Advertisement
ವಾಣಿಜ್ಯ ವಿಭಾಗದಲ್ಲಿ ಒಲ್ವಿಟಾ ಅನ್ಸಿಲಾ ಡಿ’ಸೋಜಾ 596 ಅಂಕ (ಶೇ. 99.33) ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಮೊದಲಿಗರಾಗಿದ್ದಾರೆ. ಮೂರೂ ವಿಭಾಗಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 2,184 ಮಂದಿ ಸಹಿತ ಒಟ್ಟು 2,557 ಮಂದಿ ಪ್ರಥಮ, 157 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾಣ ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ಕ್ರೀಡಾ ದತ್ತು ಸ್ವೀಕಾರದಲ್ಲಿ 97 ಮಂದಿ ಕ್ರೀಡಾಳುಗಳ ಪೈಕಿ 96 ಮಂದಿ ಪಾಸಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಪ್ರೊಣ ರಮೇಶ್ ಶೆಟ್ಟಿ, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್, ಸದಾಕತ್ತ್, ಅಶ್ವಥ್, ವೆಂಕಟೇಶ್ ನಾಯಕ್, ಗಣನಾಥ್, ವೇಣುಗೋಪಾಲ ಶೆಟ್ಟಿ, ಪಿಆರ್‌ಒ ಡಾಣ ಪದ್ಮನಾಭ ಶೆಣೈ ಉಪಸ್ಥಿತರಿದ್ದರು.
ಅಂಧ ವಿದ್ಯಾರ್ಥಿ ಸಾಧನೆಸಂಪೂರ್ಣ ಅಂಧ ವಿದ್ಯಾರ್ಥಿ ಕಲಾ ವಿಭಾಗದ ನಾಗರಾಜ ಸುತಾರ್ 548 (ಶೇ. 91.33) ಅಂಕ ಗಳಿಸಿದ್ದಾರೆ. ಅವರಿಗೆ ಇಂಗ್ಲಿಷ್‌ನಲ್ಲಿ 94, ಹಿಂದಿ 95, ಇತಿಹಾಸ 93, ಅರ್ಥಶಾಸ್ತ್ರ 82, ಸಮಾಜಶಾಸ್ತ್ರ 91, ರಾಜ್ಯಶಾಸ್ತ್ರದಲ್ಲಿ 93 ಅಂಕಗಳು ಲಭಿಸಿವೆ.