Advertisement
ಪರೀಕ್ಷಾ ಭದ್ರತಾ ದೃಷ್ಟಿಯಿಂದ ಕೊಠಡಿ ಮೇಲ್ವಿಚಾರಕರ ಕೊರತೆ ಕಂಡುಬಂದಲ್ಲಿ, ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ರನ್ನು ನಿಯೋಜಿಸಿಕೊಳ್ಳುವಂತೆ ಪರೀಕ್ಷೆ ಕೇಂದ್ರಗಳ ಅಧೀಕ್ಷಕರಿಗೆ ಆಯಾ ಜಿಲ್ಲೆಗಳ ಪಿಯು ಇಲಾಖೆ ಉಪ ನಿರ್ದೇಶಕರು ಸೂಚನೆ ನೀಡಿದ್ದಾರೆ. ಈಗಾಗಲೇ ಪಿಯುಸಿ ಮೌಲ್ಯ ಮಾಪನ ಕಾರ್ಯದಲ್ಲಿರುವ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಇಲಾಖೆಯ ಮುಂದಿನ ಆದೇಶದವರೆಗೂ ಅದೇ ಕಾರ್ಯದಲ್ಲಿ ಮುಂದುವರಿಯ ಬೇಕು. ಮೌಲ್ಯಮಾಪನ ಕಾರ್ಯದಲ್ಲಿರುವ ಸಿಬಂದಿ ವರ್ಗ ಪರೀಕ್ಷಾ ಸಿದ್ಧತೆಯ ಬಗ್ಗೆಯೂ ಗಮನ ಹರಿಸಬೇಕು ಎಂದು ನಿರ್ದೇಶಿಸಿದೆ.
ಮೌಲ್ಯಮಾಪನವನ್ನು ಜಿಲ್ಲಾ ಕೇಂದ್ರಗಳಿಗೆ ವಿಕೇಂದ್ರೀಕರಣ ಮಾಡದ ಹೊರತು ವಿಜ್ಞಾನ ಮೌಲ್ಯ ಮಾಪನ ಮಾಡುವುದಿಲ್ಲ ಎಂದು ಪಿಯು ಉಪನ್ಯಾಸಕರ ಸಂಘವು ತನ್ನ ನಿಲುವು ಬದಲಿಸದ ಹಿನ್ನೆಲೆಯಲ್ಲಿ ಶುಕ್ರವಾರ ಆರಂಭವಾದ ಮೌಲ್ಯ ಮಾಪನಕ್ಕೆ ಕೇಲವೇ ಕೆಲವು ಮೌಲ್ಯ ಮಾಪಕರು ಹಾಜರಾಗಿದ್ದಾರೆ ಎಂದು ಮೂಲಗಳು ತಿಳಿಸಿದೆ. ರಾಜ್ಯದ ಎಂಟು ಜಿಲ್ಲೆಗಳ 34 ಕೇಂದ್ರಗಳಲ್ಲಿ ನಡೆಯುತ್ತಿರುವ ಕಲಾ ಮತ್ತು ವಾಣಿಜ್ಯ ವಿಷಯಗಳ ಮೌಲ್ಯಮಾಪನ ಬಹುತೇಕ ಮುಗಿ ಯುವ ಹಂತಕ್ಕೆ ಬಂದಿದೆ. ಆದರೆ, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೌತ ಶಾಸ್ತ್ರ ಮತ್ತು ಗಣಿತ ವಿಷಯಗಳ ಮೌಲ್ಯಮಾಪನವನ್ನು ಬೆಂಗಳೂರಿನ ಎಂಟು ಕೇಂದ್ರಗಳಲ್ಲಿ ಮಾತ್ರ ಮಾಡಲಾಗುತ್ತಿದೆ. ರಾಜ್ಯದ ವಿವಿಧೆಡೆ ಯಿಂದ ಬೆಂಗಳೂರಿಗೆ ಬಂದು ಮೌಲ್ಯಮಾಪನಕ್ಕೆ ಹಾಜರಾಗಲು ಕಷ್ಟವಾಗಲಿದೆ. ವಿಕೇಂದ್ರೀಕರಣ ಗೊಳಿಸಬೇಕು ಎಂದು ಪಿಯು ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಾಚಾರ್ಯರ ಸಂಘ ಕೋರಿತ್ತು. ಆದರೂ, ಇಲಾಖೆ ಮನ್ನಣೆ ನೀಡದೆ ಇರುವುದರಿಂದ ಬಹಿಷ್ಕಾರದ ಎಚ್ಚರಿಕೆಯನ್ನು ಸಂಘ ನೀಡಿತ್ತು.
Related Articles
ಬೆಂಗಳೂರಿನ ವಿವಿಧ ಎಂಟು ಮೌಲ್ಯಮಾಪನ ಕೇಂದ್ರಗಳಲ್ಲಿ ಶುಕ್ರವಾರ ಆರಂಭವಾದ ದ್ವಿತೀಯ ಪಿಯು ವಿಜ್ಞಾನ ವಿಷಯಗಳ ಮೌಲ್ಯ ಮಾಪನಕ್ಕೆ ಕೇವಲ ಬೆರಳೆಣಿಕೆ ಸಂಖ್ಯೆಯಲ್ಲಿ ಮೌಲ್ಯ ಮಾಪಕರು ಹಾಜರಾಗಿದ್ದರು.
Advertisement