃಷ್ಣ ಪ್ರೌಢ ಶಾಲಾ ವತಿಯಿಂದ ಶನಿವಾರ ಕೊಂಬೆಟ್ಟು ಬಂಟರ ಭವನದಲ್ಲಿ ತುಳು ಭಾಷೆಯಲ್ಲಿ 10ನೇ ತರಗತಿಯಲ್ಲಿ ಶೇ. 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ಸಾಧಕ ಸಮ್ಮಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ 1.50 ಕೋಟಿ ಮಂದಿ ತುಳು ಭಾಷೆಯನ್ನು ಮಾತನಾಡುತ್ತಿದ್ದಾರೆ. ಎಲ್ಲ ಅರ್ಹತೆಗಳಿದ್ದರೂ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಲು ರಾಜಕೀಯದ ಒತ್ತಡ ಬೇಕಾಗಿದೆ. ಈ ಭಾಗದ ಸಂಸದರು ಮನಸ್ಸು ಮಾಡಿದರೆ ಬಹು ವರ್ಷಗಳ ಕನಸು ನನಸಾಗಬಹುದು ಎಂದರು.
Related Articles
ಮುಖ್ಯ ಅತಿಥಿಯಾಗಿದ್ದ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಎ. ಹೇಮನಾಥ ಶೆಟ್ಟಿ, ತುಳು ಭಾಷಾ ಬೆಳವಣಿಗೆ ಬಲಿಷ್ಠವಾಗಲು ಜನ ಜಾಗೃತಿಯ ಆಂದೋಲನ ನಡೆಯಬೇಕಾ ಗಿದೆ. ತುಳು ಪಠ್ಯ ಕೇವಲ ಪುಸ್ತಕಕ್ಕೆ ಸೀಮಿತವಾಗದೆ ತುಳು ಶಬ್ದ ಸಂಪತ್ತನ್ನು ಬೆಳೆಸುವಂತಿರಬೇಕು. ತುಳು ಪಠ್ಯಕ್ಕೆ ಉತ್ತಮ ಶಿಕ್ಷಕರ ನೇಮಕಾತಿಯತ್ತ ಅಕಾ ಡೆಮಿ ಗಮನ ಹರಿಸಬೇಕಾಗಿದೆ ಎಂದರು.
Advertisement
ಮುಂದಿನ ಬಾರಿ ರಾಮಕೃಷ್ಣ ಪ್ರೌಢಶಾಲೆಯ 10ನೇ ತರಗತಿಯಲ್ಲಿ ತುಳು ಪಠ್ಯದಲ್ಲಿ ಶೇ. 100 ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ತಲಾ 1,000 ರೂ. ನಗದು ಬಹುಮಾನ ನೀಡುವುದಾಗಿ ಅವರು ಘೋಷಣೆ ಮಾಡಿದರು.
ಸಮ್ಮಾನಬರೋಡಾ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಬಿ. ಅವರನ್ನು ಸಮ್ಮಾನಿ ಸಲಾಯಿತು. 10ನೇ ತರಗತಿ ಪರೀಕ್ಷೆಯಲ್ಲಿ ತುಳು ಪಠ್ಯದಲ್ಲಿ ಶೇ. 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ದಿಲ್ಲಿಯ ದಕ್ಷಿಣ ಭಾರತೀಯ ಸಾಂಸ್ಕೃತಿಕ ಸಂಘದ ಸಂಚಾಲಕ ನರೇಂದ್ರ ರೈ ಎಂ.ಬಿ., ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಿರಂಜನ ರೈ ಮಠಂತಬೆಟ್ಟು, ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ರಾಮಕೃಷ್ಣ ಪ್ರೌಢಶಾಲಾ ಮುಖ್ಯಗುರು ರೂಪಕಲಾ, ತುಳು ಅಕಾಡೆಮಿ ಸದಸ್ಯರಾದ ಕಾಂತಿ ಶೆಟ್ಟಿ ಬೆಂಗಳೂರು, ಶೀನಪ್ಪ ಆಳ್ವ, ವಿಜಯಕುಮಾರ್ ಕುಲಶೇಖರ, ತುಳು ಸಂಘಟನೆಯ ಹರಿಣಿ ವಿಜಯ್, ಚಂದ್ರಶೇಖರ ಸುವರ್ಣ ಭಾಗವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಸ್ವಾಗತಿಸಿ, ಅಖೀಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ರೈ ಪ್ರಾಸ್ತಾವಿಸಿದರು. ಪುತ್ತೂರು ತುಳುಕೂಟದ ಅಧ್ಯಕ್ಷ ವಿಜಯಕುಮಾರ್ ಹೆಬ್ಟಾರಬೈಲು ವಂದಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ಮತ್ತು ಶಿಕ್ಷಕಿ ಲತಾ ರೈ ಕಾರ್ಯಕ್ರಮ ನಿರ್ವಹಿಸಿದರು.