ಮಂಡ್ಯ: ಪರೀಕ್ಷೆಯನ್ನೇ ಎದುರಿಸದ ದ್ವಿತೀಯಪಿಯುಸಿ ವಿದ್ಯಾರ್ಥಿಗಳ ಪರೀûಾ ಫಲಿತಾಂಶಪ್ರಕಟವಾಗಿದ್ದು, ಕಳೆದ ಬಾರಿ 21ನೇ ಸ್ಥಾನಕ್ಕೆಕುಸಿದಿದ್ದ ಮಂಡ್ಯ ಜಿಲ್ಲೆ ಈ ಬಾರಿ ಪರೀಕ್ಷೆನಡೆಯದಿದ್ದರೂ ಗ್ರೇಡ್ ಅಂಕಗಳ ಆಧಾರದಮೇಲೆ19ನೇ ಸ್ಥಾನ ಪಡೆದಿದೆ.
ನಿರುತ್ಸಾಹ: ಇತಿಹಾಸದಲ್ಲೇ ವಿಶೇಷವಾಗಿ ಈಫಲಿತಾಂಶ ಬಂದಿರುವುದರಿಂದ ವಿದ್ಯಾರ್ಥಿಗಳಲ್ಲೂ ಉತ್ಸಾಹ ಕಂಡು ಬಂದಿಲ್ಲ. ನಗರದಪಿಯು ಕಾಲೇಜುಗಳಲ್ಲಿ ಬೋಧಕರು ಹಾಗೂಬೋಧಕೇತರ ಸಿಬ್ಬಂದಿಗಳೂ ಕೂಡ ಕಚೇರಿಅವಧಿ ಮುಗಿಸಿಕೊಂಡು ತೆರಳಿದರು. ಇತ್ತಎಂದಿನಂತೆ ಫಲಿತಾಂಶ ತಿಳಿಯಲು ಸೈಬರ್‌ಸೆಂಟರ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂವಿರಳವಾಗಿತ್ತು.ಕೊರೊನಾ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿಪರೀಕ್ಷೆ ನಡೆಯದೆ ಎಸ್‌ಎಸ್‌ಎಲ್‌ಸಿ ಹಾಗೂಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಥಿ ಗಳಿಸಿದ್ದಅಂಕಗಳ ಆಧಾರದ ಮೇಲೆ ಶೇ.10 ಅಂಕಗಳನ್ನುದ್ವಿತೀಯ ಪಿಯುಸಿಗೆ ಪರಿಗಣಿಸಿ ಸರ್ಕಾರಫಲಿತಾಂಶ ಪ್ರಕಟಿಸಿದೆ.
15,458 ಮಂದಿ ನೋಂದಣಿ: ಜಿಲ್ಲೆಯಲ್ಲಿಫ್ರೆಶರ್ ಮತ್ತು ರಿಪೀಟರ್ ಸೇರಿ ಒಟ್ಟು 15,458ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಆದರೆ ಕೋವಿಡ್ ಕಾರಣದಿಂದಾಗಿ ಪರೀಕ್ಷೆ ನಡೆಸದೆ ಎಲ್ಲರನ್ನೂ ತೇರ್ಗಡೆಗೆ ಪರಿಗಣಿಸಿರುವುದರಿಂದ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳತ್ತಲೆ ಎಲ್ಲರ ಚಿತ್ತ ಹರಿದಿದೆ.ಜಿಲ್ಲೆಯಲ್ಲಿ 7,161 ಬಾಲಕರು ಹಾಗೂ8,297ಬಾಲಕಿಯರುಪರೀಕ್ಷೆಗೆನೋಂದಾಯಿಸಿಕೊಂಡಿದ್ದರು. ಫ್ರೆಶರ್ನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವಾಣಿಜ್ಯ ಶಾಸ್ತ್ರದವರಾಗಿದ್ದಾರೆ. ಕಲಾವಿಭಾಗದಲ್ಲಿ 3,666, ವಾಣಿಜ್ಯ ವಿಭಾಗದಲ್ಲಿ5,395 ಹಾಗೂ ವಿಜಾnನ ವಿಭಾಗದಲ್ಲಿ 4,538ವಿದ್ಯಾರ್ಥಿಗಳಿದ್ದರು.
ವಿವರ ಲಭಿಸಲು ವಿಳಂಬ:ಕೋವಿಡ್‌ಕಾರ್ಮೋಡದಿಂದಾಗಿ ಈ ಬಾರಿ ಎಲ್ಲ ವಿದ್ಯಾರ್ಥಿಗಳನ್ನೂಅವರ ಹಿಂದಿನ ಶೈಕ್ಷಣಿಕಪ್ರಗತಿಹಾಗೂ ಹಾಜರಾತಿಮುಂತಾದ ವಿದ್ಯಾರ್ಥಿಯ ಸಾಮರ್ಥ್ಯ ಪರಿಗಣಿಸಿ ತೇರ್ಗಡೆಗೊಳಿಸುವುದಾಗಿ ಇಲಾಖೆಯಸಚಿವರೇ ತಿಳಿಸಿದ್ದರಿಂದಾಗಿ ಈ ಫಲಿತಾಂಶದತ್ತಅಂತಹ ದೊಡ್ಡ ನಿರೀಕ್ಷೆಕಂಡುಬಂದಿಲ್ಲ.
ವಿದ್ಯಾರ್ಥಿಗಳ ಅಂಕವಾರು ಶ್ರೇಣಿಗಳನ್ನುವರ್ಗೀಕರಿಸುವುದು ತಡವಾಗಲಿದೆ. ಹಾಗಾಗಿಜಿಲ್ಲೆಯಲ್ಲಿ ಟಾಪರ್ಗಳು, ಡಿಸ್ಟಿಂಕ್ಷನ್‌ನಲ್ಲಿತೇರ್ಗಡೆಯಾದವರ ವಿವರಗಳು ಒಂದು ದಿನತಡವಾಗಿಪೂರ್ಣಪ್ರಮಾಣದ ಮಾಹಿತಿ ಸಿಗಲಿದೆಎಂದು ಮಂಡ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟಸ್ವಾಮಿ ತಿಳಿಸಿದರು.