Advertisement

ಎರಡೂವರೆ ವರ್ಷದ ಮಗುವಿನ ತಾಯಿ ಪಿಯುಸಿಯಲ್ಲಿ ರ್‍ಯಾಂಕ್‌

09:22 PM Aug 01, 2020 | sudhir |

ಅಗರ್ತಾಲ: ತ್ರಿಪುರದ 19 ವರ್ಷದ ಯುವತಿಗೆ 15ನೇ ವಯಸ್ಸಿಗೆ ಮದುವೆಯಾಗಿ ಎರಡೂವರೆ ವರ್ಷದ ಮಗನನ್ನೂ ಹೊಂದಿದ್ದಳು. ಆದರೆ ಶಿಕ್ಷಣ ಮುಂದುವರಿಸುವ ಕನಸನ್ನು ಮಗ ಹುಟ್ಟಿದ ಬಳಿಕವೂ ಬಿಟ್ಟಿರಲಿಲ್ಲ. ಈಕೆ 12ನೇ ತರಗತಿಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 7ನೇ ರ್‍ಯಾಂಕ್‌ ಪಡೆದು ಸಾಧನೆ ಮೆರೆದಿದ್ದಾಳೆ.

Advertisement

ತ್ರಿಪುರ ಪ್ರೌಢ ಶಿಕ್ಷಣ ಮಂಡಳಿ ಶುಕ್ರವಾರ ಬಿಡುಗಡೆ ಮಾಡಿದ ಫ‌ಲಿತಾಂಶಗಳಲ್ಲಿ ಸಂಘಮಿತ್ರಾ ದೇಬ್‌ ಶೇ. 92.6 ಅಂಕಗಳನ್ನು ಗಳಿಸಿ ಎಲ್ಲ ವಿಷಯಕ್ಕೆ ಅನ್ವಯಿಸಿದರೆ ಒಂಬತ್ತನೇ ಸ್ಥಾನ ಮತ್ತು ಕಲಾ ವಿಷಯದಲ್ಲಿ ಏಳನೇ ಸ್ಥಾನವನ್ನು ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.

ಸಂಘಮಿತ್ರಾ ದೇಬ್‌ ಅವರು ಈಶಾನ್ಯ ರಾಜ್ಯದ ಗಾಂಧಿಗ್ರಾಮ್‌ ಪಟ್ಟಣದಲ್ಲಿ ಅಳಿಯಂದಿರೊಂದಿಗೆ ವಾಸಿಸುತ್ತಿದ್ದಾರೆ, ಇದು ರಾಜ್ಯ ರಾಜಧಾನಿ ಅಗರ್ತಾಲ್‌ನಿಂದ 10 ಕಿ.ಮೀ ದೂರದಲ್ಲಿದೆ. ಅವರ ಪತಿ ರಾಜು ಘೋಷ್‌ ಕಾಶ್ಮೀರದಲ್ಲಿ ಬಿಎಸ್‌ಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮನೆಕೆಲಸಗಳನ್ನು ನಿರ್ವಹಿಸಿ, ನನ್ನ ಮಗುವನ್ನು ನೋಡಿಕೊಂಡ ಅನಂತರ ಉಳಿದ ಸಮಯದಲ್ಲಿ ಅಧ್ಯಯನ ಮಾಡಿದ್ದೇನೆ. ನನ್ನ ಅಳಿಯಂದಿರು ಸಹಾಯ ಮಾಡಿದ್ದಾರೆ. ಫ‌ಲಿತಾಂಶಗಳ ಬಗ್ಗೆ ತುಂಬಾ ಸಂತೋಷವಾಗಿದೆ ಎಂದು ರೈತನ ಮಗಳಾಗಿರುವ ಸಂಘಮಿತ್ರಾ ತಿಳಿಸಿದ್ದಾರೆ.

ಇವರು 10ನೇ ತರಗತಿಯಲ್ಲೂ ಶೇ.77 ರಷ್ಟು ಅಂಕಗಳನ್ನು ಗಳಿಸಿದ್ದರು. ಅನಂತರ ಮದುವೆಯಾಗಿದ್ದು ಒಂದು ವರ್ಷದ ಬಳಿಕ ಪಿಯುಸಿ ಸೇರಿದ್ದರು.

Advertisement

ಸಂಘಮಿತ್ರಾ ಅವರು ಶೈಕ್ಷಣಿಕ ಸಾಧನೆ, ಯಶಸ್ಸು ಏನೇ ಇದ್ದರೂ ಬಾಲ್ಯ ವಿವಾಹಗಳ ಬಗೆಗಿನ ಸಮಸ್ಯೆಯನ್ನು ಮರೆಮಾಚುವುದಿಲ್ಲ, ಇದು ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಗಂಭೀರ ಮತ್ತು ದೀರ್ಘ‌ಕಾಲಿಕ ಸಮಸ್ಯೆಯಾಗಿ ಉಳಿದಿದೆ ಎನ್ನುತ್ತಾರೆ.

ಯಂಗ್‌ ಲೈವ್ಸ್‌ ಎಂಬ ಸಂಸ್ಥೆ ತನ್ನ ಅಧ್ಯಯನ ವರದಿಯಲ್ಲಿ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ತ್ರಿಪುರ ರಾಜ್ಯವು ಬಾಲ್ಯ ವಿವಾಹಗಳ ವಿಷಯದಲ್ಲಿ 2ನೇ ಸ್ಥಾನದಲ್ಲಿದೆ. ಇಲ್ಲಿ ನಡೆಯುವ ಎಲ್ಲ ವಿವಾಹಗಳಲ್ಲಿ ಶೇ. 21.6ರಷ್ಟು 15ರಿಂದ 19 ವರ್ಷದೊಳಗಿನವರು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next