Advertisement
ಅನ್‌ಲಾಕ್ 5.0 ಜಾರಿಯಲ್ಲಿದ್ದು, ಈಗಾಗಲೇಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ವ್ಯವಹಾರಗಳಿಗೆ ಅವಕಾಶ ನೀಡಲಾಗಿದೆ. ಆದರೆ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲು ಇನ್ನೂ ಅನುಮತಿ ನೀಡಿಲ್ಲ. ಗ್ರಂಥಾಲಯದ ನಿರ್ವಾಹಕರು ತಮ್ಮ ಸಿಬಂದಿಗೆ ಇನ್ನೂ ವೇತನ ನೀಡದ ಕಾರಣ ಗ್ರಂಥಪಾಲಕರಿಗೆ ಷರತ್ತುಬದ್ಧ ಅನುಮತಿ ನೀಡಬೇಕೆಂದು ಒತ್ತಾಯಿಸಿದರೆ, ಓದುಗರು ರಾಜ್ಯ ಸರಕಾರವು ಗ್ರಂಥಾಲಯಗಳನ್ನು ಬಹುಮುಖ್ಯವಾಗಿ ಸ್ವೀಕರಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ.
Related Articles
Advertisement
ಗ್ರಂಥಾಲಯಗಳನ್ನು ಪ್ರಾರಂಭಿಸಬೇಕು ಎಂದು ಓದುಗರು ಒತ್ತಾಯಿಸುತ್ತಾರೆ. ಕೆಲವು ವಿದ್ಯಾರ್ಥಿಗಳು ಪ್ರತಿದಿನ ವಾಚನಾಲಯದ ಹೊರಗೆ ಮೆಟ್ಟಿಲುಗಳ ಮೇಲೆ ಅಥವಾ ಕಾಲುದಾರಿಗಳಲ್ಲಿ ಕುಳಿತಿರುತ್ತಾರೆ. ಆದ್ದರಿಂದ, ಓದುಗರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಗ್ರಂಥಾಲಯಗಳನ್ನು ಪ್ರಾರಂಭಿಸಬೇಕು ಎಂದು ರಾಜ್ಯ ಗ್ರಂಥಾಲಯ ಸಂಘ’ದ ಮುಖ್ಯ ಕಾರ್ಯಕರ್ತ ಡಾ| ಗಜಾನನ್ ಕೊಟೆವಾರ್ ಅಭಿಪ್ರಾಯಪಟ್ಟಿದ್ದಾರೆ. ಗ್ರಂಥಾಲಯ ಆರಂಭ ಬಗ್ಗೆ ಆದರ್ಶ ಕಾರ್ಯ ವಿಧಾನ (ಎಸ್‌ಒಪಿ) ರೂಪಿಸಿ ಕಳೆದ ವಾರ ಅದನ್ನು ಉನ್ನತ ಶಿಕ್ಷಣ ಸಚಿವ ಉದಯ್ ಸಾಮಂತ್ ಮುಂದೆ ಪ್ರಸ್ತುತಪಡಿಸಿದಾಗ, ಅವರು ಗ್ರಂಥಾಲಯಗಳಿಗೆ ಅನು ಮತಿ ನೀಡಲು ಸಿದ್ಧರಾಗಿದ್ದರು. ಆದರೆ ಇದೀಗ ಸಚಿವರೇ ಸೋಂಕಿಗೆ ಗುರಿಯಾಗಿರುವುದ ರಿಂದ ಮುಂದೇನೆಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ನಮ್ಮಲ್ಲಿ ಕುಳಿತು ಓದುವ ಸೌಲಭ್ಯವಿಲ್ಲ, ಸದಸ್ಯರು ಬಂದು ಪುಸ್ತಕ ಪಡೆದು ಹೋಗುವುದರಿಂದ ಲೈಬ್ರರಿ ಕಾರ್ಯಾ ಚರಣೆಯಲ್ಲಿದೆ. ಸದಸ್ಯರಿಗೆ ಒಂದು ಬಾರಿಗೆ ಐದು ಪುಸ್ತಕ ನೀಡುತ್ತೇವೆ. ಅವರು ಐದರಿಂದ ಆರು ದಿನಗಳಲ್ಲಿ ಒಮ್ಮೆ ಲೈಬ್ರರಿಗೆ ಭೇಟಿ ನೀಡುತ್ತಾರೆ. ಮಾಸ್ಕ್ ಕಡ್ಡಾಯಗೊಳಿಸಿ ಸಾಮಾಜಿಕ ಅಂತರ ಪಾಲಿಸುತ್ತಿದ್ದೇವೆ. ಹಿರಿಯ ನಾಗರಿಕರಿಗೆ ಮನೆಗೇ ಪುಸ್ತಕ ಒದಗಿಸು ತ್ತೇವೆ, ವೆಬ್ ಸೈಟ್ ಮೂಲಕ ಪುಸ್ತಕಗಳ ಆನ್‌ಲೈನ್ ಡೆಲಿವರಿ ಸೌಲಭ್ಯವನ್ನೂ ಕಲ್ಪಿಸಿದ್ದೇವೆ. ಆನ್‌ಲೈನ್‌ನಲ್ಲಿ ಮುಂಬಯಿ, ಥಾಣೆ, ಪುಣೆ, ನಾಸಿಕ್‌ನಾದ್ಯಂತ ಸದಸ್ಯರಿಗೆ ಪುಸ್ತಕ ಪೂರೈಸಲಾಗುತ್ತಿದೆ. ಆನ್‌ಲೈನ್ ಸದಸ್ಯರಿಗೆ ಒಂದು ಬಾರಿಗೆ 6 ಪುಸ್ತಕಗಳನ್ನು ನೀಡುತ್ತಿದ್ದೇವೆ. ಪುಸ್ತಕಗಳನ್ನು ಹಿಂಪಡೆದ ಅನಂತರ ಎರಡು ದಿನಗಳವರೆಗೆ ಅವುಗಳನ್ನು ಪ್ರತ್ಯೇಕವಾಗಿಡುತ್ತೇವೆ ಮತ್ತು ಅವುಗಳನ್ನು ಸ್ಯಾನಿಟೈಸ್ ಮಾಡುತ್ತೇವೆ. ಲಾಕ್‌ಡೌನ್ ಅವಧಿಯಲ್ಲಿ ಓದುಗರಲ್ಲಿ ಆಸಕ್ತಿ ಹೆಚ್ಚಾಗಿದೆ. -ಪುಂಡಲೀಕ ಪೈ, ಮಾಲಕರು, ಪೈಸ್ ಫ್ರೆಂಡ್ಸ್ ಲೈಬ್ರರಿ, ಡೊಂಬಿವಲಿ
ಅಕ್ಷಿತ್ ಶೆಟ್ಟಿ