Advertisement

ಪಿಯುಸಿ ಫ‌ಲಿತಾಂಶ: ಪ್ರಥಮ್‌, ಶಮಿತಾಗೆ ನಾಲ್ಕನೇ ಸ್ಥಾನ

03:17 AM Apr 16, 2019 | Team Udayavani |

ಮಂಗಳೂರು: ವಿಜ್ಞಾನ ವಿಭಾಗದಲ್ಲಿ ಕೊಡಿಯಾಲ್‌ಬೈಲ್‌ ಶಾರದಾ ಪ.ಪೂ. ಕಾಲೇಜಿನ ಪ್ರಥಮ್‌ ಎನ್‌. ಹಾಗೂ ಶಮಿತಾ ಕುಮಾರಿ ಎಸ್‌. 591 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ.

Advertisement

ಪ್ರಥಮ್‌ ಅವರು ಎಸ್‌. ನಾಗರಾಜ್‌ ಹಾಗೂ ಶಿಕ್ಷಕಿ ವೈಷ್ಣವಿ ದಂಪತಿಯ ಪುತ್ರ. “ರಜಾ ದಿನಗಳಲ್ಲಿ ಕೋಚಿಂಗ್‌ ಪಡೆದುಕೊಳ್ಳುತ್ತಿದ್ದೆ. ಎನ್ನುವ ಪ್ರಥಮ್‌ಗೆ ಮುಂದೆ ಇಸ್ರೋದಲ್ಲಿ ವಿಜ್ಞಾನಿಯಾಗಬೇಕು ಎನ್ನುವುದೇ ಗುರಿಯಂತೆ.

ಶಮಿತಾ ಕುಮಾರಿ ಪಾಂಡೇಶ್ವರದ ಎಸ್‌. ವೆಂಕಟೇಶ್ವರ ಕುಮಾರ್‌ ಹಾಗೂ ಟಿ. ಕಲ್ಪನಾ ದಂಪತಿಯ ಪುತ್ರಿ. ಕಾಲೇಜಿನಲ್ಲೇ ಕೋಚಿಂಗ್‌ ಪಡೆದುಕೊಳ್ಳುತ್ತಿದ್ದ ಶಮಿತಾ, ಓದಿಗೆಂದೇ ಪ್ರತ್ಯೇಕ ವೇಳಾಪಟ್ಟಿ ಸಿದ್ಧಪಡಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next