Advertisement

ಇಂದು ಪಿಯುಸಿ ಇಂಗ್ಲಿಷ್‌ ಪರೀಕ್ಷೆ; ವಿವಿಧ ತಾಲೂಕಿನಲ್ಲಿ ಸಿದ್ಧತೆ ಪೂರ್ಣ

11:50 PM Jun 17, 2020 | Sriram |

ಉಡುಪಿ/ ಕುಂದಾಪುರ: ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಜೂ. 18ರಂದು ನಡೆಯಲಿದ್ದು, ಜಿಲ್ಲೆಯಲ್ಲಿ 27 ಪರೀಕ್ಷಾ  ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 13,563 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿ ರುತ್ತಾರೆ. 6,414 ಬಾಲಕರು, 7,149 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳನ್ನು ಕೋವಿಡ್‌ ಸೋಂಕು ಲಕ್ಷಣಗಳನ್ನು ಪರೀಕ್ಷಿಸಿ ಪರೀಕ್ಷಾ ಕೇಂದ್ರದ ಒಳಗೆ ಬಿಡಬೇಕಾಗಿರುವುದರಿಂದ ವಿದ್ಯಾರ್ಥಿಗಳು ಕಡ್ಡಾಯವಾಗಿ ಬೆಳಗ್ಗೆ 9.00 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಇರುವಂತೆ ಸೂಚಿಸಲಾಗಿದೆ.

Advertisement

ಜಿಲ್ಲೆಯಲ್ಲಿ ಒಟ್ಟು 69 ಮಾರ್ಗ ಗಳಲ್ಲಿ 91 ಕೆ.ಎಸ್‌.ಆರ್‌.ಟಿ. ಬಸ್‌ಗಳನ್ನು ಬಳಸಲಾಗುತ್ತಿದೆ. ಈ ಬಸ್‌ಗಳಲ್ಲಿ ಪ್ರತಿ ಮಾರ್ಗದಲ್ಲಿ ಓರ್ವ ಉಪನ್ಯಾಸಕ ಮಾರ್ಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಹಾಗೂ ಪ್ರತಿ ತಾಲೂಕಿನಲ್ಲಿ 04 ಜನ ಪ್ರಾಂಶುಪಾಲರು ನೋಡಲ್‌ ಅಧಿಕಾರಿಗಳಾಗಿ ಬಸ್‌ ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ. ಕುಗ್ರಾಮ ಹಾಗೂ ದೂರದ ಪ್ರದೇಶಗಳಿಂದ ಪರೀಕ್ಷಾ ಕೇಂದ್ರಗಳಿಗೆ ಬರುತ್ತಿರುವ ವಿದ್ಯಾರ್ಥಿ ಗಳಿಗೆ ಬಸ್‌ ಸೌಕರ್ಯ ಸಾಧ್ಯವಾಗದಿದ್ದರೆ ಅಥವಾ ಬಸ್‌ ತಪ್ಪಿದರೆ ಅಂತಹ ವಿದ್ಯಾರ್ಥಿಗಳನ್ನು ಸರಕಾರಿ ವಾಹನದಲ್ಲಿ ಕರೆದುಕೊಂಡು ಬರಲು ಎಲ್ಲ ತಾ|ಗಳಲ್ಲಿ ಸರಕಾರಿ ಕಚೇರಿಯ ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆ.

ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೋದಿಂದ ಪರೀಕ್ಷಾ ಕೇಂದ್ರಗಳಿಗೆ ಬರಲು ವಿದ್ಯಾರ್ಥಿಗಳಿಗೆ 45 ವಿಶೇಷ ಬಸ್‌ಗಳನ್ನು ಉಚಿತವಾಗಿ ವ್ಯವಸ್ಥೆ ಮಾಡ ಲಾಗಿದೆ. ಪ.ಪೂ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಆಯಾಯ ಪ.ಪೂ. ಕಾಲೇಜಿನ ಮುಖಾಂತರ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ್ದು, ಸ್ವಂತ, ಖಾಸಗಿ ವಾಹನದಲ್ಲಿ ಬರುವ ವಿದ್ಯಾರ್ಥಿಗಳು ಹೊರತುಪಡಿಸಿ, ಬಾಕಿ ಅವಶ್ಯವಿರುವ ಉಳಿದ ಎಲ್ಲರಿಗೂ ಬಸ್‌ ವ್ಯವಸ್ಥೆ ಮಾಡಲಾಗಿದೆ.

ಹೊರ ಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆ 163 ಆಗಿದ್ದು, ಉಡುಪಿ ಜಿಲ್ಲೆಯಿಂದ ಹೊರ ಜಿಲ್ಲೆಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ 1344 ಇರುತ್ತದೆ.

ಯಾವೆಲ್ಲ ರೂಟ್‌ಗಳು?
ಕುಂದಾಪುರ – ಬೈಂದೂರು, ಗೋಳಿಹೊಳೆ – ಕುಂದಾಪುರ, ಉಪ್ಪುಂದ – ನಾವುಂದ, ಗೋಳಿಯಂಗಡಿ- ಬಾರ್ಕೂರು, ಭಟ್ಕಳ- ಬೈಂದೂರು, ಕೊಲ್ಲೂರು – ವಂಡ್ಸೆ, ಹೊಸಂಗಡಿ – ಬಿದ್ಕಲ್‌ಕಟ್ಟೆ, ಹಳ್ಳಿಹೊಳೆ – ಬಿದ್ಕಲ್‌ಕಟ್ಟೆ, ಶೇಡಿಮನೆ- ಬಿದ್ಕಲ್‌ಕಟ್ಟೆ, ಬೇಳೂರು – ಕೋಟೇಶ್ವರ, ಕೊಲ್ಲೂರು – ಕುಂದಾಪುರ, ಕುಂದಾಪುರ – ಬ್ರಹ್ಮಾವರ, ಸಿದ್ದಾಪುರ – ಬ್ರಹ್ಮಾವರ, ಕುಂದಾಪುರ- ಉಡುಪಿ, ಗಂಗೊಳ್ಳಿ – ಕುಂದಾಪುರ ಮಾರ್ಗದಲ್ಲಿ ಬಸ್‌ಗಳು ಸಂಚರಿಸಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next