Advertisement

ಸ್ಟೀಲಿನ ಲೋಟಾ ನುಂಗಿ ಪರದಾಡಿದ ಕರು : ಪ್ರಾಣ ಉಳಿಸಿದ ಸಾರ್ವಜನಿಕರು

08:02 PM Jul 24, 2021 | Team Udayavani |

ಗುಳೇದಗುಡ್ಡ: ಮನೆಯ ಮುಂದೆ ಮುಸರಿ ನೀರು ಕುಡಿಯಲು ಬಂದ ಹೋರಿ ಕರ ಮುಸರಿನಲ್ಲಿ ಬಿದ್ದಿದ್ದ ಸ್ಟೀಲಿನ ಲೋಟಾ ನುಂಗಿ ಸಾಕಷ್ಟು ಪರದಾಡಿ ಪ್ರಾಣಾಪಾಯದಿಂದ ಪಾರಾದ ಘಟನೆ ಪಟ್ಟಣದಲ್ಲಿ ನಡೆದಿದೆ.

Advertisement

ಪಟ್ಟಣದ ರಜಂಗಳ ಓಣಿಯಲ್ಲಿ ಕರವೊಂದು ಮುಸರಿ ನೀರು ಕುಡಿಯುತ್ತಿದ್ದಾಗ ಸಣ್ಣ ಸ್ಟೀಲಿನ ಗ್ಲಾಸ್‌ನ್ನು ಕೂಡಾ ನುಂಗಿ ಸಾಕಷ್ಟು ನೋವುಅನುಭವಿಸಿತು. ಸ್ವಲ್ಪ ಸಮಯದ ಬಳಿಕ ಕರುವಿನ ಬಾಯಿಯಿಂದ ರಕ್ತ ಸ್ರಾವ ಉಂಟಾಗುತ್ತಿದ್ದನ್ನು ಗಮನಿಸಿದ ಅಲ್ಲಿನ ಕೆಲವು ಯುವಕರು ಹೋರಿ ಕರವನ್ನು ತಡೆದು ನೋಡಿದರು.

ಸತೀಶ ಭೋವಿ ಎಂಬಾತ ಸಾಕಷ್ಟು ಪ್ರಯಾಸಪಟ್ಟು ಕರದ ಬಾಯಿ ಅಗಲ ಮಾಡಿ ಗಂಟಲಲ್ಲಿ ಕೈ ಹಾಕಿ ಗ್ಲಾಸ್‌ ತೆಗೆದರು. ಹೊರ ಕರುವಿನ ಪ್ರಾಣ ಉಳಿಸಿ ಮಾನವೀಯತೆ ಮೆರೆದರು.

ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಕರುವನ್ನು ರಜಂಗಳ ಪೇಟೆಯ ಯುವಕರು ಆ ಹೋರಿ ಕರವನ್ನು ಹಗ್ಗದಿಂದ ಕಟ್ಟಿಹಾಕಿದರು. ನಂತರ ಸ್ಟೀಲ್‌ ಗ್ಲಾಸ್‌ ತೆಗೆದು ಕರುವಿನ ಪ್ರಾಣ ಉಳಿಸಿದರು. ರಜಂಗಳ ಪೇಟೆಯ ಸತೀಶ ಭೋವಿ, ಈರಣ್ಣ ದೊಡಮನಿ, ಚಂದ್ರಶೇಖರ ದೊಡಮನಿ, ಪುಂಡಲಿಕ ಕಂಠಿ, ದಿಲೀಪ ಸೇರಿದಂತೆ ಇನ್ನೂ ಹಲವು ಯುವಕರ ಕಾರ್ಯಕ್ಕೆ ಮೆಚ್ಚುಗೆಗೆ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next