Advertisement

ಆ.21ರಿಂದ ಸೆ.2ರ ವರೆಗೆ ಪಿಯುಸಿ ಪೂರಕ ಪರೀಕ್ಷೆ

11:10 PM Jul 28, 2023 | Team Udayavani |

ಬೆಂಗಳೂರು: ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಎರಡು ಪೂರಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆಯು ನಿರ್ಧರಿಸಿದ್ದು, ಪೂರಕ ಪರೀಕ್ಷೆ-2ಕ್ಕೆ ವೇಳಾಪಟ್ಟಿ ಪ್ರಕಟಿಸಲಾಗಿದೆ.

Advertisement

ಆ.21ರಿಂದ ಸೆ.2ರ ವರೆಗೆ ಪೂರಕ ಪರೀಕ್ಷೆ-2 ನಡೆಯಲಿದೆ. ಬಹುತೇಕ ಪರೀಕ್ಷೆಗಳು ಮಧ್ಯಾಹ್ನ 2.15ರಿಂದ 5.30ರ ವರೆಗೆ ಆಯೋಜಿಸಲಾಗಿದೆ. ಆ.10 ನೋಂದಣಿಗೆ ಕೊನೆಯ ದಿನವಾಗಿದೆ. ಆಸಕ್ತರು ತಮ್ಮ ಕಾಲೇಜುಗಳಿಗೆ ತೆರಳಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಶುಲ್ಕವನ್ನು ಗ್ರಾಮ ಒನ್‌, ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಪಾವತಿಸಬಹುದು. 2022-23ರ ಸಾಲು, ಅದರ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾಗಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಂಡು ಪರೀಕ್ಷೆ ಬರೆಯಬಹುದು.

ವೇಳಾಪಟ್ಟಿ
ಆ.21: ಕನ್ನಡ, ಅರೇಬಿಕ್‌
ಆ.22: ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಮೂಲಗಣಿತ
ಆ.23: ಸಮಾಜಶಾಸ್ತ್ರ , ವಿದ್ಯುನ್ಮಾನ ಶಾಸ್ತ್ರ, ಗಣಿತ ವಿಜ್ಞಾನ
ಆ.24: ತರ್ಕಶಾಸ್ತ್ರ, ಹಿಂದೂಸ್ಥಾನಿ ಕನ್ನಡ, ವ್ಯವಹಾರ ಅಧ್ಯಯನ
ಆ.25: ಇತಿಹಾಸ, ಸಂಖ್ಯಾಶಾಸ್ತ್ರ
ಆ.26: ಇಂಗ್ಲೀಷ್‌
ಆ.28: ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ
ಆ.29: ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ
ಆ.30: ರಾಜ್ಯಶಾಸ್ತ್ರ, ಗಣಿತಶಾಸ್ತ್ರ
ಆ.31: ಹಿಂದಿ
ಸೆ.1: ಅರ್ಥಶಾಸ್ತ್ರ, ಜೀವಶಾಸ್ತ್ರ
ಸೆ.2: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌

 

Advertisement

Udayavani is now on Telegram. Click here to join our channel and stay updated with the latest news.

Next