Advertisement
ಹಿರಿಯಡಕ ಸಮೀಪ ಪುತ್ತಿಗೆಯ ನಿವಾಸಿ ಎ. ಉಮರಬ್ಬ ಮತ್ತು ರುಕ್ಸಾನ ದಂಪತಿಯ ಪುತ್ರಿ ರಾಯಿಸ ಚಿಕ್ಕದಿನಿಂದಲೂ ಓದಿನೊಂದಿಗೆ ಕ್ರೀಡೆ, ಚಿತ್ರಕಲೆ, ಹಾಡುಗಾರಿಕೆ, ನೃತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಫಲಿತಾಂಶ ತಿಳಿಯುತ್ತಿದ್ದಂತೆಯೆ ಕಾಲೇಜಿಗೆ ಆಗಮಿಸಿದ ರಾಯಿಸಳ ತಾಯಿ ಮಗಳಿಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ರಾಯಿಸಿ ಯಾವುದೇ ಕೋಚಿಂಗ್ ಪಡೆಯದೆ ನಮ್ಮ ಉಪನ್ಯಾಸಕರ ಪರಿಶ್ರಮದಿಂದ ಹಾಗೂ ಅವಳ ವಿಶೇಷ ಆಸಕ್ತಿಯಿಂದ ರಾಜ್ಯಕ್ಕೆ 3ನೇ ರ್‍ಯಾಂಕ್ ಬಂದಿರುವುದು ಸಂತಸ ತಂದಿದೆ ಎಂದು ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ ಶೆಟ್ಟಿ ಹಾಗೂ ಕಾರ್ಯದರ್ಶಿ ಸಪ್ನಾ ಎನ್. ಶೆಟ್ಟಿ ಉದಯವಾಣಿಗೆ ತಿಳಿಸಿದ್ದಾರೆ. ವೈದ್ಯಕೀಯದಲ್ಲಿ ಆಸಕ್ತಿ
ವೈದ್ಯಕೀಯ ವಿಭಾಗದಲ್ಲಿ ಆಸಕ್ತಿ ಇದ್ದು ನೀಟ್ ಪರೀಕ್ಷೆ ಫಲಿತಾಂಶದ ಬಳಿಕ ಮುಂದಿನ ವ್ಯಾಸಂಗದ ನಿರ್ಧಾರವಾಗಬೇಕಾಗಿದೆ. ನಾನು ಕಲಾ ಕ್ಷೇತ್ರದಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದೇನೆ ಎಂದರು.