ಬೆಂಗಳೂರು: ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಪ್ರವೇಶಕ್ಕಾಗಿ ನಡೆಸುವ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಮೇ 27ರಂದು ದೇಶದ 155 ನಗರಗಳಲ್ಲಿ ಒಟ್ಟಾರೆ 1.65 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 15,566 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ದೇಶದ 23 ಐಐಟಿಗಳಲ್ಲಿರುವ 11,279 ಸೀಟುಗಳಿಗೆ ಪ್ರವೇಶ ಪಡೆಯಲಿದ್ದಾರೆ. ಜೂ.19ರಿಂದ ಅಭ್ಯರ್ಥಿಗಳ ಕೌನ್ಸೆಲಿಂಗ್ ನಡೆಯಲಿದೆ.
ಜೆಇಇ ಮೇನ್ಸ್‌ನಲ್ಲಿ 721ನೇ ರ್‍ಯಾಂಕ್ ಪಡೆದಿದ್ದ ವಸ್ತಲ್ ಸಿಂಘಾಲ್ 429ನೇ ರ್‍ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾನೆ. ಸಿಇಟಿ ರ್‍ಯಾಂಕ್ ಪಡೆದಿದ್ದ ಜೆಫಿನ್ ಬಿಜು 476 ರ್‍ಯಾಂಕ್ ಪಡೆದಿದ್ದಾರೆ. ಜೆಇಇ 2ನೇ ರ್‍ಯಾಂಕ್, ಸಿಇಟಿನಲ್ಲಿ 9ನೇ ರ್‍ಯಾಂಕ್ ಪಡೆದಿದ್ದ ಕೆವಿನ್ ಮಾರ್ಟಿನ್ 496 ರ್‍ಯಾಂಕ್ ಪಡೆದಿದ್ದು, 500ರೊಳಗೆ ರ್‍ಯಾಂಕ್ ಪಡೆದಿರುವ ಪ್ರಮುಖರಾಗಿದ್ದಾರೆ.
ಕಠಿಣ ಪರಿಶ್ರಮದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಗುರುಗಳು ಹಾಗೂ ಪೋಷಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ.
-ವಸ್ತಲ್ ಸಿಂಘಾಲ್, 429ನೇ ರ್‍ಯಾಂಕ್