ಮೈಸೂರು: ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಪ್ರಮುಖ ಘಟ್ಟವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ಗುರುವಾರದಿಂದ ಆರಂಭಗೊಂಡಿದ್ದು, ಬಿಗಿ ಪೊಲೀಸ್ ಭದ್ರತೆ ನಡುವೆ ಜಿಲ್ಲೆಯ 50 ಪರೀಕ್ಞಾ ಕೇಂದ್ರಗಳಲ್ಲಿ ಮೆದಲ ದಿನ ಯಾವುದೇ ಅಡೆತಡೆಗಳಲ್ಲಿದೆ ಸುಗಮವಾಗಿ ನಡೆಯಿತು.
ಪರೀಕ್ಷೆ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕಳೆದ ವರ್ಷ ಉಂಟಾಗಿದ್ದ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಎಚ್ಚೆತ್ತುಕೊಂಡ ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಾರಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತ್ತು. ಹೀಗಾಗಿ ಅತ್ಯಂತ ಬಿಗಿ ಭದ್ರತೆಯೊಂದಿಗೆ ಪರೀಕ್ಷೆ ನಡೆಯಿತು. ಪರೀಕ್ಞಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಗುರುವಾರ ಜಿಲ್ಲೆಯಲ್ಲಿ 36,891 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ನಗರ ವ್ಯಾಪ್ತಿಯಲ್ಲಿ 26, ತಾಲೂಕು ವ್ಯಾಪ್ತಿಯ 24 ಪರೀಕ್ಞಾ ಕೇಂದ್ರಗಳು ಸೇರಿದಂತೆ ಒಟ್ಟು 50 ಪರೀಕ್ಞಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಇನ್ನೂ ಪರೀಕ್ಞಾ ಅಕ್ರಮವನ್ನು ತಡೆಯುವ ಸಲುವಾಗಿ ಜಿಲ್ಲೆಯ 18 ಪರೀಕ್ಞಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಜತೆಗೆ ಸಾಮೂಹಿಕ ನಕಲು ತಡೆಗೆ ತ್ರಿಕೋನ ಪರೀಕ್ಞಾ ಕೇಂದ್ರ ಪದ್ಧತಿ ಅಳವಡಿಸಿದ್ದು, ಪ್ರಶ್ನೆ ಪತ್ರಿಕೆ ಬಂಡಲ್‌ಗಳಿಗೆ ಬಾರ್ ಕೋಡಿಂಗ್ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷೆ ಮೊದಲ ದಿನ ಜೀವಶಾಸ್ತ್ರ ಮತ್ತು ಇತಿಹಾಸ ವಿಷಯಗಳ ಪರೀಕ್ಷೆ ನಡೆಯಿತು. ಶುಭ ಹಾರೈಕೆ: ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಪ್ರಜಾnವಂತ ನಾಗರಿಕ ವೇದಿಕೆ ವತಿಯಿಂದ ಶುಭ ಹಾರೈಸಲಾಯಿತು.
ನಗರದ ಸದ್ವಿದ್ಯಾ, ಮರಿಮಲ್ಲಪ್ಪ ಹಾಗೂ ಮಹಾರಾಣಿ ಕಾಲೇಜಿಗೆ ತೆರಳಿದ ವೇದಿಕೆ ಸದಸ್ಯರು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪೆನ್ನು, ಗುಲಾಬಿ ಹೂ ನೀಡುವ ಜತೆಗೆ ಆರತಿ ಎತ್ತಿ, ತಿಲಕವನ್ನಿಟ್ಟು ಶುಭಕೋರಿದರು. ಪಾಲಿಕೆ ಸದಸ್ಯ ಪ್ರಶಾಂತ್ ಗೌಡ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮಂಜು, ವಿಕ್ರಮ್, ಜಗದೀಶ್ ಕಡಕೊಳ, ವಿಜಯಕುಮಾರ್, ಅಜಯ್ ಶಾಸಿŒ, ರವಿ, ರಂಗರಾಜು, ಸಂತೋಷ ಇದ್ದರು.