Advertisement
ಅನೇಕ ಬಾರಿ ಮನವಿ ಮಾಡಿದರು ಸಮಸ್ಯೆ ಬಗೆಹರಿಸದ ಕಾರಣ ಶಾಸಕರ ವಿರುದ್ಧ ಅ.11ರಂದು ತೊರೆಪಾಳ್ಯಗ್ರಾಮದ ಜನರು ವಿನೂತನ ಪ್ರತಿಭಟನೆ ಮಾಡಿ ಶಾಸಕರೇ ನಮ್ಮ ಗ್ರಾಮಕ್ಕೆ ರಸ್ತೆ ಮಾಡಿಸಿಕೊಡಿ ನಿಮ್ಮ ಪಾದಪೂಜೆ ಮಾಡುವೆವು ಎಂದು ಮಾಧ್ಯಮದ ಮೂಲಕ ಮನವಿ ಮಾಡಿದ್ದರು. ಅನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಡಿ ವಾಸ್ತವತೆ ಮನಗಂಡಿದ್ದರು.
Related Articles
Advertisement
ಶಾಸಕರ ವಿರುದ್ಧ ಆಕ್ರೋಶ: ತೊರೆಪಾಳ್ಯಗ್ರಾಮದ ಯುವಕನೊಬ್ಬ ಶಾಸಕರಿಗೆ ಕರೆ ಮಾಡಿ, ಸರ್ ನಾನು ನೆಲಮಂಗಲ ತಾಲೂಕಿನ ತೊರೆಪಾಳ್ಯ ಗ್ರಾಮದವನು. ನಮ್ಮ ಗ್ರಾಮದಲ್ಲಿ ರಸ್ತೆ ಸಮಸ್ಯೆ ನಿಮಗೆ ತಿಳಿದಿದೆ. ಸರಿ ಪಡಿಸಿ ಸರ್ ಎಂದು ಕೇಳಿರುವುದಕ್ಕೆ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಪ್ರತಿಕ್ರಿಯಿಸಿ ಮಾಧ್ಯಮದಲ್ಲಿ ತೋರಿಸಿ ಸುದ್ದಿ ಮಾಡಿದ್ದಾರಲ್ಲ, ಅವರ ಕೈಯಲ್ಲೇ ಮಾಡಿಸಿಕೊಳ್ಳಿ, ಮಾಧ್ಯಮದವರೇ ಬಂದು ಮಾಡುತ್ತಾರೆ ಡೋಂಟ್‌ವರಿ ಎಂದು ಹೇಳಿ ಕರೆ ಕಟ್ ಮಾಡಿರುವ ಆಡಿಯೋ ಜಾಲ ತಾಣದಲ್ಲಿ ವೈರಲ್ ಆಗಿದೆ.
ಇದಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ. ಸಮಸ್ಯೆ ವರದಿ ಮಾಡುವುದು ಮಾಧ್ಯಮದ ಕರ್ತವ್ಯ, ಹೋರಾಟ ಮಾಡಿ ಸಮಸ್ಯೆ ಬಗೆಹರಿಸುವಂತೆ ಕೇಳುವುದು ಸಂಘಟನೆಗಳ ಕರ್ತವ್ಯ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದು ಜನಪ್ರತಿನಿಧಿಯ ಕರ್ತವ್ಯ.
ಆದರೆ ಮಾಧ್ಯಮದವರೇ ಮಾಡಿಸಲಿ ಎಂಬ ಶಾಸಕರ ಬೇಜವಾಬ್ದಾರಿಯ ಹೇಳಿಕೆ ಸರಿಯಲ್ಲ, ಶಾಸಕರೇ ನಿಮ್ಮ ಕೈನಲ್ಲಿ ಆಗಲ್ಲ ಅಂದ್ರೆ ಹೇಳಿ ನಾವೇ ಭಿಕ್ಷೆಬೇಡಿ ರಸ್ತೆ ಮಾಡಿಸುತ್ತೇವೆ ಎಂದು ಕರ್ನಾಟಕ ಜನ ಸೈನ್ಯ, ಕರ್ನಾಟಕ ರಣಧೀರ ವೇದಿಕೆ ರಾಜ್ಯಾಧ್ಯಕ್ಷರು ಹಾಗೂ ರೈತಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಮಾನವಿಯತೆ ಮರೆತ ಶಾಸಕ ಗ್ರಾಮದ ಜನರ ಮನವಿಗೆ ಸ್ಪಂದಿಸಿ ಸ್ಥಳ ಪರಿಶೀಲನೆ ಮಾಡಿ ಕಾಮಗಾರಿ ಮಾಡಬೇಕಾಗಿದ್ದ ಶಾಸಕರು ದರ್ಪದ ಮಾತುಗಳನ್ನು ಹೇಳುವ ಜತೆ ಕಾಮಗಾರಿ ಮಾಡಲು ಮುಂದಾಗದಿ ರುವುದು ದುರಂತವೇ ಸರಿ. ಅಧಿಕಾರಕ್ಕಾಗಿ ಮತ ಕೇಳಲು ಬರುವ ಶಾಸಕರು ಸಮಸ್ಯೆಗಳಿಗೆ ಬೆನ್ನು ತೋರಿಸಿರೋದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.