Advertisement

ಸಾರ್ವಜನಿಕ ಶೌಚಾಲಯ: ಸಮಗ್ರ ಸಮೀಕ್ಷೆ ನಡೆಸಿ

12:38 PM Dec 01, 2020 | Suhan S |

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಹಾಗೂಅಸಮರ್ಪಕ ನಿರ್ವಹಣೆ ಕುರಿತು ಸಮಗ್ರ ಸಮೀಕ್ಷೆ ನಡೆಸಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಈ ಕುರಿತುಬೆಂಗಳೂರಿನಲೆಟ್‌ ಕಿಡ್ಜ್ಫೌಂಡೇಷನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸೋಮವಾರ ಈ ನಿರ್ದೇಶನ ನೀಡಿದೆ. ಕಳೆದ ವಿಚಾರಣೆ ವೇಳೆ, ಬೆಂಗಳೂರು ನಗರದಲ್ಲಿ ಎಷ್ಟು ಸಾರ್ವಜನಿಕ ಶೌಚಾಲಯಗಳಿವೆ.

ಮಹಿಳೆಯರಿಗೆ ಎಷ್ಟು ಶೌಚಾಲಯಗಳಿವೆ. ಅವುಗಳ ಸ್ಥಿತಿಗತಿ ವಿವರವನ್ನು ನ್ಯಾಯಪೀಠಕೇಳಿತ್ತು. ಕರ್ನಾಟಕ ಮುನ್ಸಿಪಲ್‌ ಕಾಯ್ದೆಯ 248 ಮತ್ತು 249ರ ಅನ್ವಯ 20ಕ್ಕೂ ಅಧಿಕ ಕಾರ್ಮಿಕರು, ಕೂಲಿಕಾರರು ಇರುವ ಜಾಗ, ಸಿನಿಮಾ ಮಂದಿರ,ರೈಲು, ಬಸ್‌ ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿನ ಶೌಚಾಲಯಗಳನ್ನೂ ಒದಗಿಸಬೇಕಾಗಿದ್ದು ಬಿಬಿಎಂಪಿ ಕರ್ತವ್ಯ ಎಂದು ಆದೇಶಿಸಿತ್ತು.

ಅರ್ಜಿದಾರರ ಪರ ವಕೀಲರು, ಸ್ವಚ್ಛಭಾರತ್‌ ಮಿಷನ್‌ ಮಾರ್ಗಸೂಚಿಯಡಿ ಪ್ರತಿ 100 ಪುರುಷರು ವಾಸಿಸುವ ಕಡೆ ಒಂದು ಶೌಚಾಲಯವಿರಬೇಕು, 100ರಿಂದ 200 ಮಹಿಳೆಯರಿದ್ದರೆ 2 ಶೌಚಾಲಯವಿರಬೇಕು ಎಂದು ಹೇಳಲಾಗಿದೆ. ಆದರೆ ಬೆಂಗಳೂರು ನಗರದಲ್ಲಿ 473 ಸಾರ್ವಜನಿಕ ಶೌಚಾಲಯ ಸಂಕೀರ್ಣಗಳಲ್ಲಿ 2,838 ಶೌಚಾಲಯಗಳಿವೆ. ಸ್ವಚ್ಛ ಭಾರತ್‌ ಮಿಷನ್‌ ನಿಯಮದಂತೆ ಶೇ.50 ಶೌಚಾಲಯ ಲಭ್ಯವಿಲ್ಲ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ವಲಸೆ ಕಾರ್ಮಿಕರು, ಕೂಲಿಕಾರರು ಮತ್ತು ಇತರೆ ಜನರಿಗೆ ವಿಶೇಷವಾಗಿ ಮಹಿಳೆಯರಿಗೆ ಅಗತ್ಯ ಶೌಚಾಲಯ ಇಲ್ಲ, ಜತೆಗೆ ಪುರುಷರು ಮತ್ತು ಬಡವರು ಶೌಚಾಲಯಗಳನ್ನು ಬಳಕೆ ಮಾಡಲು ಹಣ ನೀಡಬೇಕಾಗಿದೆ. ಹೀಗಾಗಿ ಹೆಚ್ಚಿನ ಜನ ಬಯಲಿನಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next