Advertisement

ಒಲ್ವಿಟಾಗೆ ರ್‍ಯಾಂಕ್‌ ನಿರೀಕ್ಷೆಯೇ ಇರಲಿಲ್ಲ  !

04:07 AM Apr 16, 2019 | Sriram |

ಮೂಡುಬಿದಿರೆ: ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಆಳ್ವಾಸ್‌ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ, ಕಿನ್ನಿಗೋಳಿ ಮೂಲದ ಒಲ್ವಿಟಾ ಆನ್ಸಿಲ್ಲಾ ಡಿ’ಸೋಜಾ 600ರಲ್ಲಿ 596 ಅಂಕ ಗಳಿಸಿದ್ದಾರೆ. ಬಿಸಿನೆಸ್‌ ಸ್ಟಡೀಸ್‌, ಅಕೌಂಟೆನ್ಸಿ, ಬೇಸಿಕ್‌ ಮ್ಯಾಥ್ಸ್, ಸ್ಟಾಟಿಸ್ಟಿಕ್ಸ್‌ಗಳಲ್ಲಿ ತಲಾ 100 ಹಾಗೂ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ತಲಾ 98 ಅಂಕಗಳು ಲಭಿಸಿವೆ.

Advertisement

ಪ್ರಥಮ ರ್‍ಯಾಂಕ್‌ ಬಂದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಒಲ್ವಿಟಾ, “ರ್‍ಯಾಂಕ್‌ ನಿರೀಕ್ಷೆ ಇರಲಿಲ್ಲ. ಕೈಬರೆಹ ಅಷ್ಟು ಅಂಕ ತೆಗೆಯುವಷ್ಟು ಚೆನ್ನಾಗಿಲ್ಲ. ಹಾಗಾಗಿ ಬಿಸಿನೆಸ್‌ ಸ್ಟಡೀಸ್‌ ಮತ್ತು ಇಂಗ್ಲಿಷ್‌ನಲ್ಲಿ ಸ್ವಲ್ಪ ಸಂಶಯ ಇತ್ತು. ಆದರೆ ಉಳಿದ ಪ್ರಾಕ್ಟಿಕಲ್ಸ್‌ ಗಳಲ್ಲಿ ಪೂರ್ಣ ಅಂಕ ಸಿಗುವ ವಿಶ್ವಾಸ ಇತ್ತು’ಎಂದು ಹೇಳಿದರು.

ಸಿಎ ಗುರಿ
ಸದ್ಯ ಆಳ್ವಾಸ್‌ನಲ್ಲಿ ಸಿಪಿಟಿ ತರಬೇತಿ ಯಲ್ಲಿ ಪಾಲ್ಗೊಳ್ಳುತ್ತಿರುವ ಒಲ್ವಿಟಾ ಮುಂದೆ ಸಿಎ ಪ್ಲಸ್‌ ಬಿಕಾಂ ಇಂಟೆಗ್ರೇಟೆಡ್‌ ಕೋರ್ಸು ಮಾಡುವ ಗುರಿ ಹೊಂದಿದ್ದಾರೆ.

“ಆಳ್ವಾಸ್‌ನಲ್ಲಿ ಶಿಕ್ಷಣ ಬಹಳ ಚೆನ್ನಾಗಿದೆ. ಕಿನ್ನಿಗೋಳಿಯ ಮೇರಿವೆಲ್‌ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ (ಆಂಗ್ಲಮಾಧ್ಯಮ)ಯಲ್ಲಿ ಶೇ. 98.56 ಅಂಕ ಗಳಿಸಿದ್ದ ನನಗೆ ಉಚಿತ ಶಿಕ್ಷಣದ ಅವಕಾಶ ಕೊಟ್ಟು ಮಾರ್ಗದರ್ಶನ ನೀಡಿದ ಡಾ| ಮೋಹನ ಆಳ್ವರ ಬೆಂಬಲ ಮರೆಯಲಾರೆ ಎಂದರು.

ಕಾಮರ್ ನನ್ನದೇ ಆಯ್ಕೆ
ಒಲ್ವಿಟಾ ಆನ್ಸಿಲ್ಲಾ ಡಿ’ಸೋಜಾ ಅವರ ತಂದೆ ಕಿನ್ನಿಗೋಳಿ ತುಡಾಂ ರೋಡ್‌ನ‌ ಒಲಿವರ್‌ ಡಿ’ಸೋಜಾ, ತಾಯಿ ಅನಿತಾ ಡಿ’ಸೋಜಾ. “ಕಾಮರ್ ತನ್ನ ಸ್ವಂತ ಆಯ್ಕೆ. ಯಾರದೇ ಒತ್ತಾಯ, ಹೇರಿಕೆಯಲ್ಲ. ನಾರ್ಮಲ್‌ ಆಗಿ 6 ಗಂಟೆ ನಿದ್ರೆ ಮಾಡುವುದನ್ನು ಎಂದೂ ತಪ್ಪಿಸಿಲ್ಲ. ಪರೀಕ್ಷೆ ಹೊತ್ತಲ್ಲಿ ಸ್ವಲ್ಪ ಬೇಗನೇ ಎದ್ದು ಓದುತ್ತಿದ್ದೆ. ಆಳ್ವಾಸ್‌ನಲ್ಲಿ ವಿಶೇಷ ತರಬೇತಿ ಏನೂ ತೆಗೆದುಕೊಂಡಿಲ್ಲ’ ಎಂದು ಒಲ್ವಿಟಾ ತಿಳಿಸಿದರು.ಒಲ್ವಿಟಾ ಕೀಬೋರ್ಡ್‌, ಗಿಟಾರ್‌ ನುಡಿಸಬಲ್ಲರು. ಚಿತ್ರಕಲೆ, ಗಾಯನ ಅವರ ಹವ್ಯಾಸಗಳ ಪಟ್ಟಿಯಲ್ಲಿವೆ.

Advertisement

ಮಗಳ ಪರಿಶ್ರಮಕ್ಕೆ ಸಿಕ್ಕಿದ ಪ್ರತಿಫಲ ಇದು. ಆಕೆಗೆ ದೇವರ ಅನುಗ್ರಹ, ಆಶೀರ್ವಾದವಿದೆ –
-ಒಲಿವರ್‌ ಡಿ’ಸೋಜಾ, ತಂದೆ

ಹೈಸ್ಕೂಲ್‌ನಲ್ಲಿ ನಾನೂ ಅವಳಿಗೆ ಕಲಿಸಿದ್ದೇನೆ. ಮುಂದೆ ಎಲ್ಲವೂ ಆಕೆಯ ಪರಿಶ್ರಮ ದಿಂದಾಗಿದೆ. ನಾವು ಬೆಂಬಲ ನೀಡಿದ್ದೇವೆ. ರ್‍ಯಾಂಕ್‌ ಬರುವ ಅಂದಾಜು ಇರಲಿಲ್ಲ, ಒಟ್ಟಿನಲ್ಲಿ ನಮಗೆ ಸಂತೋಷವಾಗಿದೆ.
– ಅನಿತಾ, ತಾಯಿ

Advertisement

Udayavani is now on Telegram. Click here to join our channel and stay updated with the latest news.

Next