Advertisement
ಡಿ.13ರಿಂದ 24ರ ವರೆಗೆ ಪರೀಕ್ಷೆ ನಡೆಯಲಿದೆ ಹಾಗೂ ಕಾಲೇಜು ಹಂತದಲ್ಲಿಯೇ ಮೌಲ್ಯಮಾಪನ ಮಾಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
Related Articles
ಡಿ.13ರಿಂದ 24ರ ವರೆಗೆ ಪರೀಕ್ಷೆ ನಡೆಸಿ ಕಾಲೇಜು ಹಂತದಲ್ಲಿಯೇ ಮೌಲ್ಯಮಾಪನ ಮಾಡಿಸಬೇಕು. ಡಿ.31ರೊಳಗೆ ವಿದ್ಯಾರ್ಥಿಗಳ ಅಂಕಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಪರೀಕ್ಷೆಗೆ ಸಂಬಂಧಿಸಿ ಇಲಾಖೆ ನಿಗದಿಪಡಿಸಿದ ಎಲ್ಲ ಪಠ್ಯಕ್ರಮಗಳನ್ನು ಪೂರ್ಣಗೊಳಿಸಬೇಕು ಹಾಗೂ ಪೂರ್ಣಗೊಂಡ ಬಗ್ಗೆ ಪ್ರಾಂಶುಪಾಲರು ಇಲಾಖೆಗೆ ವರದಿ ನೀಡಬೇಕು.
Advertisement
ವಿಜ್ಞಾನ ವಿಭಾಗದ ಕಾಲೇಜುಗಳ ಪ್ರಾಚಾರ್ಯರು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕಾಲೇಜಿನ ಅವಧಿ ಬಳಿಕ ಹೆಚ್ಚುವರಿಯಾಗಿ ಒಂದು ಗಂಟೆ ಬೋಧನೆ ಮಾಡಲು ತಿಳಿಸಲಾಗಿದೆ.
ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದೈನಂದಿನ ಹಾಜರಾತಿಯನ್ನು ಕಡ್ಡಾಯವಾಗಿ ಬೆಳಗ್ಗೆ 12 ಗಂಟೆಯೊಳಗೆ ಸ್ಯಾಟ್ಸ್‌ನಲ್ಲಿ ನಮೂದಿಸಬೇಕು. ವಿದ್ಯಾರ್ಥಿಗಳಿಗೆ ನಡೆಸುವ ಘಟಕ ಪರೀಕ್ಷೆಗಳ ಹಾಗೂ ಅಸೈನ್‌ಮೆಂಟ್‌ಗಳ ಅಂಕಗಳನ್ನೂ ಸ್ಯಾಟ್ಸ್‌ನಲ್ಲಿ ನಮೂದಿಸಬೇಕು. ಪ್ರಾಂಶುಪಾಲರು ಇನ್ನು ಮುಂದೆ ಕಡ್ಡಾಯವಾಗಿ ಇ- ಆಫೀಸಿನಲ್ಲಿಯೇ ಕರ್ತವ್ಯಗಳನ್ನು ನಿರ್ವಹಿಸಬೇಕು.
20 ಗಂಟೆಗಿಂತ ಕಡಿಮೆ ಕಾರ್ಯಭಾರ ಹೊಂದಿರುವ ಉಪನ್ಯಾಸಕರನ್ನು ಮತ್ತೂಂದು ಕಾಲೇಜಿಗೆ ಮೂರು ದಿನಗಳಂತೆ ನಿಯೋಜನೆ ಮಾಡಲು ಪ್ರಾಂಶುಪಾಲರು ಗಮನ ಹರಿಸಬೇಕು.
ಕೊರೊನಾ ಸಮಯದಲ್ಲಿ ಹಾಳಾಗಿರುವ ಸಮಯವನ್ನು ಸರಿಹೊಂದಿಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಮತ್ತು ಶಿಕ್ಷಕರು ಎರಡೆರಡು ಬಾರಿ ಪರೀಕ್ಷೆಗೆ ಸಿದ್ಧತೆ ನಡೆಸುವುದನ್ನು ತಾಪತ್ರಯ ತಪ್ಪಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮ ಸ್ವಾಗತಾರ್ಹವಾಗಿದೆ.– ಎ.ಎಚ್. ನಿಂಗೇಗೌಡ, ಅಧ್ಯಕ್ಷರು, ಉಪನ್ಯಾಸಕರ ಸಂಘ