Advertisement

ಆ್ಯಪಲ್, ಗೂಗಲ್ ಸ್ಟೋರ್ ನಿಂದ PUBG ಔಟ್: ಈಗಾಗಲೇ Install ಆಗಿರುವ ಆ್ಯಪ್ ಕಥೆಯೇನು ?

02:36 PM Sep 04, 2020 | Mithun PG |

ನವದೆಹಲಿ: ಭಾರತ ಸರ್ಕಾರ ಪಬ್ ಜಿ ಸೇರಿದಂತೆ 118 ಚೀನಾ ಮೂಲದ ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಿತ್ತು. ಇದೀಗ ನಿಷೇಧವಾದ ಎರಡು ದಿನಗಳ ನಂತರ ಪಬ್ ಜಿ ಮೊಬೈಲ್ ಅಧಿಕೃತವಾಗಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೊರ್ ನಿಂದ ರಿಮೂವ್ ಆಗಿದೆ.

Advertisement

ಪಬ್ ಜಿ ಭಾರತದಲ್ಲಿ ಅತ್ಯಂತ ಜನಪ್ರಿಯ ಗೇಮಿಂಗ್ ಆ್ಯಪ್ ಆಗಿತ್ತು.  ಇದೀಗ ಆ್ಯಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಈ ಆ್ಯಪ್ ಅನ್ನು ಅಧಿಕೃತವಾಗಿ ತೆಗೆದುಹಾಕಲಾಗಿದ್ದು, ಅದಾಗ್ಯೂ ಈಗಾಗಲೇ ಇನ್ ಸ್ಟಾಲ್ ಆಗಿರುವ ಸ್ಮಾರ್ಟ್ ಪೋನ್ ಗಳಲ್ಲಿ ಆಡಬಹುದಾಗಿದೆ. ಇನ್ನು ಕೆಲವು ದಿನಗಳಲ್ಲಿ ಇದಕ್ಕೂ ಕೂಡ ಬ್ರೇಕ್ ಬೀಳಲಿದ್ದು ಇಂಟರ್ ನೆಟ್ ಸರ್ವಿಸ್ ಪ್ರೊವೈಡರ್ ಗಳು ಟಿಕ್ ಟಾಕ್ ಮಾದರಿಯಲ್ಲೇ ಬ್ಲಾಕ್ ಮಾಡಲಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ ಗೂಗಲ್ ಸರ್ಚ್ ನಲ್ಲಿ ಪಬ್ ಜಿ ಲಭ್ಯವಿದ್ದು  ಕೆಲವು ದಿನಗಳ ನಂತರ ಕ್ಲಿಯರ್ ಆಗುವ ಸಾಧ್ಯತೆಯಿದೆ. ಪಬ್ ಜಿಯೊಂದಿಗೆ ಪಬ್ ಜಿ ಲೈಟ್ ಕೂಡ ಪ್ಲೇ ಸ್ಟೋರ್ ನಿಂದ ರಿಮೂವ್ ಆಗಿದೆ.

ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುವ ಕಾರಣದಿಂದ ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ 59 ಮತ್ತು ಎರಡನೇ ಹಂತದಲ್ಲಿ 118 ಜನಪ್ರಿಯ ಆ್ಯಪ್ ಗಳನ್ನು ನಿಷೇಧ ಮಾಡಿತ್ತು ಈ ಎಲ್ಲಾ ಆಪ್ಲಿಕೇಷನ್ ಗಳು ಬಳಕೆದಾರರ ಡೇಟಾ ಕದ್ದು ಇತರ ದೇಶಗಳ ಸರ್ವರ್ ಗಳಿಗೆ ರವಾನಿಸುತ್ತಿದ್ದವು ಎಂದು ತಿಳಿದುಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next