ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡನೆ ಮಾಡಿರುವ ರಾಜ್ಯ ಬಜೆಟ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಜನರು ಏನೆಲ್ಲಾ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎನ್ನುವುದರ ವಿವರ ಇಲ್ಲಿದೆ.
ದೆಹಲಿಯ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲಿ 438 ನಮ್ಮ ಕ್ಲಿನಿಕ್ ಗಳನ್ನೂ ತೆರೆಯಲಾಗುವುದು. ಗ್ರೇಟ್ ಇದು ದೊಡ್ಡ ಕೆಲಸ. ಅತ್ತುತ್ಯಮ ನಿರ್ಧಾರ. ಜನರ ಸಾಕಷ್ಟು ದುಡ್ಡು ಉಳಿಯುತ್ತದೆ, ಆರೋಗ್ಯ ಉತ್ತಮವಾಗುತ್ತದೆ ಎಂದು ಸ್ವಲ್ಪ ತಿಳದುಕೊಳ್ಳಿ ಎಂಬ ಖಾತೆಯಿಂದ ಕೂ ಮಾಡಲಾಗಿದೆ.
ಇದನ್ನೂ ಓದಿ:ಬೊಮ್ಮಾಯಿ ಬಜೆಟ್ ನಲ್ಲಿ ಕರಾವಳಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?: ಇಲ್ಲಿದೆ ಸಂಪೂರ್ಣ ಮಾಹಿತಿ
ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ, ಕಟ್ಟಡ ಕಾರ್ಮಿಕರಿಗೆ ಸಂಚರಿಸಲು ಉಚಿತ ಬಸ್ ಪಾಸ್ ಘೋಷಣೆ. ಹೊಸ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಲಾಗಿರುವುದು ಉತ್ತಮ ಬೆಳವಣಿಗೆ ಎಂದು ಶ್ರೀಕರ ಎಂಬವರು ಕೂ ಮಾಡಿದ್ದಾರೆ.
ಬೆಲೆ-ಏರಿಕೆ ಮಾಡೋದು
ಆಡಳಿತ ಪಕ್ಷದ ಅಧಿಕಾರ,
ಬೆಲೆ-ಏರಿಕೆ ಖಂಡಿಸೋದು
ವಿರೋಧ ಪಕ್ಷದ ವಿಚಾರ,
ಬೆಲೆ-ತೆರೋದು ಮಾತ್ರ
ಜನಸಾಮಾನ್ಯರ ಗ್ರಹಚಾರ.
ಎಂದು ಪ್ರೇಮ್ ಪೂಜಾರಿ ಎಂಬವರು ರಾಜ್ಯ ಬಜೆಟ್ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:Karnataka Budget 2022: ಸಿಎಂ ಚೊಚ್ಚಲ ಬಜೆಟ್ ನಲ್ಲೇ ತವರು ಜಿಲ್ಲೆಗೆ ಬಂಪರ್ ಕೊಡುಗೆ ಘೋಷಣೆ
ಮೀನುಗಾರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಪ್ರಸಕ್ತ ಸಾಲಿನಲ್ಲಿ 5 ಸಾವಿರ ವಸತಿ ರಹಿತ ಮೀನುಗಾರರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಆದ್ಯತೆ ಮೇರೆಗೆ ಮನೆಗಳನ್ನು ನಿರ್ಮಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ ಎಂದು ಹಂಸ ಬರೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರದ ನೆರವಿನೊಂದಿಗೆ ಹುಬ್ಬಳ್ಳಿ ಮತ್ತು ದಾವಣಗೆರೆಯ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳ ಹಾಸಿಗೆಗಳ ಸಾಮರ್ಥ್ಯ 100ಕ್ಕೆ ಹೆಚ್ಚಳ; 19 ಹೊಸ ಚಿಕಿತ್ಸಾಲಯಗಳ ಪ್ರಾರಂಭ. ಕಟ್ಟಡ ಕಾರ್ಮಿಕರ ರಿಯಾಯಿತಿ ಬಸ್ ಪಾಸ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗಿದೆ ಎಂದು ಗೌತಮಿ ಕಾಜವ ಎಂಬವರು ಕೂ ಮಾಡಿದ್ದಾರೆ.